ಅವಳಿ ತಾಲೂಕಿಗೆ ಪ್ರಥಮ ಸ್ಥಾನ ಗಳಿಸಿದ ಶಕುಂತಲಾ

ಶಕುಂತಲಾ
Advertisement

ಇಳಕಲ್: ಸಂಪೂರ್ಣವಾಗಿ ಗ್ರಾಮೀಣ ಪ್ರದೇಶದ ಯುವತಿಯೊಬ್ಬಳು ಪಿಯು ವಿಜ್ಞಾನ ವಿಭಾಗದಲ್ಲಿ ಹುನಗುಂದ ಇಳಕಲ್ ಅವಳಿ ತಾಲೂಕಿಗೆ ಪ್ರಥಮ ಸ್ಥಾನ ಗಳಿಸಿ ಗಮನ ಸೆಳೆದಿದ್ದಾಳೆ. ಇಲ್ಲಿನ ಸ್ಪಂದನ ವಿದ್ಯಾವರ್ಧಕ ಸಂಘದ ಸ್ಪಂದನ ಪಿಯು ವಿಜ್ಞಾನ ಕಾಲೇಜಿನಲ್ಲಿ ಓದಿರುವ ಇಳಕಲ್ ತಾಲೂಕಿನ ತಾರಿವಾಳ ಗ್ರಾಮದ ವಿದ್ಯಾರ್ಥಿನಿ ಶಕುಂತಲಾ ಪಾಟೀಲ ದ್ವಿತೀಯ ವರ್ಷದ ಪಿಯುದಲ್ಲಿ ೬೦೦ ಕ್ಕೆ ೫೭೯ ಅಂಕ ಗಳಿಸಿದ್ದಾಳೆ. ಕನ್ನಡ ೯೮ , ಇಂಗ್ಲೀಷ್ ೯೦ , ಫಿಜಿಕ್ಸ್ ೯೭, ಕೆಮಿಸ್ಟ್ರಿ ೯೬ , ಗಣಿತ ೯೯, ಬಯೋಲಾಜಿ ೯೯ ರಂತೆ ಒಟ್ಟು ೫೭೯ ಅಂಕ ಗಳಿಸಿ ಕಾಲೇಜಿನ ಮತ್ತು ತನ್ನ ಗ್ರಾಮದ ಕೀರ್ತಿಯನ್ನು ಹೆಚ್ಚಿಸಿದ್ದಾಳೆ. ಎಸ್ ಎಸ್ ಎಲ್ ಸಿ ವರೆಗೆ ಕನ್ನಡ ಮಾಧ್ಯಮದಲ್ಲಿ ಓದಿದ್ದ ಈ ಗ್ರಾಮೀಣ ಪ್ರತಿಭೆಯ ತಂದೆ ಶೇಖರಗೌಡ ಪಾಟೀಲ ಇಳಕಲ್ ಬಸ್ ಘಟಕದಲ್ಲಿ ಮೆಕ್ಯಾನಿಕ್ ಆಗಿ ಕೆಲಸ ‌ಮಾಡುತ್ತಿದ್ದು ಶಕುಂತಲಾ ಪ್ರತಿದಿನ ಬಸ್ ಮೂಲಕ ಗ್ರಾಮಕ್ಕೆ ಹೋಗಿ ಬಂದು ಈ ಸಾಧನೆ ಮಾಡಿದ್ದು ಕಾಲೇಜು ಪ್ರಾಚಾರ್ಯ ಅಮರೇಶ ಕೌದಿ ವಿದ್ಯಾರ್ಥಿನಿಗೆ ತುಂಬು ಹೃದಯದಿಂದ ಅಭಿನಂದಿಸಿ ಶುಭ ಹಾರೈಸಿದ್ದಾರೆ.