ವಿಠ್ಠಲನಿಗೆ ಮಹಾ ಸಿಎಂ ಪೂಜೆ

Advertisement

ಬೆಳಗಾವಿ(ಯಕ್ಸಂಬಾ): ಆಷಾಡ ಏಕಾದಶಿ ಅಂಗವಾಗಿ ಸುಕ್ಷೇತ್ರ ಪಂಢರಪೂರದಲ್ಲಿಂದು ಗುರುವಾರ ನಸುಕಿನ ಜಾವದಲ್ಲಿ ಮಹಾರಾಷ್ಟ್ರ ರಾಜ್ಯದ ಮುಖ್ಯಮಂತ್ರಿಗಳಾದ ಏಕನಾಥ ಶಿಂಧೆ ಹಾಗೂ ಧರ್ಮಪತ್ನಿಯಾದ ಲತಾ ಶಿಂಧೆಯವರು ಸರ್ಕಾರ ವತಿಯಿಂದ ವಿಠ್ಠಲನ ಮಹಾಪೂಜೆ ನೆರವೇರಿಸಿದರು.
ಸರಕಾರದ ಮಾನದ ಪೂಜೆಯನ್ನು ಅಹಮದನಗರ ಜಿಲ್ಲೆಯ ವಾಕಡಿ ಗ್ರಾಮದ ಭಾವುಸಾಹೇಬ ಕಾಳೆ ಮತ್ತು ಮಂಗಲ ಕಾಳೆ ದಂಪತಿ ಸಾಂಪ್ರದಾಯಕವಾಗಿ ಶ್ರೀ ವಿಠ್ಠಲನ ಪೂಜೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಶ್ರೀ ವಿಠ್ಠಲ-ರುಕ್ಮಣಿ ದೇವಸ್ಥಾನ ಕಮಿಟಿಯ ವತಿಯಿಂದ ಮುಖ್ಯಮಂತ್ರಿಗಳನ್ನು ಹಾಗೂ ಕುಟುಂಬ ಸದಸ್ಯರನ್ನು ಸನ್ಮಾನಿಸಲಾಯಿತು. ಜನಪ್ರತಿನಿಧಿಗಳು, ಜಿಲ್ಲಾ ಮತ್ತು ತಾಲೂಕು ಆಡಳಿತ ಅಧಿಕಾರಿಗಳು ಉಪಸ್ಥಿತರಿದ್ದರು.
ಆಷಾಡ ಏಕಾದಶಿ ಅಂಗವಾಗಿ ಮಹಾರಾಷ್ಟ್ರ, ಕರ್ನಾಟಕ, ಗೋವಾ, ಆಂದ್ರಪ್ರದೇಶ ಹಾಗೂ ತೆಲಂಗಾಣ ಸೇರಿ ದೇಶದ ವಿವಿಧೆಡೆಯಿಂದ ಆಗಮಿಸಿದ ಲಕ್ಷಾಂತರ ಭಕ್ತರು ಫಂಡರಪುರ ವಿಠ್ಠಲನ ದರ್ಶನ ಪಡೆದರು.
ಆಷಾಢ ಏಕಾದಶಿ, ಮಹಾರಾಷ್ಟ್ರದ ಪಾಲಿಗೆ ನಾಡಹಬ್ಬವೇ ಇದ್ದಂತೆ. ಪ್ರತಿ ವರ್ಷ ಅಲ್ಲಿನ ಸಿಎಂ ಅವರು ಪತ್ನಿಯ ಸಮೇತರಾಗಿ ಪಂಢರಪುರಕ್ಕೆ ಆಗಮಿಸಿ ವಿಠ್ಠಲ-ರುಕ್ಮೀಣಿಗೆ ಸರ್ಕಾರಿ ಪೂಜೆ ಸಲ್ಲಿಸುವ ಸಂಪ್ರದಾಯವಿದೆ.