ಇಬ್ಬರು ಮಹಿಳೆಯರು ನಡೆಸಿದ ಸಂಭಾಷಣೆಯಲ್ಲೇನಿದೆ?

ಸಂಭಾಷಣೆ
Advertisement

ಚಿತ್ರದುರ್ಗ ಮುರುಘಾ ಶರಣರ ವಿರುದ್ಧ ಪೋಕ್ಸೊ ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ ಮೂಲತಃ ಮನಗುಂಡಿಯವರು ಹಾಗೂ ಈಗ ಬೆಳಗಾವಿಯಲ್ಲಿ ವಾಸಿಸುತ್ತಿದ್ದಾರೆನ್ನಲಾದ ಸತ್ಯಕ್ಕ ಮತ್ತು ಗಂಗಾವತಿಯವರೆನ್ನಲಾದ ರುದ್ರಮ್ಮ ಎಂಬುವವರು ಕೆಲ ಸ್ವಾಮೀಜಿಗಳು, ಮಠದಲ್ಲಿ ನಡೆಯುವ ಚಟುವಟಿಕೆಗಳ ಬಗ್ಗೆ ನಡೆಸಿದರೆನ್ನಲಾದ ಸಂಭಾಷಣೆ ಆಡಿಯೋ ವೈರಲ್ ಆಗಿದ್ದು ಸಾರ್ವಜನಿಕ ಚರ್ಚೆಗೆ ತೀವ್ರ ಗ್ರಾಸವಾಗಿದೆ.
ಈ ಆಡಿಯೋದಲ್ಲಿರುವ ಕೆಲ ಸಂಭಾಷಣೆ ಪ್ರಮುಖ ಅಂಶಗಳು ಇಂತಿವೆ.
ಸತ್ಯಕ್ಕ: ನಡೆದಿರುವ ಘಟನೆಗಳು ಸುಳ್ಳು, ಪಳ್ಳು ಎನ್ನುತ್ತಿದ್ದಾರೆ. ಆದರೆ, ಅವರ ಹತ್ತಿರ ಇದ್ದ ಹೆಣ್ಣುಮಕ್ಕಳಿಗೆ ಗೊತ್ತು. ಅವರು ಎಂಥಾ ಲಫಂಗರು ಎನ್ನುವುದು.
ರುದ್ರಮ್ಮ: ಹೌದಮ್ಮ ಆರೇಳು ವರ್ಷದಿಂದ ನಾನು ಒಬ್ಬರಿಂದ ತಿಳಿದುಕೊಂಡಿದ್ದೆ. ಪುರಾವೆ ಇಲ್ಲದೇ ಹೇಗೆ ಹೇಳುವುದು.
ಸತ್ಯಕ್ಕ: ಅವರೊಬ್ಬರೇ ಅಲ್ಲ. ಅವರು ಜಾತಿಗೊಂದು ಮಠಕ್ಕೆ ಮಾಡಿರುವ ಸ್ವಾಮೀಜಿಗೆಲ್ಲರೂ ಹಾಗೆಯೇ ಇದ್ದಾರೆ.
ರುದ್ರಮ್ಮ: ಹೌದಾ….
ಸತ್ಯಕ್ಕ: ನಾನು ಬಸವಕಲ್ಯಾಣದಲ್ಲಿದ್ದಾಗ ತುಂಬಾ ಹುಡುಗಿಯರನ್ನು ಕಳಿಸಿದ್ದರು. ಅವರೆಲ್ಲ ಅದನ್ನೇ ಹೇಳೋರು.
ರುದ್ರಮ್ಮ: ಏನು ಮಾಡೋದು ಪ್ರಭಾವಿ ಸ್ವಾಮಿಗಳು. ಯಾರು ಏನೂ ಮಾಡುವುದು ಆಗಲ್ಲ.
ಸತ್ಯಕ್ಕ: ಒಬ್ಬಳು ಪ್ರೆಗ್ನೆಂಟ್ ಆಗಿದ್ದಳು. ಹಣ ಕೊಟ್ಟು ಬೇರೆಯವರಿಗೆ ದಾವಣಗೆರೆಯಲ್ಲಿ ಮದುವೆ ಮಾಡಿಕೊಟ್ಟರು. ಅಕೌಂಟಿಗೆ ಇಂತಿಷ್ಟು ಅಮೌಂಟ್ ಎಂದು ಹೋಗುವಂತೆ ಮಾಡಿದ್ದರು. ಉತ್ತರಾಧಿಕಾರಿ ಮಾಡಿದ್ದರು.
ರುದ್ರಮ್ಮ: ತಮ್ಮದೆಲ್ಲ ಮುಚ್ಚಿಹಾಕಲು ಇಂಥದ್ದೆಲ್ಲ ಮಾಡಿದ್ರಾ…
ಸತ್ಯಕ್ಕ: ಅಲ್ಲಿ ಹೇಗಿರುತ್ತೆ ಅಂದರೆ, ಜಾಸ್ತಿ ಕೇರ್ ಮಾಡದ ಹೆಣ್ಣು ಮಕ್ಕಳೊಂದಿಗೆ ಈ ರೀತಿ ನಡೆದುಕೊಳ್ಳುತ್ತಾರೆ.
ರುದ್ರಮ್ಮ: ನೀವು ಎಷ್ಟು ವರ್ಷ ಅಲ್ಲಿದ್ರಿ…
ಸತ್ಯಕ್ಕ: ನಾನು ಅಲ್ಲಿ ಇರಲಿಲ್ಲ. ಆದರೆ, ಹೋಗಿ ಬಂದು ಮಾಡಿದ್ದೆ. ನನಗೆ ಅಶ್ರಮದ ೧೮ ವರ್ಷದ ಅನುಭವ ಇದೆ. ಕೆಲವರು ತಮ್ಮ ಗುರುಗಳು ಎಂದು ಹೇಳುತ್ತಿದ್ದರು. ಯಾವುದೂ ಊಹಾಪೋಹ ಅಲ್ಲ ಬ…..ಸ್ವಾಮಿಯಿಂದ ಹಿಡಿದುಕೊಂಡು ಎಲ್ಲರೂ ಅವರೇ. ಕೆಲವರಿಗೆ ಎಂಟು ಬುದ್ದಿ ಎಂದರೆ ಇಂಥವರಿಗೆ ೧೬ ಬುದ್ಧಿ. ಬಹಳಷ್ಟು ಸ್ವಾಮಿಗಳು ಲಫಂಗರೇ. ಪಾದಯಾತ್ರೆ ಸ್ವಾಮಿ, ಯೋಗಾಸನ ಸ್ವಾಮಿ ಸೇರಿ(ಆತ್ಮಹತ್ಯೆಗೆ ಶರಣಾದ ನೇಗಿನಹಾಳ ಸ್ವಾಮೀಜಿ ಸೇರಿದಂತೆ ಹಲವು ಸ್ವಾಮೀಜಿಗಳ ಹೆಸರು ಆಡಿಯೋದಲ್ಲಿದೆ) ಅನೇಕರಿದ್ದಾರೆ. ಅಲ್ಲಿ ಆಗಿರುವುದು ಎಲ್ಲಾ ನಿಜವೇ. ಒಬ್ಬಳಿಗೆ ವಂಚನೆ ಮಾಡಿದ್ದು, ಆಕೆ ಈಗ ಬಸವಕಲ್ಯಾಣದಲ್ಲಿ ಬೀದಿಗೆ ಬಂದಿದ್ದಾಳೆ.
ರುದ್ರಮ್ಮ: ಹೌದೇನಮ್ಮಾ… ಯರ‍್ಯಾರಿದ್ದಾರೊ ಹೆಂಗೆ ಗೊತ್ತಾಗೋದು…
ಸತ್ಯಕ್ಕ: ನಾನು ಹತ್ತು ವರ್ಷ ತಮಿಳುನಾಡಿನಲ್ಲಿದ್ದು, ಬಸವ ಸೇವಾ ಪ್ರತಿಷ್ಠಾನ ಕಟ್ಟಿ ಬಿಟ್ಟು ಬಂದವಳು. ಹನ್ನೆರಡು ವರ್ಷದವಳಿದ್ದಾಗ ಮಠ ಸೇರಿದವಳು. ಈಗ ನನಗೆ ೩೦ ವರ್ಷ. ನನಗೆ ಇವರದೆಲ್ಲ ಗೊತ್ತು. ತಮಿಳುನಾಡು ಸತ್ಯಕ್ಕ ಅಂದ್ರೆ ಯಾರೂ ಮಾತಾಡಲ್ಲ. ಪಂ.ಪೀಠ ಸ್ವಾಮೀಜಿಯೊಬ್ಬರು ನನಗೆ ಆಫರ್ ಕೊಟ್ಟಿದ್ದರು. ತಮಿಳುನಾಡಿನಲ್ಲಿ ಜಮೀನಿದೆ. ಅದನ್ನು ನೋಡಿಕೊಂಡು ಇರು. ನಾವು ಹೋಗಿ ಬಂದಾಗ ಚೆನ್ನಾಗಿ ನೋಡಿಕೊ ಎಂದಿದ್ದರು. ನಾನು ಒಪ್ಪಿರಲಿಲ್ಲ.
ರುದ್ರಮ್ಮ: ಅಯ್ಯೊ ಈ ಸ್ವಾಮೀಜಿ ಹೀಗೇನಾ… ನಾವು ಏನೋ ಅಂದ್ಕೊಂಡಿದ್ದೆ. ಹೋಗಲಿ ಬಿಡಮ್ಮ. ನೀನು ಹುಷಾರಾಗಿರಮ್ಮ. ವ್ಯಾಪಾರ ಮಾಡಿಕೊಂಡು ಎಲ್ಲೊ ಒಂದು ಕಡೆ ಜೀವನ ಮಾಡಿಕೊಂಡಿದ್ದರೆ ಸಾಕು. ಇಂಥದಕ್ಕೆ ಹೋಗೋದು ಬೇಡಮ್ಮ…