ಅಜ್ಞಾನ ಹೋಗಲಾಡಿಸುವವನೇ ಗುರು

Advertisement

ಗುರುಪೂರ್ಣಿಮೆ ಅಥವಾ ವ್ಯಾಸಪೂರ್ಣಿಮೆ ಬರುವುದು ಪ್ರತಿವರ್ಷ ಆಷಾಢಮಾಸದ ಹುಣ್ಣಿಮೆ ದಿನ. ಆ ದಿನ ವೇದವ್ಯಾಸರು ಅವತರಿಸಿದ ದಿನವಾಗಿದೆ. ವೇದವು ಮೊದಲು ಒಂದೇ ಆಗಿತ್ತು. ಅದನ್ನು ನಾಲ್ಕು ಭಾಗಗಳಾಗಿ ವಿಂಗಡಿಸಿದವರು ವ್ಯಾಸರು. ಋಗ್ವೇದ, ಯಜುರ್ವೇದ, ಸಾಮವೇದ, ಮತ್ತು ಅಥರ್ವಣ ವೇದ. ವ್ಯಾಸ' ಎಂಬ ಪದಕ್ಕೆ ವಿಶೇಷ ಅರ್ಥವಿದೆ. ಅದೇನೆಂದರೆವಿಂಗಡಿಸು’ ಎಂದು. ವೇದವನ್ನು ವಿಂಗಡಿಸಿದ್ದರಿಂದ ವ್ಯಾಸರಿಗೆ ವೇದವ್ಯಾಸ' ಎಂದು ಹೆಸರಾಯಿತು. ವೇದವ್ಯಾಸರ ತಂದೆ ಪರಾಶರ, ತಾಯಿ ಸತ್ಯವತಿ. ವೇದವ್ಯಾಸರು ವೇದಶಾಸ್ತçಗಳಲ್ಲಿ ಪರಿಣಿತರಾಗಿದ್ದರು. ಮುಖ್ಯವಾಗಿ ಇವರು ರಚಿಸಿದಮಹಾಭಾರತ’ ಅತಿದೊಡ್ಡ ಗ್ರಂಥವಾಗಿದೆ. ಅಲ್ಲದೆ ಪುರಾಣಗಳು, ಉಪನಿಷತ್‌ಗಳನ್ನು ರಚಿಸಿರುವರು. ವೇದ' ಎಂಬ ಪದಕ್ಕೆ ಸಂಸ್ಕೃತದಲ್ಲಿವಿತ್’ ಎನ್ನಲಾಗಿದೆ. ಅಂದರೆ ಜ್ಞಾನ' ಎಂದರ್ಥ. ಈ ವೇದಗಳಿಂದಲೇ ಆರು ಉಪವೇದಗಳು ಆವಿರ್ಭವಿಸಿವೆ. ಅವುಗಳು ಯಾವುವೆಂದರೆ- ಶಿಕ್ಷಾ, ಕಲ್ಪ, ವ್ಯಾಕರಣ, ನಿರುಕ್ತ, ಛಂದಸ್ಸು ಮತ್ತು ಜ್ಯೋತಿಷ್ಯ. ತಂತ್ರಜ್ಞಾನಗಳಿಗೆ ವೇದ ವಿಜ್ಞಾನವೇ ಮೂಲವಾಗಿದೆ. ಯಾವುದೇ ರೀತಿಯ ವಿದ್ಯೆಯನ್ನು ಕಲಿಯಬೇಕಾದರೂ ಗುರುವಿನ ಪಾತ್ರ ಅತಿಮುಖ್ಯ.ಗು’ ಎಂದರೆ ಅಜ್ಞಾನ',ರು’ ಎಂದರೆ ಹೋಗಲಾಡಿಸು'ವವನು. ಯಾರು ನಮ್ಮ ಅಜ್ಞಾನವನ್ನು ಹೋಗಲಾಡಿಸುವನೋ ಅವನೇಗುರು’. ಕೆಲವರು ನಮ್ಮ ಬುದ್ಧಿಯೇ ಜ್ಞಾನ ಎನ್ನುವರು. ಮತ್ತೆ ಕೆಲವರು ಕೆಲವು ಶಾಸ್ತçಗಳಲ್ಲಿರುವ ಶಬ್ದವನ್ನು ಜ್ಞಾನ ಎನ್ನುವರು. ಇವುಗಳೆಲ್ಲ ನಮ್ಮ ಪಂಚೇಂದ್ರಿಯಗಳ ಮೂಲಕ ಪ್ರಾಪ್ತವಾಗುವ ಜ್ಞಾನ. ಆದರೆ, ಮಹಾಜ್ಞಾನಿಗಳು ಆಂತರಿಕ ಅರಿವನ್ನೇ ಜ್ಞಾನವೆಂದು ಹೇಳುತ್ತಾರೆ. ಅಂದರೆ, ನಾನು ನಾನು… ಎಂಬುದನ್ನು ತಿಳಿಯುವುದೇ ಜ್ಞಾನ. ರಮಣ ಮಹರ್ಷಿಗಳು ಸಹ ಇದನ್ನೇ ಹೇಳಿದ್ದಾರೆ. ಗುರುಪೂರ್ಣಿಮೆ ದಿನ ಪೀಠಾಧಿಪತಿಗಳು ಸನ್ಯಾಸಿಗಳು, ಯತಿಗಳು, ವ್ಯಾಸಮುನಿಗಳ ಪೂಜೆಯನ್ನು ಮಾಡಿ ಚಾತುರ್ಮಾಸದ ವ್ರತವನ್ನು ಪ್ರಾರಂಭಿಸುತ್ತಾರೆ. ಈ ವ್ರತದ ಸಮಯದಲ್ಲಿ ಎರಡು ತಿಂಗಳುಗಳ ಕಾಲ ಒಂದೇ ಊರಿನಲ್ಲಿದ್ದು ಮಠ ಮಂದಿರಗಳಲ್ಲಿ ವಾಸವಾಗಿದ್ದು ಪೂಜಾ ವ್ರತಗಳನ್ನು ಮಾಡಿ ಪ್ರತಿದಿನ ಸಂಜೆ ಭಕ್ತರಿಗೆ ಪ್ರವಚನ ನೀಡಬೇಕು.
ಮನುಷ್ಯನಿಗೆ ಅವಶ್ಯವಾದ ವಸ್ತು ಯಾವುದು ಎಂದರೆ ಜ್ಞಾನ'. ಜ್ಞಾನ ಎಂದರೆ ತಿಳುವಳಿಕೆ ಎಂದು. ತಿಳುವಳಿಕೆ ಮನುಷ್ಯನಿಗೆ ಅತಿಮುಖ್ಯ. ಇದು ಇದ್ದರೆ ಆತ ಸರಿಯಾದ ಮಾರ್ಗದಲ್ಲಿ ನಡೆಯಬಲ್ಲ. ಜ್ಞಾನ ಇಲ್ಲದೆ ಇದ್ದರೆ ಸರಿಯಾದ ಮಾರ್ಗದಲ್ಲಿ ನಡೆಯಲಾರ. ಆಗ ಆತನು ತಪ್ಪುದಾರಿಯಲ್ಲಿ ನಡೆದು ಅನರ್ಥವನ್ನು ಪಡೆಯುವ ಸಂದರ್ಭ ಬರುತ್ತದೆ. ಆದ್ದರಿಂದ ಜ್ಞಾನ ಪಡೆಯಬೇಕಾದದ್ದು ಅತಿಮುಖ್ಯ. ಜ್ಞಾನಕ್ಕೆ ಸಮನಾದ ಪವಿತ್ರ ವಸ್ತು ಲೋಕದಲ್ಲಿ ಮತ್ತೊಂದಿಲ್ಲ.ನ ಹಿ ಜ್ಞಾನೇನ ಸದೃಶಂ ಪವಿತ್ರಮಿಹ ವಿದ್ಯತೇ’ ಎಂದು ಶ್ರೀಕೃಷ್ಣ ಪರಮಾತ್ಮ ಭಗವದ್ಗೀತೆಯಲ್ಲಿ ಹೇಳಿರುವನು. ಆದ್ದರಿಂದ ಪ್ರತಿಯೊಬ್ಬರೂ ಅತ್ಯವಶ್ಯಕವಾಗಿ ಜ್ಞಾನವನ್ನು ಪಡೆಯಬೇಕು. ಈ ಕಾರಣಕ್ಕಾಗಿ ವಿದ್ಯಾಭ್ಯಾಸವನ್ನು ಮಾಡುತ್ತೇವೆ. ಕಾರಣ ಜ್ಞಾನಾರ್ಜನೆ ಬರಬೇಕು ಎಂದು. ಮನುಷ್ಯನ ಜೀವನ ವ್ಯರ್ಥವಾಗಬಾರದು. ಎಂದರೆ, ವಿದ್ಯೆಯನ್ನು ಪಡೆಯಬೇಕು. ಈ ವಿದ್ಯೆ ಹೇಗಿರಬೇಕು ಎಂದರೆ ಯಾವ ವಿದ್ಯೆಯನ್ನು ಕಲಿತಿದ್ದರಿಂದ ನಮ್ಮ ಜೀವನ ಮಾತ್ರವಲ್ಲ ನಿಮ್ಮಿಂದ ಹತ್ತು ಜನರಿಗೆ ಒಳ್ಳೆಯದಾಗಬೇಕು, ಸಮಾಜಕ್ಕೆ ಒಳ್ಳೆಯದಾಗಬೇಕು, ದೇಶಕ್ಕೆ ಒಳ್ಳೆಯದಾಗಬೇಕು ಅಂತಹ ವಿದ್ಯೆಯನ್ನು ಕಲಿಯಬೇಕು. ದೇವರನ್ನು ಅರಿಯಲು ಅಥವಾ ಮಹೋನ್ನತ ಅಧ್ಯಾತ್ಮಿಕ ತತ್ವಗಳನ್ನು ಅರಿಯಲು ಸಾಧ್ಯವಾಗುವುದಾದರೆ ಅದು ಗುರುವಿನ ಮಾರ್ಗದಿಂದ ಮಾತ್ರ ಸಾಧ್ಯ. ಬುದ್ಧಿ ಮನಸ್ಸುಗಳಿಗೆ ಅಮರಿಕೊಂಡ ಅಜ್ಞಾನದ ಕತ್ತಲೆಯನ್ನು ನಿವಾರಿಸಿ ಆತ್ಮಚಿಂತನೆಯ ವಿವೇಕದ ಬೆಳಕನ್ನು ಕಂಡುಕೊಳ್ಳಲು ಶಿಷ್ಯವೃಂದಕ್ಕೆ ಪ್ರೇರಣೆ ನೀಡುವನೆಂಬ ಅನ್ವಯಾರ್ಥ ಗುರು' ಪದಕ್ಕಿದೆ. ಸಂಸ್ಕೃತದಲ್ಲಿಗುರು’ ಎಂಬ ಶಬ್ದಕ್ಕೆ ಭಾರ'ವಾದದ್ದು ಎಂಬ ಅರ್ಥವೂ ಇದೆ. ಜ್ಞಾನದಿಂದ ಭಾರವಾಗಿರುವವನಾತ, ಜ್ಞಾನದಿಂದ ಪರಿಪೂರ್ಣನಾಗಿರುವವನಾತ.ಗು’ ಎಂದರೆ ಗುಣಗಳಿಗೆ ಅತೀತ, ರು' ಎಂದರೆ ರೂಪವನ್ನು ಮೀರಿದಾತ ಎನ್ನುತ್ತದೆ ಗುರುಗೀತೆ. ತಂದೆ-ತಾಯಿ, ತಾಯಿ-ಮಗ ಮುಂತಾದ ಸಂಬಂಧ ಸಾಮಾನ್ಯವಾಗಿ ಎಲ್ಲ ಪ್ರಾಣಿವರ್ಗದಲ್ಲಿ ಕಾಣಬಹುದು. ಕೆಲವು ಪಶುಪಕ್ಷಿಗಳಲ್ಲಿ ಅಲ್ಪಸ್ವಲ್ಪ ಕಾಲದವರೆಗೆ ಪತಿ-ಪತ್ನಿ ಸಂಬಂಧ ಪಾಲಿಸುವುದನ್ನು ನಾವು ಕಾಣುತ್ತೇವೆ. ಆದರೆ ಗುರು-ಶಿಷ್ಯ ಸಂಬಂಧ ಮನುಷ್ಯೇತರ ಪ್ರಾಣಿಗಳಲ್ಲಿ ಕಾಣಸಿಗುವುದಿಲ್ಲ. ಗುರು ಎಂಬ ಪದದ ಅರ್ಥವು ಸಂಸ್ಕೃತ ಮಾತ್ರವಲ್ಲದೆ ಕನ್ನಡ, ಮರಾಠಿ, ಬಂಗಾಲಿ, ಗುಜರಾತ್ ಮುಂತಾದ ಭಾರತೀಯ ಭಾಷೆಗಳಲ್ಲೂ ಕಾಣಬಹುದು. ಮುಂಡಕೋಪನಿಷತ್ತಿನಲ್ಲಿ ನಾವು ಎರಡು ವಿಧವಾದ ಗುರುವನ್ನು ಕಾಣುತ್ತೇವೆ. ಪರಾವಿದ್ಯೆಯನ್ನು ಕಲಿಸುವವನು ಒಬ್ಬ ಗುರು. ಅಪರಾವಿದ್ಯೆಯನ್ನು ಕಲಿಸುವವನು ಇನ್ನೊಬ್ಬ ಗುರು. ಅಪರಾವಿದ್ಯೆ ಎಂಬುದು ಈಗಾಗಲೇ ಎಲ್ಲೆಡೆ ಪ್ರಸಿದ್ಧವಾಗಿದೆ. ಅಂದರೆ ಭೌತವಿಜ್ಞಾನ, ಇತಿಹಾಸ, ರಸಾಯನಶಾಸ್ತ್ರ, ಸಮಾಜಶಾಸ್ತ್ರ, ಜೀವಶಾಸ್ತ್ರ ಇತ್ಯಾದಿ.ಪರಾವಿದ್ಯೆ’ ಎಂದರೆ ಕಾಲ, ಸ್ಥಳ ಮೀರಿದ ಸ್ವಜ್ಞಾನ ಅಂದರೆ, ಮನುಷ್ಯ ತನ್ನನ್ನು ತಾನು ತಿಳಿದುಕೊಳ್ಳುವುದು. ಉದಾ: ನಾನು ಯಾರು? ಇಲ್ಲಿಗೆ ಏಕೆ ಬಂದೆ? ಎಲ್ಲಿಗೆ ಹೋಗುತ್ತೇನೆ? ಆತ್ಮ' ಎಂದರೇನು ಇದನ್ನು ತಿಳಿಯುವುದು ಪರಾವಿದ್ಯೆ. ಗುರುವಿನ ಮಹಿಮೆ ಎಷ್ಟು ಹೇಳಿದರೂ ಸಾಲದು. ಹಲವಾರು ಗ್ರಂಥಗಳಲ್ಲಿ ಗುರುವಿನ ಮಹಿಮೆ ತಿಳಿಸಿದ್ದಾರೆ. ಶ್ರೀ ಶ್ರೀ ಶಂಕರಾಚಾರ್ಯರು ತಮ್ಮಗುರು ಅಷ್ಟಕಂ’ನಲ್ಲಿ ಗುರುವಿನ ಮಹಿಮೆಯನ್ನು ಕೊಂಡಾಡಿದ್ದಾರೆ.

ವಿಶೇಷ ಲೇಖನ
ಮಂಡಗದ್ದೆ ಪ್ರಕಾಶಬಾಬು ಕೆ.ಆರ್‌