ಇಂದು ಎನಗೆ ಗೋವಿಂದ….

ಗುರುಬೋಧೆ
PRATHAPPHOTOS.COM
Advertisement

ಕಲಿಕಾಲದಲ್ಲಿ ದೇವರ ತಪಸ್ಸು, ಆರಾಧನೆ ಹೋಮ ಹವನಗಳಿಗಿಂತ ಹೆಚ್ಚಾಗಿ ಫಲಕೊಡುವದು ನಾಮಸ್ಮರಣೆಯಿಂದ. ಅದಕ್ಕೆ ಕೃಷ್ಣನ ನೆನೆದರೆ ಕಷ್ಟವೊಂದಿಷ್ಟಿಲ್ಲವೆಂದು ದಾಸರು ಹೇಳಿದ್ದಾರೆ. ಅದು ಅವರ ಅನುಭವಾಮೃತ. ಹಾಗೇಯೇ ಗೋವಿಂದ ಎಂಬ ನಾಮೋಚ್ಛಾರಣೆಯಿಂದಲೂ ಸಕಲ ರೋಗ ಪರಿಹಾರವಾಗುತ್ತದೆ ಎಂದು ಹೇಳುತ್ತಾರೆ. ಮಂತ್ರಾಲಯ ಪ್ರಭುಗಳು ಇಂದು ಎನಗೆ ಗೋವಿಂದ ಎಂದೇ ಸಂಕೀರ್ತನೆ ಮಾಡಿ ಪಾಡಿದ್ದಾರೆ.
ಗೋವಿಂದ ನಾಮದಲ್ಲಿ ಅಂಥದ್ದೇನಿದೆ? ಸಹಜ ಕುತೂಹಲಕ್ಕೆ ಶ್ರೀಮದಾಚಾರ್ಯರು ಅದರ ಅರ್ಥ ವಿಸ್ತಾರವನ್ನು ಅತಿ ಅದ್ಭುತವಾಗಿ ಮಾಡಿದ್ದಾರೆ. ಸೂರ್ಯನಿಲ್ಲದೇ ಜೀವಿಗಳ ಬದುಕು ಕಲ್ಪಿಸಿಕೊಳ್ಳಲಾಗದು. ಬೆಳಕು ಬೇಕೇ ಬೇಕು. ಬೆಳಕು ಕೊಡುವವ ಆರೋಗ್ಯವಂತನನ್ನಾಗಿಸುತ್ತಾನೆ. ಅದಕ್ಕೆ ಗೋವಿಂದ ಆರೋಗ್ಯಕ್ಕೆ ಸೌರಶಕ್ತಿ ಇದು ಬಹಳ ಮುಖ್ಯ ಸೂರ್ಯಾಂತರ್ಗತ ನಾರಾಯಣನ ಕೃಪೆ ಮತ್ತು ಭಗವಂತನ ಅಧಿಷ್ಠಾನ. ಸೂರ್ಯಮಂಡಲದ ಕಿರಣಗಳು ಬೇಕು.
ಗೋ ಎಂದರೆ ಕಿರಣಗಳು ಸೂರ್ಯನ ಕಿರಣಗಳಲ್ಲಿ ಇದ್ದು ಆ ಕಿರಣಗಳ ಮೂಲಕ ಜೊತೆಗೆ ಚಂದ್ರ ವನಸ್ಪತಿಗಳಿಗೆ ರಾಜ ಅವನ ಕಿರಣಗಳೂ ಕೂಡ ಕೆಲವೊಮ್ಮೆ ಆರೋಗ್ಯಕ್ಕೆ ಬಹಳ ಮಹತ್ವದ್ದು, ಆ ಸೌರಶಕ್ತಿ ಮತ್ತು ಚಂದ್ರನ ಕಿರಣಗಳು ಇವುಗಳ ಮೂಲಕವಾಗಿ, ಇನ್ನು ಇತರ ವನಸ್ಪತಿಗಳು ಬೆಳೆಯುವುದು ಭೂಮಿಯಲ್ಲಿ ಭೂಮಿಗೂ ಗೋ ಎನ್ನುತ್ತಾರೆ.
ಸೂರ್ಯನ ಕಿರಣಗಳು ಗೋ, ಚಂದ್ರನ ಕಿರಣಗಳು ಗೋ, ಅನೇಕ ವನಸ್ಪತಿ ಬೆಳೆಯುವ ಭೂಮಿ ಗೋ, ಇನ್ನು ಅನೇಕ ಔಷಧಿಗಳನ್ನು ಕೊಡುವುದು ಗೋ, ಇನ್ನು ಗೋವುಗಳಿಂದ ಗೋ-ಮೂತ್ರ ಗೋಮಯ, ಹಾಲು ಇನ್ನು ಅನೇಕ ಔಷಧಿಗಳಿಗೆ ನೀರೇ ಔಷಧಿ ಎಲ್ಲ ಔಷಧಿಗಳೂ ನೀರಿನಲ್ಲಿದೆ.
ಗೋ ಎಂದರೆ ನೀರು ಪೌರಾಣಿಕ ಶ್ಲೋಕವನ್ನು ಶ್ರೀಮದಾಚಾರ್ಯರು ಎಷ್ಟು ಸೊಗಸಾಗಿ ಅರ್ಥೈಸಿ ಸಂಗ್ರಹ ಮಾಡಿ ಹೇಳುತ್ತಾರೆ ಎಂದರೆ ನೀರಿನಲ್ಲಿ ಹಾಲಿನಲ್ಲಿ ತುಪ್ಪದಲ್ಲಿ ಗೋಮಯ ಗೋಮೂತ್ರ, ಸೂರ್ಯ ಚಂದ್ರಕಿರಣ ಎಲ್ಲದರಲ್ಲೂ ಇದ್ದು ನಮ್ಮ ಪಾಪ ವಿಮೋಚನೆಗೆ ಅನೇಕ ಶಾಸ್ತ್ರ ಪುರಾಣಗಳ ಮೂಲಕ ಜಪ ತಪಾದಿಗಳ ಮೂಲಕ ಪರಿಹಾರವನ್ನು ಹೇಳುತ್ತಾರೆ.
ಗೋ ಎಂದರೆ ವಾಕ್ ಆ ವೇದ ಪುರಾಣಗಳ ಮಂತ್ರಗಳು ಮಾತುಗಳು ಇವುಗಳಿಂದ ಪ್ರತಿಪಾದ್ಯನಾದ ಗೋವಿಂದ ಅವನು ನಮ್ಮ ರೋಗ ಪರಿಹರಿಸಲಿ ಎಂತಲೂ ಗೋವಿಂದ ಎಂಬ ಶಬ್ದಕ್ಕೂ ನಂಟು ಇರುವುದಿಂದ ಗೋವಿಂದನ ಉಪಾಸನೆಯನ್ನು ಮಾಡಿ ಆರೋಗ್ಯವನ್ನು ಬೇಡಬೇಕು ಎಂದು ಶ್ರೀಮದಾಚಾರ್ಯರು ಚಿಂತಿಸಿ ಸೂಚನೆಯನ್ನು ನೀಡಿದ್ದಾರೆ.