ಕರ್ನಾಟಕ ದೇಶದಲ್ಲಿ ನಂ. 1 ಆಗುವುದಕ್ಕೆ ಬಿಜೆಪಿಗೆ ಮತ ನೀಡಿ

Advertisement

ಬೆಳಗಾವಿ: ಕರ್ನಾಟಕವನ್ನು ದೇಶದಲ್ಲಿಯೇ ನಂಬರ್ ವನ್ ರಾಜ್ಯವನ್ನಾಗಿ ಮಾಡುವುದಕ್ಕಾಗಿ ಈ ಬಾರಿ ಬಿಜೆಪಿಗೆ ಮತ ನೀಡುವಂತೆ ಪ್ರಧಾನಿ ನರೇಂದ್ರ ಮೋದಿಯವರು ಕರೆ ನೀಡಿದ್ದಾರೆ.
ಬೈಲಹೊಂಗಲ ತಾಲೂಕಿನ ಬೈಲವಾಡ ಕ್ರಾಸ್‌ನಲ್ಲಿ ಬುಧವಾರ ಸಂಜೆ ಬಿಜೆಪಿ ಬೃಹತ್ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕರ್ನಾಟಕದ ಜನ ಈ ಬಾರಿ ಸ್ಥಿರ ಬಿಜೆಪಿ ಸರ್ಕಾರ ತರಲು ತೀರ್ಮಾನಿಸಿದ್ದಾರೆ ಎಂಬುದು ನನಗೆ ಗೊತ್ತು. ಕೇವಲ ವೋಟ್ ಬ್ಯಾಂಕಿಗಾಗಿ ಜಾತಿ ರಾಜಕಾರಣ, ಜನರ ನಡುವೆ ಜಗಳ ಹಚ್ಚುವ ಜೆಡಿಎಸ್ ಮತ್ತು ಕಾಂಗ್ರೆಸ್‌ಗೆ ತಕ್ಕ ಪಾಠ ಕಲಿಸುವುದಕ್ಕೆ ರಾಜ್ಯದ ಜನ ಮುಂದಾಗಬೇಕಾಗಿದ್ದು, ಈ ಬಾರಿಯ ನಿರ್ಧಾರ ಬಿಜೆಪಿ ಬಹುಮತದ ಸರ್ಕಾರ ಎಂಬ ಮಂತ್ರದೊಂದಿಗೆ ಮತದಾನಕ್ಕೆ ಮುಂದಾಗುವಂತೆ ಅವರು ಮನವಿ ಮಾಡಿದರು.