ಮೊಗವೀರರಿಗೆ ಟಿಕೆಟ್‌ ನೀಡದಿದ್ದರೆ ಚುನಾವಣೆಯಲ್ಲಿ ನಿಷ್ಕ್ರೀಯ: ಎಚ್ಚರಿಕೆ

ಮೊಗವಿರ
Advertisement

ಮಂಗಳೂರು: ವಿಧಾನಸಭಾ ಚುನಾವಣೆಯಲ್ಲಿ ಮಂಗಳೂರು ಉತ್ತರ ಕ್ಷೇತ್ರದಲ್ಲಿ ಮೊಗವೀರ ಸಮುದಾಯಕ್ಕೆ ಬಿಜೆಪಿಯಿಂದ ಟಿಕೆಟ್ ನೀಡಲೇಬೇಕು. ಇಲ್ಲವಾದಲ್ಲಿ ಒಳನಾಡು ಮತ್ತು ಕರಾವಳಿ ಜಿಲ್ಲೆಯಲ್ಲಿರುವ ಸುಮಾರು ೭೦ ಲಕ್ಷ ಮತದಾರರು ಚುನಾವಣೆಯಲ್ಲಿ ನಿಷ್ಕ್ರೀಯವಾಗಲಿದೆ ಎಂದು ಮೊಗವೀರ ಬಂಧುಗಳು ಎಚ್ಚರಿಸಿದ್ದಾರೆ.
ನಗರದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮೊಗವೀರ ನಾಯಕ, ರಾಜ್ಯ ಬಿಜೆಪಿ ವಿಶೇಷ ಕಾಂiiಕಾರಿಣಿ ಸದಸ್ಯ ರಾಮಚಂದರ್ ಬೈಕಂಪಾಡಿ, ಕರಾವಳಿಯ ಮೂರು ಜಿಲ್ಲೆಯಲ್ಲಿ ೭೦ ವರ್ಷದಲ್ಲಿ ಉಡುಪಿಯ ಒಂದು ಕ್ಷೇತ್ರದಲ್ಲಿ ಬಿಜೆಪಿಯಿಂದ ಒಬ್ಬರು ಮಾತ್ರ ಶಾಸಕರಾಗಿದ್ದಾರೆ. ಮತ್ತೆ ಯಾರೂ ಆಗಿಲ್ಲ. ಈ ಆಕ್ರೋಶ ಈ ಚುನಾವಣೆಯಲ್ಲಿ ವ್ಯಕ್ತವಾಗಲಿದೆ. ೭೦ ವರ್ಷದಲ್ಲಿ ಬಿಜೆಪಿಯಲ್ಲಿ ಸಮುದಾಯದ ಒಬ್ಬನೇ ಶಾಸಕರಾಗಿದ್ದು ಬಿಟ್ಟರೆ ಬೇರಾರೂ ಆಗಿಲ್ಲ. ಪ್ರತಿಭಟನೆಯನ್ನು ಕೂಡ ಇಷ್ಟೂ ವರ್ಷ ಸಮುದಾಯ ಮಾಡಿಲ್ಲ. ಮೀನುಗಾರರಿಗೆ ಬಹುದೊಡ್ಡ ದೇವಾಲಯ ಉಚ್ಚಿಲದಲ್ಲಿ ನಿರ್ಮಾಣ ಆಗಿದೆ ಅದಕ್ಕೆ ಬಿಜೆಪಿ ಸರ್ಕಾರವನ್ನು ಅಭಿನಂದಿಸುತ್ತೇವೆ. ಆದರೆ ಮೀನುಗಾರ ಸಮುದಾಯವನ್ನು ನಿರ್ಲಕ್ಷ್ಯ ಮಾಡಬಾರದು ಎಂದರು.
ಚುನಾವಣೆಯಲ್ಲಿ ಮೊಗವೀರ ಸಮುದಾಯಕ್ಕೆ ಕರಾವಳಿಯ ಮೂರು ಜಿಲ್ಲೆಗಳಲ್ಲಿ ತಲಾ ಒಂದು ಸ್ಥಾನ ನೀಡಬೇಕು. ಮಂಗಳೂರು ಉತ್ತರ ಮತ್ತು ಮಂಗಳೂರಿನಲ್ಲಿ ಮೊಗವೀರರನ್ನು ಅಭ್ಯರ್ಥಿ ಮಾಡಬೇಕು. ಮಾಡದಿದ್ದರೆ ರಾಜ್ಯದಲ್ಲಿ ಮೀನುಗಾರ ಸನುದಾಯವನ್ನು ಜಾಗೃತಗೊಳಿಸಿ ಸಮುದಾಯವನ್ನು ಚುನಾವಣೆಯಲ್ಲಿ ನಿಷ್ಕ್ರಿಯವಾಗಲಿದ್ದೇವೆ. ನಮ್ಮ ನೋವನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ. ಪಿ. ನಡ್ಡಾಗೆ, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್‌ಗೆ ಅಧಿಕೃತವಾಗಿ ರವಾನಿಸುತ್ತೇವೆ ಎಂದು ತಿಳಿಸಿದರು.
ಮೊಗವೀರ ಸಮುದಾಯಕ್ಕೆ ಆಗಿರುವ ವಂಚನೆಗೆ ತೀಕ್ಷ್ಣ ಉತ್ತರ ನೀಡುತ್ತೇವೆ. ಮಂಗಳೂರು ಉತ್ತರ ನಮ್ಮ ಹಕ್ಕಿನ ಕ್ಷೇತ್ರ. ೨೦ ವರ್ಷ ಈ ಕ್ಷೇತ್ರ ನಮ್ಮಿಂದ ದೂರವಾಗಿದೆ. ಈ ಬಾರಿ ಬಿಡುವ ಮಾತೇ ಇಲ್ಲ.
ಉತ್ತರಕ್ಕೆ ನಾನು ಬಿಜೆಪಿ ಟಿಕೆಟ್ ಅಪೇಕ್ಷಿತ. ಇನ್ನೂ ಸಾಕಷ್ಟು ಅವಕಾಶ ಇದೆ. ಕೊನೆವರೆಗೂ ಹೋರಾಟ ಮಾಡಲಿದ್ದೇವೆ. ೨ ಬಾರಿ ಸ್ಪರ್ಧಿಸಿದ್ದೇನೆ. ಮುಖ್ಯಮಂತ್ರಿಗಳು ನೀಡಿದ ಭರವಸೆಯಂತೆ ಟಿಕೆಟ್ ಕೊಡಲೇಬೇಕು. ಇಲ್ಲದಿದ್ದರೆ ಚುನಾವಣೆಯನ್ನೇ ಬಹಿಷ್ಕರಿಸುತ್ತೇವೆ ಎಂದರು.
ಕರಾವಳಿಯ ಮೂರು ಜಿಲ್ಲೆಗಳಲ್ಲಿ ಎಲ್ಲಾ ರಾಷ್ಟ್ರೀಯ ರಾಜಕೀಯ ಪಕ್ಷಗಳು ಕರ್ನಾಟಕ ರಾಜ್ಯದ ಮೀನುಗಾರ ಸಮಾಜವನ್ನು ರಾಜಕೀಯ ಸ್ಥಾನಮಾನ ನೀಡುವುದರಲ್ಲಿ ವಂಚನೆ ಮಾಡಿದೆ. ಕರ್ನಾಟಕ ರಾಜ್ಯದಲ್ಲಿ ಸಮಸ್ತ ಮೀನುಗಾರ ಸಮಾಜವು ಈ ಬಾರಿ ತಮ್ಮ ಚುನಾವಣಾ ಆಕ್ರೋಶವನ್ನು ವ್ಯಕ್ತಪಡಿಸಲಿದ್ದಾರೆ. ಕರ್ನಾಟಕ ಕರಾವಳಿಯ ಮೀನುಗಾರರು ಕಳೆದ ೭೦ ವರ್ಷಗಳಿಂದ ಹಿಂದುತ್ವ ಆಧಾರದಲ್ಲಿ ಶೇಕಡ ೮೦ರಷ್ಟು ಮತವನ್ನು ಬಿಜೆಪಿಗೆ ಚಲಾಯಿಸಿದ್ದಾರೆ. ಆದರೂ ಈವರೆಗೆ ಈ ಸಮಾಜಕ್ಕೆ ರಾಜಕೀಯವಾಗಿ ಯಾವುದೇ ಸ್ಥಾನಮಾನ ನೀಡಲಾಗಿಲ್ಲ. ಮೊಗವೀರ ಸಮುದಾಯಕ್ಕೆ ಇದ್ದ ಮೀನುಗಾರಿಕಾ ನಿಗಮದ ಅಧ್ಯಕ್ಷತೆಯನ್ನು ಕೂಡಾ ಬೇರೆ ಸಮಾಜಕ್ಕೆ ನೀಡಿ ನಮಗೆ ಅನ್ಯಾಯ ಮಾಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ೪ ವಿಧಾನಸಭಾ ಕ್ಷೇತ್ರದಲ್ಲಿ ಪ್ರಭಾವಿ ಮೀನುಗಾರರು ಬಿಜೆಪಿ ಕಡೆಗಿದ್ದರೂ ಕಳೆದ ೬೦ ವರ್ಷಗಳಲ್ಲಿ ಯಾವುದೇ ಎಂ.ಎಲ್.ಸಿಯನ್ನು ನೀಯೋಜಿಸಿಲ್ಲ. ಅದರಂತೆ ಸೂಕ್ತ ಮೀನುಗಾರ ನಿಗಮವನ್ನು ಕೂಡಾ ಈ ಸಮಾಜಕ್ಕೆ ನೀಡಿಲ್ಲ. ೧೯೮೯ರ ವರೆಗೆ ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರ ೧೯೮೯ರ ವರೆಗೆ ಮಂಗಳೂರಿನ ಸಂಪ್ರದಾಯ ಮೀನುಗಾರರೇ ಬಿಜೆಪಿಯಲ್ಲಿ ಸ್ಪರ್ಧಿಸಿದ್ದರು ಎಂದು ತಿಳಿಸಿದರು.‌ ಮೀನುಗಾರ ಮುಂದಾಳುಗಳಾದ ಬಾಬು ಬಂಗೇರ, ಮುರಳೀರಾಜ್ ಉಚ್ಚಿಲ್, ಸುಕೇಶ್ ಜಿ. ಕೆ. ಉಚ್ಚಿಲ್, ನವೀನ್, ಜಗದೀಶ್ ಮೊದಲಾದವರಿದ್ದರು.