ಕುಸ್ತಿಪಟುಗಳ ಪ್ರತಿಭಟನೆ: ಎರಡು ಪ್ರತ್ಯೇಕ ಸಮಿ​ತಿ

Advertisement

ನವದೆಹಲಿ: ದೆಹಲಿಯ ಜಂತರ್ ಮಂತರ್ ನಲ್ಲಿ ಕುಸ್ತಿಪಟುಗಳ ಪ್ರತಿಭಟನೆ ಮುಂದುವರಿದಿದೆ. ಕಳೆದ ಕೆಲವು ದಿನಗಳಿಂದ ಹಲವು ರಾಜಕೀಯ ವ್ಯಕ್ತಿಗಳು ಕೂಡ ಅಲ್ಲಿಗೆ ಆಗಮಿಸಿ ಅವರ ಪ್ರತಿಭಟನೆಗೆ ಬೆಂಬಲ ನೀಡಿದ್ದಾರೆ. ಕಿಸಾನ್ ನಾಯಕ ರಾಕೇಶ್ ಟಿಕಾಯತ್ ಕೂಡ ಇಂದು ಜಂತರ್ ಮಂತರ್ ತಲುಪಿ ಕುಸ್ತಿಪಟುಗಳನ್ನು ಭೇಟಿ ಮಾಡಿದರು. ನಾವು ಇಲ್ಲಿ ಮಾತನಾಡಲು ಬಂದಿದ್ದೇವೆ, ಧರಣಿ ಮುಂದುವರಿಯುತ್ತದೆ ಎಂದು ಹೇಳಿದ ಅವರು ಬ್ರಿಜ್ ಭೂಷಣ್ ಶರಣ್ ಅವರನ್ನು ಇಲ್ಲಿಯವರೆಗೆ ಯಾಕೆ ಬಂಧಿಸಿಲ್ಲ ಎಂದು ಪ್ರಶ್ನಿಸಿದರು. ಕುಸ್ತಿಪಟುಗಳನ್ನು ಬೆಂಬಲಿಸಲು ಹರಿಯಾಣ, ಪಂಜಾಬ್ ಮತ್ತು ಪಶ್ಚಿಮ ಉತ್ತರ ಪ್ರದೇಶದ ಹೆಚ್ಚಿನ ಸಂಖ್ಯೆಯ ರೈತರು ದೆಹಲಿ ತಲುಪುವ ನಿರೀಕ್ಷೆಯಿದೆ. ರೈತರು ಹೆಚ್ಚಿನ ಸಂಖ್ಯೆಯಲ್ಲಿ ಬರುವ ಸಾಧ್ಯತೆಯ ಹಿನ್ನೆಲೆಯಲ್ಲಿ ಗಡಿಯಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಪಂಜಾಬ್‌ನ ಅತಿದೊಡ್ಡ ರೈತ ಸಂಘಟನೆಯಾದ ಬಿಕೆಯು ಸದಸ್ಯರು ಜಂತರ್ ಮಂತರ್ ತಲುಪಿದ್ದಾರೆ. ಕುಸ್ತಿ​ಪ​ಟು​ಗಳು ತಮ್ಮ ಮುಂದಿನ ನಡೆ ಬಗ್ಗೆ ನಿರ್ಧ​ರಿ​ಸಲು ಎರಡು ಪ್ರತ್ಯೇಕ ಸಮಿ​ತಿ​ಗ​ಳನ್ನು ರಚಿ​ಸಿ​ದ್ದಾರೆ. ಈ ಬಗ್ಗೆ ಮಾಹಿತಿ ನೀಡಿ​ರುವ ಕುಸ್ತಿ​ಪಟು ಭಜ​ರಂಗ್‌ ಪೂನಿ​ಯಾ, ‘ಪ್ರ​ತಿ​ಭ​ಟನೆ ಕೇವಲ ಮೂವರು ಕುಸ್ತಿ​ಪ​ಟು​ಗ​ಳಿಗೆ ಸೀಮಿ​ತ​ವಾ​ಗಿಲ್ಲ. ನಮ್ಮ ಮುಂದಿನ ನಡೆ​ಯನ್ನು ತೀರ್ಮಾ​ನಿ​ಸಲು 2 ಸಮಿತಿ ರಚಿ​ಸಿ​ದ್ದೇ​ವೆ’ ಎಂದಿ​ದ್ದಾ​ರೆ. ಮೊದಲ ಸಮಿ​ತಿ​ಯಲ್ಲಿ 31 ಸದ​ಸ್ಯ​ರಿದ್ದು, ಪ್ರತಿಭಟನೆಗೆ ಬೆಂಬಲ ನೀಡಿರುವ ಎಲ್ಲಾ ಸಂಘಟನೆಗಳ ಪ್ರತಿನಿಧಿಗಳಿಗೆ ಸ್ಥಾನ ನೀಡ​ಲಾ​ಗಿದೆ. ಖಾಪ್‌ ಪಂಚಾ​ಯ​ತ್‌, ರೈತರು, ಮಹಿಳಾ ಸದ​ಸ್ಯೆ​ಯರು ಸಮಿ​ತಿ​ಯ​ಲ್ಲಿ​ರ​ಲಿ​ದ್ದಾರೆ. ಈ ಸಮಿತಿ ಪ್ರತಿಭಟನೆಗೆ ಸಂಬಂಧಿಸಿದ ವಿಚಾರಗಳ ತೀರ್ಮಾನ ಕೈಗೊ​ಳ್ಳ​ಲಿ​ದೆ. ಇನ್ನು 2ನೇ ಸಮಿ​ತಿ​ಯಲ್ಲಿ 9 ಸದ​ಸ್ಯ​ರಿದ್ದು, ಕುಸ್ತಿಗೆ ಸಂಬಂಧಿಸಿದ ನಿರ್ಧಾರಗಳನ್ನು ಈ ಸಮಿತಿ ಮಾಡ​ಲಿದೆ ಎಂದು ಭಜ​ರಂಗ್‌ ತಿಳಿ​ಸಿ​ದ್ದಾರೆ.