ಸಮಾನತೆಯ ಬೆಳಕು ತೋರಿದ ಬಸವೇಶ್ವರರು: ರಾಹುಲ್ ಬಣ್ಣನೆ

Advertisement

ಬಾಗಲಕೋಟೆ: ಅಂದು ಸಮಾಜದಲ್ಲಿ ನಡೆಯುತ್ತಿದ್ದ ಶೋಷಣೆ, ತಪ್ಪುಗಳನ್ನು ಪ್ರಶ್ನಿಸಿ ಸಮಾಜದ ಅಂಕು ಡೊಂಕುಗಳನ್ನು ತಿದ್ದಲು ಶ್ರಮಿಸಿದ ಜಗಜ್ಯೋತಿ ಶ್ರೀ ಬಸವೇಶ್ವರರು ಕತ್ತಲು ಆವರಿಸಿದ್ದ ಸಮಾಜಕ್ಕೆ ಬೆಳಕಿನ ದಾರಿ ತೋರಿದರು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬಣ್ಣಿಸಿದ್ದಾರೆ.
ಕೂಡಲಸಂಗಮದಲ್ಲಿ ಬಸವ ಧರ್ಮಪೀಠದಿಂದ ಹಮ್ಮಿಕೊಂಡಿದ್ದ ಬಸವ ಜಯಂತಿ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬಸವಣ್ಣನವರು ಅಸಮಾನತೆಯನ್ನು ಖಂಡಿಸಿ ಸಮಾನತೆಗಾಗಿ ಶ್ರಮಿಸಿದರು ಎಂದು ಹೇಳಿದರು.
ಶೋಷಣೆ, ಅಸಮಾನತೆ ವಿರುದ್ಧ ಧ್ವನಿ:
ಮತ್ತೊಬ್ಬರನ್ನು ಪ್ರಶ್ನೆ ಮಾಡುವುದು ಅತಿ ಸುಲಭದ ಕೆಲಸ, ತನ್ನನ್ನು ತಾನು ಪ್ರಶ್ನೆ ಮಾಡಿಕೊಳ್ಳುವುದು ಅತೀ ಕಷ್ಟದ ಕೆಲಸ ಆದರೆ ಬಸವಣ್ಣನವರು ತಮ್ಮನ್ನು ತಾವು ಪ್ರಶ್ನಿಸಿಕೊಳ್ಳುವ ಕೆಲಸ ಮಾಡುತ್ತಲೇ ಸಮಾಜಕ್ಕೆ ಬೆಳಕು ನೀಡುವ ಕೆಲಸ ಮಾಡಿದರು. ಶೋಷಣೆ, ಅಸಮಾನತೆ ವಿರುದ್ಧ ಧ್ವನಿ ಎತ್ತಿ ಪ್ರಜಾಪ್ರಭುತ್ವ ಕಾಪಾಡುವ ಮಹತ್ವದ ಕೆಲಸವನ್ನು ಮಾಡಿದ್ದಾರೆ ಎಂದು ರಾಹುಲ್ ಹೇಳಿದರು.
ಪ್ರಜಾಪ್ರಭುತ್ವ, ಸಂಸತ್ತಿಗೆ ಬಸವಣ್ಣನವರು ಪ್ರೇರಣೆಯಾಗಿದ್ದಾರೆ. ಅವರು ತಮ್ಮ ೮ನೇ ವಯಸ್ಸಿನಲ್ಲೇ ಅಸಮಾನತೆಯ ಕಾರಣ ಉಪನಯವನ್ನು ನಿರಾಕರಿಸಿದ್ದರು. ಅವರಿಗೆ ಆ ವಯಸ್ಸಿನಲ್ಲೇ ಅಂಥ ಯೋಚನೆ ಬಂದಿದ್ದು ಹೇಗೆ ಎಂಬುದರ ಬಗ್ಗೆ ನನಗೆ ಈಗಲೂ ಕುತೂಹಲವಿದೆ ಎಂದರು. ಬಸವಣ್ಣನವರು ಭಯ ಬೇಡ ಎಂದರು, ಸತ್ಯ ಪ್ರತಿಪಾದಿಸುವುದನ್ನು ಹೇಳಿದರು, ವಿನಯತೆಯನ್ನು ಹೊಂದಿದ್ದರು. ಅದು ಸಮಾಜಕ್ಕೆ ಸದಾ ಸ್ಮರಣೀಯವಾಗಿರಬೇಕೆಂದು ಹೇಳಿದರು.