ಶಿಗ್ಗಾವಿ ಸ್ಫರ್ಧೆಗೆ ತೆರೆ ಎಳೆದ ೨ನೇ ಪಟ್ಟಿ

Advertisement

ಹುಬ್ಬಳ್ಳಿ : ಕಾಂಗ್ರೆಸ್ ವಿಧಾನಸಭಾ ಕ್ಷೇತ್ರಕ್ಕೆ ಸ್ಪರ್ಧಿಸಲಿರುವ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಗುರುವಾರ ಬಿಡುಗಡೆ ಮಾಡಿದ್ದು, ಜಿಲ್ಲೆಯ ಧಾರವಾಡ ಕ್ಷೇತ್ರಕ್ಕೆ ನಿರೀಕ್ಷೆಯಂತೆ ವಿನಯ್ ಕುಲಕರ್ಣಿ, ಕಲಘಟಗಿ ಕ್ಷೇತ್ರಕ್ಕೆ ಸಂತೋಷ ಲಾಡ್‌ಗೆ ಟಿಕೆಟ್ ನೀಡಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸತತವಾಗಿ ಆಯ್ಕೆಯಾಗುತ್ತ ಬಂದಿರುವ ಶಿಗ್ಗಾವಿ ಕ್ಷೇತ್ರದಿಂದ ವಿನಯ್ ಅವರನ್ನು ಆ ಕ್ಷೇತ್ರಕ್ಕೆ ಕಣಕ್ಕಿಳಿಸಲು ಪಕ್ಷದ ರಾಜ್ಯ ಮುಖಂಡರು ಜಾತಿ ಮತ ಲೆಕ್ಕಾಚಾರದಲ್ಲಿ ಚಿಂತನೆ ನಡೆಸಿದ್ದರು.
ಮುಖ್ಯಮಂತ್ರಿ ಗೆಲುವಿನ ಓಟಕ್ಕೆ ಬ್ರೇಕ್ ಹಾಕಲು ಪ್ರಭಾವಿ ಅಭ್ಯರ್ಥಿ ಎಂದರೆ ವಿನಯ್ ಕುಲಕರ್ಣಿ ಒಬ್ಬರೆ, ಜಾತಿ ಬಲವೂ ಇದೆ ಎಂಬ ಲೆಕ್ಕಾಚಾರ ಪಕ್ಷದ ನಾಯಕರು ಮಾಡಿದ್ದರು.
ಆದರೆ, ವಿನಯ್ ಕುಲಕರ್ಣಿ ಅವರು ಮಾತ್ರ ತಾವು ಶಿಗ್ಹಾವಿ ಕ್ಷೇತ್ರದಲ್ಲಿ ಸ್ಪರ್ಧಿಸುವ ಬಗ್ಗೆ ಹೇಳಿಕೊಂಡಿರಲಿಲ್ಲ. ಬದಲಾಗಿ ಆ ಕ್ಷೇತ್ರದಲ್ಲಿ ಹಿಂದೆ ಆಯ್ಕೆಯಾದ ಅಜ್ಜಂಪೀರ ಖಾದ್ರಿ ಇದ್ದಾರೆ. ಪ್ರಬಲ ಇತರ ಮುಖಂಡರು ಅಲ್ಲಿಯೇ ಇದ್ದಾರೆ. ಹೀಗಾಗಿ ಶಿಗ್ಗಾವಿ ಕ್ಷೇತ್ರಕ್ಕೆ ಸ್ಪರ್ಧೆ ಮಾಡುವುದು ವೈಯಕ್ತಿಕವಾಗಿ ಆಸಕ್ತಿ ಇಲ್ಲ. ಪಕ್ಷ ಅಂತಿಮವಾಗಿ ಏನು ಹೇಳುತ್ತದೆ ಅದನ್ನು ಮಾಡಬೇಕಾಗುತ್ರದೆ.ನೋಡೋಣ. ಆದರೆ, ನಾನು ಟಿಕೆಟ್ ಕೇಳಿರುವುದು ಧಾರವಾಡ ಕ್ಷೇತ್ರಕ್ಕೆ ಮಾತ್ರ ಎಂದು ಹೇಳಿದ್ದರು.
ಹೀಗಾಗಿ, ಅವರ ಆಶಯದಂತೆ ಧಾರವಾಡ ಕ್ಷೇತ್ರಕ್ಕೆ ಅವರಿಗೆ ಟಿಕೆಟ್ ಲಭಿಸಿದೆ.
ಇನ್ನು ಕಲಘಟಗಿ ಕ್ಷೇತ್ರದ ಟಿಕೆಟ್ ಗೆ ಮಾಜಿ ಸಚಿವ ಸಂತೋಷ ಲಾಡ್ ಹಾಗೂ ವಿಧಾನ ಪರಿಷತ್ ಮಾಜಿ ಸದಸ್ಯ ನಾಗರಾಜ ಛಬ್ಬಿ, ಬಂಗಾರೇಶ ಹಿರೇಮಠ ನಡುವೆ ಪೈಪೋಟಿ ಇತ್ತು. ಛಬ್ಬಿ ಡಿ.ಕೆ.ಶಿವಕುಮಾರ ಮೇಲೆ ಪ್ರಭಾವ ಬೀರಿ ಟಿಕೆಟ್ ಗಿಟ್ಟಿಸುವ ತಂತ್ರಗಾರಿಕೆ ಮಾಡಿದ್ದರೆ ಸಂತೋಷ ಲಾಡ್ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಮೂಲಕ ಟಿಕೆಟ್ ಪಡೆಯುವ ಪ್ರಯತ್ನ ಮಾಡಿದ್ದರು. ಪ್ರಜಾಧ್ವನಿ ಕಾರ್ಯಕ್ರಮವನ್ನು ಲಾಡ್ ಒಬ್ಬರೇ ಆಯೋಜನೆ ಮಾಡಿದ್ದರು. ಆದರೆ,ಮಳೆ ಬಂದು ಕಾರ್ಯಕ್ರಮ ರದ್ದಾಗಿತ್ತು.
ಇದನ್ನ ಸಕಾರಸತ್ಮಕವಾಗಿ ತೆಗೆದುಕೊಂಡ ಲಾಡ್, ಮಳೆ ಬಂದಿದೆ. ಇದು ನನಗೆ ಶುಭಸೂಚನೆ. ಪ್ರಜಾದ್ವನಿ ಯಶ ಕಂಡಿದೆ. ಮಳೆರಾಯ ಆಶೀರ್ವಾದ ಮಾಡಿದ್ದಾನೆ ಎಂದಿದ್ದರು. ಬಳಿಕ ಕಲಘಟಗಿ ತಮ್ಮ ಮನೆ ಮುಂದೆಯೇ ಸಿದ್ದರಾಮಯ್ಯ ಅವರ ಕಡೆಯಿಂದ ನೆರೆದ ಜನಸ್ತೋಮವನ್ನುದ್ದೇಶಿಸಿ ಮಾತನಾಡಿಸಿದ್ದರು. ಲಾಡ್ ಅವರ ಧೋರಣೆಗೆ ಛಬ್ಬಿ ಮತ್ತು ಬಂಗಾರೇಶ್ ಆಕ್ರೋಶ ಹೋರಹಾಕಿದ್ದರುಮ ಒನ್ ಮ್ಯಾನ್ ಶೋ ಎಂಬ ಟೀಕೆಯೂ ಲಾಡ್ ಬಗ್ಗೆ ವ್ಯಕ್ತವಾಗಿತ್ತು. ಈ ಎಲ್ಲ ಬೆಳವಣಿಗೆ ಹಿನ್ನೆಲೆಯಲ್ಲಿ ಕಲಘಟಗಿ ಕ್ಷೇತ್ರದ ಕೈ ಟಿಕೆಟ್ ಯಾರಿಗೆ ಎಂಬ ಕುತೂಹಲ ಸೃಷ್ಟಿಸಿತ್ತು, ಎರಡನೇ ಲಿಸ್ಟ್ ನಲ್ಲಿ ಅದಕ್ಕೆ ತೆರೆ ಬಿದ್ದಿದೆ. ಛಬ್ಬಿ ಮತ್ತು ಬಂಗಾರೇಶ ಹಿರೇಮಠ ಮುಂದಿನ ನಡೆ ಏನು ಎಂಬುದನ್ನು ಕಾದು ನೋಡಬೇಕಿದೆ.