ಫುಡ್ ಡೆಲಿವರಿ ಬಾಯ್‌ ಜತೆ ಬೈಕ್‌ನಲ್ಲಿ ಸುತ್ತಾಡಿದ ರಾಹುಲ್

Advertisement

ಫುಡ್ ಡೆಲಿವರಿ ಬಾಯ್ ಜೊತೆ ದ್ವಿಚಕ್ರ ವಾಹನದಲ್ಲಿ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಸಂಚರಿಸಿದರು.
ಹೌದು.. ರಾಜ್ಯ ರಾಜಧಾನಿಯಲ್ಲಿಂದು ರಾಹುಲ್‌ ಸೆಕ್ಯುರಿಟಿ ಬಿಟ್ಟು ದ್ವಿಚಕ್ರ ವಾಹನದಲ್ಲಿ ಓಡಾಡಿದ್ದಾರೆ. ಫುಡ್ ಡೆಲಿವರಿ ಬಾಯ್ ಜೊತೆ ಏರ್‌ಲೈನ್ಸ್ ಹೋಟೆಲ್, ಚಿನ್ನಸ್ವಾಮಿ, ರಾಜಭವನ ರಸ್ತೆಯಲ್ಲಿ ಸುಮಾರು 2 ಕಿ.ಮೀ. ಪ್ರಯಾಣಿಸಿದ್ದಾರೆ.
ಸದ್ಯ ರಾಹುಲ್‌ ಬೈಕ್‌ನಲ್ಲಿ ಸುತ್ತಾಡಿದ ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.