ಕಾರ ಶೋರೂಮ್‌ಗಳಲ್ಲಿ ಸರಣಿಗಳ್ಳತನ

Advertisement

ವಿಜಯಪುರ : ಕಳ್ಳರು ಸೋಮವಾರ ತಡರಾತ್ರಿ ನಗರದ ಕಾರ ಶೋರೂಮ್‌ಗಳಲ್ಲಿ ಸರಣಿಗಳ್ಳತನ ಮಾಡಿದ್ದಾರೆ.

ಬೆಂಗಳೂರು ರಸ್ತೆಯಲ್ಲಿರುವ ಕೀಯಾ ಶೋರೂಮ್ ನಲ್ಲಿ ಖದಿಮರು ತಮ್ಮ ಕೈ ಚಳಕ ತೋರಿಸಿರುವುದು ಸಿಸಿ ಟಿವಿಯಲ್ಲಿ ದಾಖಲಾಗಿದೆ.

ಅದೇ ರಸ್ತೆಯಲ್ಲಿರುವ ಹುಂಡೈ, ಕಿಯಾ, ಟೊಯೋಟಾ, ಆರ್‌ಎನ್‌ಎಸ್ ಮೋಟರ್ಸ್‌ನಲ್ಲಿ ಸರಣಿ ಕಳ್ಳತನ ಮಾಡಿ
ಶೋರೂಮ್‌ನಲ್ಲಿ ಕೈಗೆ ಸಿಕ್ಕಷ್ಟು ಹಣದೋಚಿ ಖದಿಮರು ಪರಾರಿಯಾಗಿರುವ ಘಟನೆ ನಡೆದಿದೆ.

ವಿಜಯಪುರ ನಗರ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಪೊಲೀಸ್ ರು ಸಿಸಿ ಟಿವಿ ದೃಶ್ಯಾವಳಿ ಆದರಿಸಿ ಆರೋಪಿತರ ಪತ್ತೆಗೆ ಜಾಲ‌ ಬೀಸಿದ್ದಾರೆ.