ಬಿಜೆಪಿಯ 27 ಜನರ ಉಚ್ಛಾಟನೆ

BJP
Advertisement

ಹುಬ್ಬಳ್ಳಿ: ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಆರೋಪದ ಹಿನ್ನೆಲೆಯಲ್ಲಿ ಬಿಜೆಪಿಯ ಮುಖಂಡರು, ಸದಸ್ಯರು, ಪಕ್ಷದ ಪದಾಧಿಕಾರಿಗಳು ಮತ್ತು ನಿಗಮ ಮಂಡಳಿಗಳ ಮಾಜಿ ಅಧ್ಯಕ್ಷರನ್ನು ಸೇರಿ 27 ಜನರನ್ನು ಆರು ವರ್ಷಗಳ ಕಾಲ ಬಿಜೆಪಿಯಿಂದ ಉಚ್ಛಾಟಿಸಲಾಗಿದೆ.
ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಗದೀಶ ಶೆಟ್ಟರ ಅವರ ಜೊತೆಗೆ ಗುರುತಿಸಿಕೊಂಡ ಹಿನ್ನೆಲೆ ಮತ್ತು ಬಿಜೆಪಿಯಲ್ಲೇ ಇದ್ದುಕೊಂಡು ಪಕ್ಷದ ಅಭ್ಯರ್ಥಿ ಮಹೇಶ ಟೆಂಗಿನಕಾಯಿ ಅವರನ್ನು ಬೆಂಬಲಿಸದ ಕಾರಣ ಈ ನಿರ್ಧಾರವನ್ನು ಕೈಗೊಳ್ಳಲಾಗಿದ್ದು, ನಿಗಮ ಮಂಡಳಿ ಮಾಜಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಸಾವಕಾರ, ನಾಗೇಶ ಕಲಬುರ್ಗಿ(ಉಚ್ಚಾಟನೆಗೂ ಮೊದಲೇ ರಾಜೀನಾಮೆ ಕೊಟ್ಟಿದ್ದರು), ಪಾಲಿಕೆಯ ಮಾಜಿ ಸದಸ್ಯ ಮಹೇಶ ಬುರ್ಲಿ, ಶಂಕರ ಸುಂಕದ, ಮಂಜು ದಲಭಂಜನ, ವೀರುಪಾಕ್ಷಿ ರಾಯನಗೌಡ್ರ, ನಾಗರಾಜ ಪಟ್ಟಣ, ವಿಜಯಲಕ್ಷ್ಮೀ ತಿಮ್ಮೊಲೆ, ಮಹೇಶ ಪತ್ತಾರ, ಭಾರತಿ ಟಪಾಲ, ಶೀಲನ್ ಕ್ಸೇವಿಯರ್, ಇಮ್ತಿಯಾಜ್ ಮುಲ್ಲಾ, ರವಿ ರಾಮದುರ್ಗ, ರಮಾನಾಥ ಶೆಣೈ, ಶಿವು ಕೊಪ್ಪದ, ಶಿವರುದ್ರಪ್ಪ ಬಡಿಗೇರ, ವಿನಾಯಕ ಜಿತೂರಿ, ನಾಶೀರ ತಂಬೂರಿ, ಬಸಣ್ಣ ಹೆಬ್ಬಳ್ಳಿ, ಹನುಮಂತಪ್ಪ ಚಲವಾದಿ, ರಾಧಾ ಪಟ್ಟಣಶೆಟ್ಟಿ, ರಾಜು ವಂದಾಲ, ಯಮನವ್ವ ವಂದಾಲ, ವಿವೇಕ ಹಳ್ಳಿ, ಜಯಶ್ರೀ ನಿಂಬರಗಿ, ಹಟೇಲಸಾಬ್ ಮುಲ್ಲಾ ಹಾಗೂ ಸದಾಶಿವ ಚೌಶೆಟ್ಟಿ ಅವರನ್ನು ಆರು ವರ್ಷ ಬಿಜೆಪಿಯಿಂದ ಉಚ್ಛಾಟಿಸಲಾಗಿದೆ ಎಂದು ಜಿಲ್ಲಾಧ್ಯಕ್ಷ ಸಂಜಯ ಕಪಟಕರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.