ಬಜರಂಗದಳ ನಿಷೇಧಿಸುವ ಪ್ರಸ್ತಾಪ ಕಾಂಗ್ರೆಸ್ ಮುಂದಿಲ್ಲ

Advertisement

ಉಡುಪಿ: ಬಜರಂಗದಳ ನಿಷೇಧಿಸುವ ಯಾವುದೇ ಪ್ರಸ್ತಾಪವನ್ನು ಮಾಡಿಲ್ಲ ಎಂದು ಕಾಂಗ್ರೆಸ್ ಹಿರಿಯ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಹೇಳಿದ್ದಾರೆ, ಉಡುಪಿಯಲ್ಲಿ ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ ಅವರು ನಮ್ಮ ಪ್ರಣಾಳಿಕೆಯಲ್ಲಿ ಪಿಎಫ್‌ಐ ಮತ್ತು ಬಜರಂಗ ದಳ ಎರಡನ್ನೂ ಉಲ್ಲೇಖಿಸಿದ್ದೇವೆ. ಇಲ್ಲಿ ಒಂದು ಸಂಘಟನೆಯನ್ನು ನಿಷೇಧಿಸುವುದು ರಾಜ್ಯ ಸರ್ಕಾರದಿಂದ ಸಾಧ್ಯವಿಲ್ಲ. ಬಜರಂಗದಳವನ್ನು ಕರ್ನಾಟಕ ಸರ್ಕಾರವು ನಿಷೇಧಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದರು. ಸರ್ದಾರ್ ವಲ್ಲಭಭಾಯಿ ಪಟೇಲ್ ಅವರನ್ನು ಈಗ ಆರಾಧಿಸುತ್ತಿರುವ ಬಿಜೆಪಿ, ಪಟೇಲ್ ಒಂದು ಹಂತದಲ್ಲಿ ಆರ್‌ಎಸ್‌ಎಸ್ ನಿಷೇಧಿಸಿದ್ದರು ಎಂಬುದನ್ನು ಮರೆತಿದೆ. ತದನಂತರ ಜವಾಹರ್ ಲಾಲ್ ನೆಹರೂ ನಿಷೇಧ ನಿರ್ಧಾರವನ್ನು ರದ್ದುಗೊಳಿಸಿದರು.”ದ್ವೇಷ ರಾಜಕಾರಣದ ಬಗ್ಗೆ ಸುಪ್ರೀಂ ಕೋರ್ಟ್‌ನ ನಿಲುವು ಸ್ಪಷ್ಟವಾಗಿದೆ. ಅದರ ಭಾಗವಾಗಿ ಪಕ್ಷದ ಪ್ರಣಾಳಿಕೆಯಲ್ಲಿ ಹೇಳಿಕೆ ನೀಡಿದ್ದೇವೆ. ಆದರೆ ಬಜರಂಗದಳವನ್ನು ನಿಷೇಧಿಸುವ ಉದ್ದೇಶ ನಮಗಿಲ್ಲ ಎಂಬುದನ್ನು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಕೂಡಾ ಸ್ಪಷ್ಟಪಡಿಸಿದ್ದಾರೆ ಎಂದು ಮೊಯ್ಲಿ ತಿಳಿಸಿದರು.