ಕಾಂಗ್ರೆಸ್ ಈ ತರಹದ ನೂರು ಪ್ರಾಣಾಳಿಕೆ ತಂದರೂ ಸುಡ್ತೇನೆ

Advertisement

ಹುಬ್ಬಳ್ಳಿ : ರಾಷ್ಟ್ರೀಯತೆ ವಿರೋಧಿ, ಬಜರಂಗ ದಳ ಸಂಘಟನೆ ನಿಷೇಧ ಅಂಶ ಹೊಂದಿದೆ ನೂರು ಪ್ರಣಾಳಿಕೆ ಕಾಂಗ್ರೆಸ್ ತಂದರೂ ಅವುಗಳನ್ನು ಸುಡ್ತೇನೆ ಎಂದು ಬಿಜೆಪಿ ನಾಯಕ , ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪ್ರಣಾಳಿಕೆ ಸುಟ್ಟಿರುವ ಬಗ್ಗೆ ಮಲ್ಲಿಕಾರ್ಜುನ ಖರ್ಗೆ ಅವರು ಖಂಡಿಸಿದ್ದಕ್ಕೆ ಪ್ರತಿಕ್ರಿಯಿಸಿದರು.

ಸೈದ್ಧಾಂತಿಕ, ರಾಷ್ಡ್ರೀಯತೆಯ ವಿರೋಧಿ ಅಂಶಗಳನ್ನು ಕಾಂಗ್ರೆಸ್ ಹೊಂದಿದೆ. ಪಿಎಫ್ಐ ಸಂಘಟನೆ ಜೊತೆಗೆ ಬಜರಂಗದಳ ಹೋಲಿಕೆ ಮಾಡಿದ್ದಾರೆ. ಈ ದೇಶವನ್ನು, ನಮ್ಮ ಸಂಸ್ಕೃತಿಯನ್ನು ಕಾಂಗ್ರೆಸ್ ಏನು ಮಾಡಲು ಹೊರಟಿದೆ ಎಂದು ಪ್ರಶ್ನಿಸಿದರು.

ಈಗ ಒಂದು ಪ್ರಣಾಳಿಕೆ ಸುಟ್ಟಿದ್ದೇ‌ನೆ ಅಷ್ಟೇ. ಇದೇ ಧೋರಣೆ ಮುಂದುವರಿಸಿದರೆ ನೂರು ಪ್ರಣಾಳಿಕೆ ಸುಡುತ್ತೇನೆ ಎಂದರು.

ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಬಜರಂಗದಳ ನಿಷೇಧ ವಿಷಯ ಸೇರಿಸಿದ್ದಕ್ಕೆ ಜಗದೀಶ ಶೆಟ್ಟರ ಪ್ರತಿಕ್ರಿಯಿಸಿದ್ದಾರೆ. ನಿಷೇಧ ಮಾಡುವ ಅಧಿಕಾರ ರಾಜ್ಯ ಸರ್ಕಾರಕ್ಕೆ ಇರುವುದಿಲ್ಲ ಎಂದಿದ್ದಾರೆ. ಪಕ್ಷದ ವೇದಿಕೆಯಲ್ಲಿ ಚರ್ಚೆ ಮಾಡುತ್ತೇನೆ ಎಂದಿದ್ದಾರೆ.ಅವರ ಹೇಳಿಕೆ ಸ್ವಾಗತಿಸುತ್ತೇನೆ. ಅವರಲ್ಲಿ ಇನ್ನೂ ರಾಷ್ಡ್ರೀಯತೆ ಹಿತಾಸಕ್ತಿ ಚಿಂತನೆ ಉಳಿದಿದೆ ಎಂಬುದಕ್ಕೆ ಸಾಕ್ಷಿ. ಬರೀ ಪಕ್ಷದ ವೇದಿಕೆಯಲ್ಲಿ ಹೇಳಿದರೆ ಏನು ಪ್ರಯೋಜನ, ಬಹಿರಂಗವಾಗಿಯೇ ಕಾಂಗ್ರೆಸ್ ಪ್ರಣಾಳಿಕೆ ಖಂಡಿಸಲಿ ಎಂದು ಆಗ್ರಹಿಸಿದರು.

ಬಜರಂಗದಳ ಹೆಸರಲ್ಲಿ ಬೆಂಕಿ ಹಚ್ಚಿರುವ ಕಾಂಗ್ರೆಸ್ ಪಕ್ಣ ಅಧಿಕಾರಕ್ಕೆ ಬರುವುದಿಲ್ಲ. ಒಂದು ವೇಳೆ ಬಂದರೆ ಈ ರಾಜ್ಯದ ದುರಾದೃಷ್ಟ ಎಂದು ಹೇಳಿದರು.

ಕೆಪಿಸಿಸಿ ಅಧ್ಯಕ್ಷರೇ ಜಾತಿವಾದಿ:
ಕೆಪಿಸಿಸಿ ಅಧ್ಯಕ್ಷರೇ ಒಕ್ಕಲಿಗರಿಗೇ ಅವಕಾಶ ಕೊಡಿ ಎನ್ನುತ್ತಾರೆ. ಇದು ಜಾತಿವಾದ ಅಲ್ಲವೇ? ಬಿಜೆಪಿ ಬಗ್ಗೆ ಜಾತಿವಾದಿ ಎಂದು ಹೇಳಲು ಏನು ನೈತಿಕತೆ ಇದೆ ಎಂದು ಪ್ರಶ್ನಿಸಿದರು.
ಬಜರಂಗದಳ ಬೇರೆ, ಹನುಮಾನ್ ಬೇರೆ ಎಂದು ಹೇಳಿಕೆ ನೀಡುತ್ತಾರೆ. ಡಿ.ಕೆ. ಶಿವಕುಮಾರ್ ಎಂದು ಯಾಕೆ ಹೆಸರು ಬೇಕು? ಕೆ.ಡಿ. ಶಿವಕುಮಾರ್ ಎಂದು ಹೆಸರಿಟ್ಟುಕೊಳ್ಳಲಿ. ಎರಡೂ ಒಂದೇ ಅಲ್ಲ ಎಂದು ವಾಗ್ದಾಳಿ ನಡೆಸಿದರು.