ಕಲಬುರಗಿ: ಕಲ್ಯಾಣ ಕರ್ನಾಟಕ ಜನರ ಬಹುದಿನದ ಬೇಡಿಕೆಯಾಗಿರುವ ಕಲಬುರಗಿ ರಾತ್ರಿ ವಿಮಾನ ನಿಲ್ದಾಣ ಸಂಚಾರ ಶೀಘ್ರದಲ್ಲಿ ಆರಂಭವಾಗಲಿದೆ ಎಂದು ಕಲಬುರಗಿ ವಿಮಾನ ನಿಲ್ದಾಣದ ನಿರ್ದೇಶಕರಾದ ಮಹೇಶ ಚಿಲ್ಕಾ ತಿಳಿಸಿದರು.
ಕಲಬುರಗಿ ವಿಮಾನ ನಿಲ್ದಾಣದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾತ್ರಿ ವಿಮಾನ ಸಂಚಾರಕ್ಕೆ ಈಗಾಗಲೇ ಸಿದ್ಧತೆ ಭಾಗಶಃ ಪೂರ್ಣಗೊಂಡಿದ್ದು, ಈ ವಿಮಾನ ಸಂಚಾರಕ್ಕೆ ಅನುಮೋದನೆಗೆ ಕೇಂದ್ರಕ್ಕೆ ಕಳುಹಿಸಲಾಗಿದ್ದು, ಅನುಮೋದನೆ ಸಿಕ್ಕ ತಕ್ಷಣ ತಿಂಗಳಯೊಳಗಾಗಿ ರಾತ್ರಿ ಪಾಳಯದ ವಿಮಾನ ಸಂಚಾರಕ್ಕೆ ಚಾಲನೆ ನೀಡಲಾಗುವುದು ಎಂದರು.
ಎರಡು ವಿಶೇಷ ವಿಮಾನ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಒಟ್ಟು ಐದು ವಿಮಾನಗಳ ಸಂಚಾರಕ್ಕೆ ಆಯಾ ವಿಮಾನ ಸಂಸ್ಥೆಗಳ ಮುಖ್ಯಸ್ಥರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.
ವೈದ್ಯಕೀಯ ತುರ್ತು ಚಿಕಿತ್ಸೆಗೆ ಈ ರಾತ್ರಿ ವಿಮಾನ ಸಹಾಯಕಾರಿಯಾಗಲಿದೆ. ಮೊದಲ ಹಂತವಾಗಿ ಎರಡು ವಿಮಾನಗಳು ಎರಡು ವಿಮಾನ ಸಂಚಾರ ಮಾಡಲಾಗುತ್ತಿದ್ದು, ಕಲಬುರಗಿಯಿಂದ ಬೆಂಗಳೂರು, ತಿರುಪತಿಯಿಂದ ಮತ್ತು ಕಲಬುರಗಿಯಿಂದ ಇಂಡನ್(ದೆಹಲಿ) ಈ ಮಾರ್ಗಗಳಲ್ಲಿ ಸಂಚಾರ ಆರಂಭವಾಗಲಿದೆ ಎಂದರು.
ಪೈಲೆಟ್‌ಗಳಾದ ಕ್ಯಾಪ್ಟನ್ ಅನೂಪ್ ಕಾಚೂರ, ಶಕ್ತಿಸಿಂಗ್, ವಿಮಾನ ನಿರೀಕ್ಷಕ ರಾದ ದೇವೇಂದ್ರನಾಥ, ಆವಿನಾಶ ಯಾದವ, ನಿರ್ದೇಶಕ ನರಸಿಂಹ ಮೆಂಡನ್ ಇದ್ದರು.