ಅಪ್ರಾಪ್ತೆಯರ ಗರ್ಭಧಾರಣೆ ಪ್ರಕರಣದಲ್ಲಿ ಹೆಚ್ಚಳ

ಅಪ್ರಾಪ್ತೆ
Advertisement

ಪಣಜಿ: ಗೋವಾದಲ್ಲಿ ಅಪ್ರಾಪ್ತ ಬಾಲಕಿಯರ ಗರ್ಭಧಾರಣೆ ಪ್ರಮಾಣ ಹೆಚ್ಚಾಗಿದೆ. ಈ ಹಿಂದೆ, ಪ್ರತಿ ಆರು ತಿಂಗಳಿಗೊಮ್ಮೆ ಒಂದು ಅಥವಾ ಎರಡು ಪ್ರಕರಣಗಳು ವರದಿಯಾಗುತ್ತಿದ್ದವು, ಆದರೆ ಈಗ ಪ್ರತಿ ತಿಂಗಳು ಎರಡಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗುತ್ತಿವೆ ಎಂದು ವಿಕ್ಟಿಮ್ ಅಸಿಸ್ಟೆನ್ಸ್ ಯುನಿಟ್(ವಿಎಯು) ಉಸ್ತುವಾರಿ ಎಮಿಡಿಯೊ ಪಿನ್ಹೋ ಮಾಹಿತಿ ನೀಡಿದ್ದಾರೆ.
ಗೋವಾದಲ್ಲಿ ವಿಕ್ಟಿಮ್ ಅಸಿಸ್ಟೆನ್ಸ್ ಯುನಿಟ್ ತಿಂಗಳಿಗೆ ಸರಾಸರಿ ಅಪ್ರಾಪ್ತ ಬಾಲಕಿಯರ ಎರಡು ಗರ್ಭಧಾರಣೆಯ ಪ್ರಕರಣಗಳನ್ನು ದಾಖಲಿಸಿದೆ. ಆರು ತಿಂಗಳ ಮೊದಲು, ಅಂತಹ ಪ್ರಕರಣಗಳ ಸಂಖ್ಯೆ ಪ್ರತಿ ಆರು ತಿಂಗಳಿಗೊಮ್ಮೆ ಒಂದು ಅಥವಾ ಎರಡು ಆಗಿತ್ತು. ಅಪ್ರಾಪ್ತ ಬಾಲಕಿಯರ ಇಂತಹ ಪ್ರಕರಣಗಳಲ್ಲಿ ತಿಂಗಳ ನಂತರ ಕಿಬ್ಬೊಟ್ಟೆಯ ನೋವಿನ ಬಗ್ಗೆ ದೂರು ನೀಡಿದ್ದಾರೆ. ಆ ನಂತರ ಹುಡುಗಿಯರನ್ನು ವೈದ್ಯರ ಬಳಿಗೆ ಕರೆದೊಯ್ದಾಗ ಗರ್ಭಧರಿಸಿರುವುದು ತಿಳಿದು ಬಂದಿದೆ. ನಂತರ ಕೌನ್ಸಿಲಿಂಗ್‌ಗಾಗಿ ಹುಡುಗಿಯರನ್ನು ವಿಎಯುಗೆ ಕರೆತರಲಾಗಿದೆ. ಇದಕ್ಕೆ ಕಾರಣೀಕರ್ತ ಅಪರಾಧಿಗಳು ೩೦ ರಿಂದ ೪೦ ವರ್ಷ ವಯಸ್ಸಿನವರು ಮತ್ತು ಶೇ. ೯೫ರಷ್ಟು ಪ್ರಕರಣಗಳಲ್ಲಿ ಕುಟುಂಬದ ಪುರುಷ ಸದಸ್ಯರು ಅಥವಾ ನೆರೆಹೊರೆಯವರು, ಕುಟುಂಬದ ಸ್ನೇಹಿತರು, ಪರಿಚಯಸ್ಥರು ಮತ್ತು ಸಂಬಂಧಿಕರ ಸ್ನೇಹಿತರಾಗಿದ್ದಾರೆ. ಹಲವು ಪ್ರಕರಣಗಳಲ್ಲಿ ಬಾಡಿಗೆದಾರರೂ ಭಾಗಿಯಾಗಿರುವುದು ಕಂಡು ಬಂದಿದೆ ಎನ್ನಲಾಗಿದೆ.
ತಮ್ಮ ಅಪ್ರಾಪ್ತ ಮಗಳು ಗರ್ಭಿಣಿಯಾಗಿದ್ದಾಳೆ ಎಂದು ತಿಳಿದು ಪೋಷಕರು ಆಘಾತಕ್ಕೊಳಗಾಗುತ್ತಾರೆ, ಆದರೆ ಅಪರಾಧಿ ಸುಲಭವಾಗಿ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಹದಿಹರೆಯದ ಗರ್ಭಿಣಿ ಹುಡುಗಿಯರನ್ನು ನಮ್ಮ ಬಳಿಗೆ ಕರೆತಂದಾಗ, ಅವರಿಗೆ ಕೌನ್ಸಿಲಿಂಗ್ ನಡೆಸಲಾಗುತ್ತದೆ ಎಂದು ವಿಕ್ಟಿಮ್ ಅಸಿಸ್ಟೆನ್ಸ್ ಯುನಿಟ್ (ವಿಎಯು) ಉಸ್ತುವಾರಿ ಎಮಿಡಿಯೊ ಪಿನ್ಹೋ ಪಣಜಿಯಲ್ಲಿ ಮಾಧ್ಯಮಗಳಿಗೆ ಮಾಹಿತಿ ನೀಡಿದರು.