ಕಾಂಗ್ರೆಸ್‌ನಲ್ಲಿ ಭಿನ್ನ ಮತ ಸ್ಫೋಟ: ತಟಸ್ಥವಾಗಿರಲು ನಿರ್ಧಾರ

Advertisement

ಬಳ್ಳಾರಿ: ವಿಧಾನ ಸಭಾ ಚುನಾವಣೆಯ ಮತದಾನಕ್ಕೆ ಇನ್ನೇನು 9 ದಿನ ಬಾಕಿ ಇರುವಾಗ ಕಾಂಗ್ರೆಸ್‌ನಲ್ಲಿ ಭಿನ್ನ ಮತ ಸ್ಫೋಟಗೊಂಡಿದೆ. ಮಾಜಿ ಸಚಿವ ಎಂ.ದಿವಾಕರ್ ಬಾಬು ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ಮಾಡದೆ ಇರಲು ನಿರ್ಧರಿಸಿದ್ದಾರೆ. ಅಭ್ಯರ್ಥಿ ಭರತ್ ರೆಡ್ಡಿ ಮತ್ತು ಅವರ ತಂದೆ ಸೂರ್ಯ ನಾರಾಯಣ ರೆಡ್ಡಿ ಅವರು ನಮ್ಮ ಅವಶ್ಯಕತೆ ಇಲ್ಲ ಎಂಬ ರೀತಿಯಲ್ಲಿ ವರ್ತಿಸುತ್ತಿದ್ದು ಜೊತೆಗೆ ನಮ್ಮ ಪಕ್ಷದ ನೈಜ ಕಾರ್ಯಕರ್ತರನ್ನು ದೂರ ಇಟ್ಟು ಚುನಾವಣೆ ಮಾಡುವ ನಿರ್ಧಾರಕ್ಕೆ ಬಂದಿದ್ದಾರೆ. ಇದರಿಂದ ಇಷ್ಟು ದಿನ ಪಕ್ಷಕ್ಕೆ ದುಡಿದ ಕಾರ್ಯಕರ್ತರು ತೀವ್ರ ಬೇಸರಗೊಂಡಿದ್ದಾರೆ. ಅವರನ್ನು ಸಮಾಧಾನ ಪಡಿಸುವುದು ಕಷ್ಟ ಎಂಬಂತೆ ಆಗಿದೆ ಎಂದು ದಿವಾಕರ್ ಬಾಬು ಪತ್ರಿಕೆಗೆ ತಿಳಿಸಿದ್ದಾರೆ.
ನಾನಂತೂ ಫುಟ್ ಬಾಲ್ ಆಡಲು ನಿರ್ಧರಿಸಿದ್ದೇನೆ. ಕಾರ್ಯಕರ್ತರು ನನ್ನ ತಂಡದ ಸಹ ಆಟಗಾರರು ಅವರು ಅಡುವುದಿದ್ದರೆ ಆಡಬಹುದು. ಇಷ್ಟ ಇಲ್ಲ ಅಂದರೆ ಅವರ ದಾರಿ ಅವರಿಗೆ. ಅವರನ್ನು ಹೀಗೆ ಮಾಡಿ ಎಂದು ಹೇಳಲಾರೆ ಎಂದು ಅವರು ಪರೋಕ್ಷವಾಗಿ ತಾವು ಕೆ ಆರ್ ಪಿ ಪಿ ಪಕ್ಷದ ಅಭ್ಯರ್ಥಿ ಲಕ್ಷ್ಮಿ ಅರುಣ ಅವರ ಪರ ಕೆಲಸ ಮಾಡುವ ಮಾತನಾಡಿದ್ದಾರೆ.