ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಶಾಂತಗಿರಿ

ಬಾಗಲಕೋಟೆ
Advertisement

ಬಾಗಲಕೋಟೆ: ಹಾಲುಮತ ಸಮಾಜದ ರಾಜ್ಯ ಉಪಾಧ್ಯಕ್ಷ, ಕೆಪಿಸಿಸಿ ಮಾಜಿ ಕಾರ್ಯದರ್ಶಿ ಎಂ.ಎಲ್.ಶಾಂತಗಿರಿ ಅವರು ಹುನಗುಂದ ಶಾಸಕ ದೊಡ್ಡನಗೌಡ ಪಾಟೀಲ ಅವರ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಗೊಂಡಿದ್ದಾರೆ.
ಹುನಗುಂದ ಕ್ಷೇತ್ರದ ಕಾಂಗ್ರೆಸ್ ಆಕಾಂಕ್ಷಿಯಾಗಿದ್ದ ಅವರು ಹುನಗುಂದದ ಮಾಜಿ ಶಾಸಕ, ಕಾಂಗ್ರೆಸ್ ಅಭ್ಯರ್ಥಿ ವಿಜಯಾನಂದ ಕಾಶಪ್ಪನವರ ಅವರೊಂದಿಗೆ ಮುನಿಸಿಕೊಂಡಿದ್ದರು. ಈಗ ಶಾಸಕ ದೊಡ್ಡನಗೌಡ ಪಾಟೀಲ ನೇತೃತ್ವದಲ್ಲಿ ಬಿಜೆಪಿ ಸೇರ್ಪಡೆ ಆಗಿದ್ದಾರೆ. ಅವರೊಂದಿಗೆ ಹುನಗುಂದ ಪಿಕೆಪಿಎಸ್ ಮುತ್ತಣ್ಣ ಹಂಡಿ ಅವರು ಸಹ ಇದೇ ಸಂದರ್ಭದಲ್ಲಿ ಬಿಜೆಪಿ ಸೇರ್ಪಡೆಗೊಂಡರು.
ಬಾಗಲಕೋಟೆ ಸುದ್ದಿ ಗೋಷ್ಠಿಯಲ್ಲಿ ಶಾಂತಗಿರಿ, ಹಂಡಿ ಅವರನ್ನು ಪಕ್ಷಕ್ಕೆ ಸೇರ್ಪಡೆಗೊಂಡು ಮಾತನಾಡಿದ ಶಾಸಕ ದೊಡ್ಡನಗೌಡ ಪಾಟೀಲ ಅವರು, ಇಬ್ಬರು ಈ ಮೊದಲು ಬಿಜೆಪಿಯಲ್ಲಿದ್ದವರು ಕಾರಣಾಂತರದಿಂದ ಕಾಂಗ್ರೆಸ್ಸಿಗೆ ಹೋಗಿದ್ದರು, ಗುಡೂರು ಜಿಪಂದಲ್ಲಿ ಶಾಂತಗಿರಿ ಅವರ ‌ಪತ್ನಿ ಸದಸ್ಯೆ ಆಗಿದ್ದರು ರಾಷ್ಟ್ರೀಯತೆ, ಮೋದಿ ಅವರ ಕೆಲಸ ಮೆಚ್ಚಿ ಬಿಜೆಪಿ ಬಂದಿದ್ದಾರೆ ಎಂದರು. ಎಂ.ಎಲ್.ಶಾಂತಗಿರಿ ಅವರು ಮಾತನಾಡಿ, ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ದುರಹಂಕಾರ, ಕೆಟ್ಟ ನಡುವಳಿಕೆಯಿಂದ ಬೇಸತ್ತು ಬಿಜೆಪಿ ಸೇರಿರುವುದಾಗಿ ಹೇಳಿದರು. ಡಿಸಿಸಿ ಬ್ಯಾಂಕ್ ನಿರ್ದೇಶಕ ಮಾಡ್ತೀನಿ ಎಂದು ಕಾಶಪ್ಪನವರ ಅವರು ನಂಬಿಸಿ ೩೦ ಲಕ್ಷ ರೂ. ಪಡೆದರು, ನಂತರ ನನ್ನಕ್ಕಿಂತ ಹೆಚ್ಚಿನ ಮೊತ್ತ ಪಡೆದವರನ್ನು ಚುನಾವಣೆಗೆ ನಿಲ್ಲಿಸಿದರು. ಮಹಾಂತಗೌಡ ಪಾಟೀಲ, ಬಸವರಾಜ ನಾಡಗೌಡ ಮತ್ತಿತರರು ಇದ್ದರು.