ಬರೀ ದೋಷಗಳ ಎಣಿಕೆ ಸರಿಯಲ್ಲ

PRATHAPPHOTOS.COM
Advertisement

“ಸರ್ವೇಶಾಂ ಹಿತವಾಕ್ಯಾನಿ ಏ ವದಂತಿ ನರೋತ್ತಮಃ ಏ ಗುಣ ಗ್ರಾಹಿಣೋ ಲೋಕೇ ತೇ ವೈ ಭಾಗವತೊತ್ತಮಃ” ಎಲ್ಲರಿಗೆ ಹಿತವಾದುದನ್ನು ನುಡಿಯುತ್ತಾರೆ. ಕೇವಲ ಅವರಿಗೆ ಪ್ರಿಯವಾದುದನ್ನು ನುಡಿಯುವುದಲ್ಲ. ಹಿತ ಬೇರೆ ಪ್ರಿಯ ಬೇರೆ “ಹಿತಂ ಮನೋಹಾರಿ ಚ ದುರ್ಲಭಮ್ ವಚಃ” ಹಿತವಾದುದನ್ನು ಮನೋಹಾರಿ ಅಂದರೆ ಪ್ರಿಯವಾದುದನ್ನು ನುಡಿಯುವುದು ಬಹಳ ಕಷ್ಟ ಏಕೆಂದರೆ ಕೆಲವೊಬ್ಬರಿಗೆ ಯಾವುದು ಪ್ರಿಯವೋ ಅದು ಹಿತವಾಗಿರುವುದಿಲ್ಲ. ಹಾಗೆಯೇ ಯಾವುದು ಹಿತವೋ ಅದು ಪ್ರಿಯವಾಗಿರುವುದಿಲ್ಲ. ಎಲ್ಲರಿಗೂ ನೀವು ಮಾಡುತ್ತಿರುವುದು ಸರಿಯಾಗಿದೆ ಎಂದರೆ ಬಹಳವೇ ಸಂತೋಷವಾಗುತ್ತದೆ. ಆದರೆ ಅವರು ಮಾಡುತ್ತಿರುವುದು ಶಾಸ್ತ್ರ ವಿರುದ್ಧ ಇರುತ್ತದೆ ಅದು ಅವನಿಗೆ ಒಳ್ಳೆಯದಲ್ಲ ಅದನ್ನು ಹೇಳಿದರೆ ಅವನಿಗೆ ಸಿಟ್ಟು ಬರುತ್ತದೆ ಅಂತಹ ಸಂದರ್ಭದಲ್ಲಿ ಹಿತವಾದುದನ್ನು ಜಾಣ್ಮೆಯಿಂದ ಅವನಿಗೆ ಪ್ರಿಯವಾಗುವಂತೆ ಹೇಳಬೇಕು ಅಷ್ಟೇ ಹೊರತು ಪ್ರಿಯವಾಗಲಿ ಎಂದು ಅಹಿತವನ್ನು ಹೇಳಬಾರದು. ” ಸತ್ಯಂ ಭ್ರೂಯಾತ, ಪ್ರಿಯಂ ಭ್ರೂಯಾತ್ ನ ಭ್ರೂಯಾತ್ ಸತ್ಯಂ ಅಪ್ರಿಯಂ ನ ಅನೃತಮ್ ಭ್ರೂಯಾತ್ ಏಶಃ ಧರ್ಮ ಸನಾತನಃ ” ಇದು ಅಂತಹ ಕಠಿಣವಾದ ವ್ರತ. ಅಂತಹ ವ್ರತವನ್ನು ಪರಿಪಾಲನೆ ಮಾಡಯುವವರು ಯಾರೋ ಹಿತವಾದುದನ್ನು ಪ್ರಿಯವಾಗುವಂತೆ ಹೇಳುವವರು ನಿಜವಾದ ಭಗವದ್ ಭಕ್ತರು ಶಾಸ್ತ್ರೋಕ್ತವಾದುದನ್ನು ಹೇಳುತ್ತಾ ಹೋಗಿ ಬಿಟ್ಟರೆ ಶಾಸ್ತ್ರದ ಚೌಕಟ್ಟಿನಲ್ಲಿ ಧರ್ಮದ ಚೌಕಟ್ಟಿನಲ್ಲಿ , ಶಾಸ್ತ್ರದಲ್ಲಿ ಎಲ್ಲ ವಿಷಯಗಳನ್ನು ನೇರವಾಗಿ ಹೇಳಿರುವುದಿಲ್ಲ ಅಲ್ಲಿ ಒಂದು ಚೌಕಟ್ಟನ್ನು ಹಾಕಿರುತ್ತಾರೆ ಆ ಮಾರ್ಯಾದೆಯ ಒಳಗೆ ಆ ಚೌಕಟ್ಟಿನ ಒಳಗೆ ನಾವು ಶಾಸ್ತ್ರೀಯ ಮಾತುಗಳನ್ನೋ ಲೌಕಿಕ ಮಾತನುಗಳನ್ನೋ ಏನೇ ಆಡಿದರೂ ಹಿತವೇ ಇರುತ್ತದೆ ಅದು ಹಿತವೇ ಇರುತ್ತದೆ. ಏಕೆಂದರೆ ಅದನ್ನು ದೇವರು ಹೇಳಿರುತ್ತಾನೆ. ಮಹಾಭಾರತ ತಾತ್ಪರ್ಯ ನಿರ್ಣಯದಲ್ಲಿ ಕೇಳಿದಂತೆ “ತ್ವಯಾ ಸಮಃ ಕೋನು ಹಿತಾ ಹರೇನಾ” ದೇವರಿಗೆ ಸಮನಾಗಿ ನಗೆ ಹಿತವನ್ನು ಬಯಸುವ ವ್ಯಕ್ತಿ ಬೇರೆ ಯಾರೂ ಇರುವುದಿಲ್ಲ. ದೇವರು ವಾಯು ದೇವರು ಗುರುಗಳು, ಗುರುಗಳಿಂದ ಹಿತಕರರನು ಇನ್ಯಾರೋ ನಿನಗೆ ಎಂದು ದಾಸರು ಎನ್ನುತ್ತಾರಲ್ಲ ಹಾಗೆ ಗುರುಗಳೇ ಪರಮ ಮಂಗಳವನ್ನು ಮಾಡುತ್ತಾರೆ ಹಾಗೆ ನಾವು ದೇವರು ವಾಯುದೇವರು ಗುರುಗಳು ಹೇಳಿದ ರೀತಿಯಲ್ಲಿ ಹೇಳಿದಂತೆ ಉಪದೇಶ ಮಾಡಿದರೆ ಹೇಳಿದರೆ ಅದು ಹಿತವೇ ಆಗಿರುತ್ತದೆ. ಜೊತೆಗೆ ಮನುಷ್ಯ ಎಂದ ಮೇಲೆ ದೋಷಗಳು ಇರುವುದು ಸಹಜ ದೇವರು ನಿರ್ದೋಷ ಆದರೆ ಮನುಷ್ಯರಲ್ಲಿ ದೋಷಗಳು ಸಹಜವಾಗಿಯೇ ಇರುತ್ತದೆ. ಆ ದೋಷಗಳನ್ನೇ ಎಣಿಸುತ್ತಾ ಹೋಗಬಾರದು ಗುಣಗಳನ್ನು ಏಣಿಸಿ ಸ್ನೇಹ ಪ್ರೀತಿ ವಿಶ್ವಾಸಗಳನ್ನು ಮಾಡಬೇಕು.