ಮುರುಘಾಶ್ರೀಗಳಿಗೆ ಮತ್ತೆ ಮೆಡಿಕಲ್​ ಟೆಸ್ಟ್

Advertisement

ಚಿತ್ರದುರ್ಗ : ಮುರುಘಾಶ್ರೀಗಳಿಗೆ ಮತ್ತೆ ಮೆಡಿಕಲ್​ ಟೆಸ್ಟ್​ ನಡೆಸಲಾಗುತ್ತಿದ್ದು, ಪೊಲೀಸರು DySP ಕಚೇರಿಯಿಂದ ಆಸ್ಪತ್ರೆಗೆ ಕರೆತಂದಿದ್ದಾರೆ. ವಿಧಿ ವಿಜ್ಞಾನ ತಜ್ಞರಾದ ಡಾ.ವೇಣು ಟೀಂನಿಂದ ಶ್ರೀಗಳಿಗೆ ಪುರುಷತ್ವ ಪರೀಕ್ಷೆ ನಡೆಸಲಾಗುತ್ತದೆ.

ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಗೆ ಪೊಲೀಸರು ಮುರುಘಾಶ್ರೀಗಳನ್ನು ಕರೆತಂದಿದ್ದಾರೆ. ಜಿಲ್ಲಾ ಸರ್ಜನ್ ಡಾ.ಬಸವರಾಜ್ ಕೂಡಾ ಆಗಮಿಸಿದ್ಧಾರೆ. ನಿನ್ನೆ ಶರಣರ ರಕ್ತ ಮಾದರಿ ಸಂಗ್ರಹಿಸಲಾಗಿತ್ತು. ಉಗುರು ಹಾಗೂ ಕೂದಲು ಮಾದರಿ ಸಂಗ್ರಹಿಸಲಾಗಿತ್ತು, ರಕ್ತ, ಕೂದಲು, ಉಗುರು ಮಾದರಿಗಳು FSLಗೆ ರವಾನೆ ಮಾಡಿದೆ.