ಗೃಹಜ್ಯೋತಿ ಬಾಡಿಗೆದಾರರಿಗೂ ಅನ್ವಯ

Advertisement

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ ಆಡಳಿತ ನನಗೆ ಸದಾ ಮಾದರಿ ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ, ಇಂದು ಮುಖ್ಯಮಂತ್ರಿಗಳು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು ವಿಧಾನಸೌಧದಲ್ಲಿ ಆಯೋಜಿಸಿದ್ದ ಮಾಜಿ ಮುಖ್ಯಮಂತ್ರಿಗಳಾದ ದಿವಂಗತ ಡಿ. ದೇವರಾಜ ಅರಸುರವರ 41ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಅರಸು ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು ಅಧಿಕಾರ, ಸಂಪತ್ತು, ಮತ್ತು ಅವಕಾಶದ ಹೆಬ್ಬಾಗಿಲು ತೆರೆದು ಸಮ ಸಮಾಜದ ನಿರ್ಮಾಣಕ್ಕೆ ತಮ್ಮನ್ನು ಅರ್ಪಿಸಿಕೊಂಡ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ ಆಡಳಿತ ನನಗೆ ಸದಾ ಮಾದರಿ. ಪರಿವರ್ತನೆಯ ಹರಿಕಾರನನ್ನು ಅವರ ಪುಣ್ಯಸ್ಮರಣೆಯಂದು ಗೌರವದಿಂದ ನೆನೆಯುತ್ತೇನೆ ಎಂದಿದ್ದಾರೆ.
ಪುಣ್ಮಸ್ಮರಣೆಯಲ್ಲಿ ಭಾಗವಹಿಸಿದ ಬಳಿಕ ಮಾತನಾಡಿದ ಅವರು, ಯಾರಾರು ಬಡವರು ಇದ್ದಾರೆ, 200 ಯೂನಿಟ್‌ ಒಳಗೆ ವಿದ್ಯುತ್‌ ಬಳಕೆ ಮಾಡುತ್ತಾರೆ. ಅವರಾರು ವಿದ್ಯುತ್‌ ಬಿಲ್‌ ಕಟ್ಟಬೇಕಿಲ್ಲ. ಈ ಯೋಜನೆ ಬಾಡಿಗೆದಾರರಿಗೂ ಅನ್ವಯ ಆಗುತ್ತೆ. ವಾಣಿಜ್ಯವಾಗಿ ಬಳಕೆ ಮಾಡುವವರಿಗೆ ಉಚಿತ ವಿದ್ಯುತ್‌ ಅನ್ವಯ ಆಗಲ್ಲ ಎಂದು ಹೇಳಿದರು.