ಬೆಲೆ ಏರಿಕೆ ಮಾಡಿ ವಸೂಲಿಗೆ ಇಳಿದಿದೆ

Advertisement

ಬೆಂಗಳೂರು: ಅಧಿಕಾರಿಗಳ ವರ್ಗಾವಣೆಗೆ ಭರ್ಜರಿ ಬೆಲೆ ಏರಿಕೆ ಮಾಡಿ ವಸೂಲಿಗೆ ಇಳಿದಿದೆ ಎಂದು ಬಿಜೆಪಿ ಕರ್ನಾಟಕ ಕಾಂಗ್ರೆಸ್‌ ಪಕ್ಷವನ್ನು ಸಾಮಾಜಿಕ ಜಾಲತಾಣದಲ್ಲಿ ತರಾಟೆ ತೆಗೆದುಕೊಂಡಿದೆ, ಅವರು ತಮ್ಮ ಟ್ವೀಟ್‌ನಲ್ಲಿ “ರಾಜ್ಯದಲ್ಲಿ ದಿನ ದಿನಕ್ಕೂ ತರಕಾರಿ, ದಿನಸಿ ವಸ್ತುಗಳ ಬೆಲೆ ಏರಿಕೆ ಮುಗಿಲು ಮುಟ್ಟುತ್ತಿದೆ. ಜನಸಾಮಾನ್ಯರನ್ನು ಗುರಿಯಾಗಿಸಿಕೊಂಡಿರುವ #ATMSarkara ಉಸಿರುಗಟ್ಟಿಸುವ ವಾತಾವರಣ ನಿರ್ಮಿಸಿದೆ. ಮತ್ತೊಂದಡೆ ಸಿದ್ದರಾಮಯ್ಯ ಸರ್ಕಾರ ವರ್ಗಾವಣೆಯ ಬೆಲೆ ಏರಿಕೆ ದಂಧೆ ಶುರು ಮಾಡಿದೆ. ಡಿ ಗ್ರೂಪ್ ನೌಕರರಿಂದ ಹಿಡಿದು ಐಎಎಸ್ ಅಧಿಕಾರಿಗಳ ವರ್ಗಾವಣೆಗೆ ಭರ್ಜರಿ ಬೆಲೆ ಏರಿಕೆ ಮಾಡಿ ವಸೂಲಿಗೆ ಇಳಿದಿದೆ. ದೇಶದೆಲ್ಲೆಡೆ ಸೋತು-ಸುಣ್ಣವಾಗಿದ್ದ ಕೈ ಪಕ್ಷ, ಕರ್ನಾಟಕದಲ್ಲಿ ಅವಾಸ್ತವಿಕ ಗ್ಯಾರಂಟಿಗಳ ಹೆಸರಿನಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ಬಂದಿದ್ದು, ಅಧಿಕಾರಕ್ಕೆ ಬಂದ ಬಳಿಕ, ಗ್ಯಾರಂಟಿ ಗಳ ಅನುಷ್ಠಾನದಲ್ಲಿ ನಾಡ ಜನತೆಗೆ ದ್ರೋಹ ಬಗೆದಿದೆ. ಇದನ್ನು ಸಹಿಸುವುದಾದರು ಹೇಗೆ? ಅಧಿಕಾರಕ್ಕೆ ಬಂದ ತಕ್ಷಣ ತನ್ನ ನೆರಳಿನಂತೆ ಕಾರ್ಯ ನಿರ್ವಹಿಸಿದ್ದ ಮಿಷನರಿಗಳ, ಪಿ.ಎಫ್.ಐ ಗಳ ಋಣ ತೀರಿಸಲು ಮತಾಂತರ ನಿಷೇಧ ಹಾಗೂ ಗೋಹತ್ಯೆ ನಿಷೇಧ ಕಾಯ್ದೆಯನ್ನು ವಾಪಸ್ ಪಡೆಯಲು ಮುಂದಾಗಿರುವ ಸರ್ಕಾರದ ಈ ತುಘಲಕ್ ನೀತಿಗೆ ನಮ್ಮ ಧಿಕ್ಕಾರವಿದೆ. ಕಾಂಗ್ರೆಸ್‌ನ ಹಿರಿಯ ನಾಯಕ ರಮೇಶ್ ಕುಮಾರ್ ಅವರೇ ಹೇಳಿರುವಂತೆ ನಾಲ್ಕೈದು ತಲೆಮಾರುಗಳಿಗಾಗುವಷ್ಟು ಅಕ್ರಮ ಸಂಪತ್ತನ್ನು ಆ ಪಕ್ಷದ ನಾಯಕರು ಅಕ್ರಮವಾಗಿ ಗಳಿಸಿಕೊಂಡಿದ್ದರು ಅವರ್ಯಾರಿಗೂ ಹಣದ ದಾಹ ಇನ್ನು ನೀಗಿಲ್ಲ. ರಾಜ್ಯದ ಜನರ ತೆರಿಗೆ ಹಣವನ್ನು ಭ್ರಷ್ಟಾಚಾರದ ಮೂಲಕ ಅಕ್ರಮವಾಗಿ ಸಂಪಾದಿಸಿ ದೆಹಲಿ ಏಜೆಂಟರ ಮೂಲಕ ಕಳುಹಿಸುತ್ತಿರುವ ಈ ಸರ್ಕಾರಕ್ಕೆ ಜನತೆ ಕಪಾಳಮೋಕ್ಷ ಮಾಡಲಿದೆ. ವರ್ಗಾವಣೆ ಅವಧಿಯನ್ನು ನಿರಂತರವಾಗಿ ವಿಸ್ತರಿಸುತ್ತಾ, ಆ ದಂಧೆಯಲ್ಲಿ ಮುಳುಗಿರುವ ಹಾಗೂ ನಾಡಿನಲ್ಲಿ ಉಂಟಾಗಿರುವ ಬರ ಮತ್ತು ಬೆಲೆಯೇರಿಕೆಯನ್ನು ಸಂಪೂರ್ಣವಾಗಿ ಮರೆತು ವಿಲಾಸಿ ಜೀವನ ನಡೆಸುತ್ತಿರುವ ಈ ಆಲಸಿ #ATMSarkara ವನ್ನು ನಿದ್ದೆಯಿಂದ ಎಬ್ಬಿಸುತ್ತೇವೆ. “ನುಡಿದಂತೆ ಗ್ಯಾರಂಟಿ ಕೊಡಿ – ಇಲ್ಲವೇ ಕುರ್ಚಿ ಬಿಡಿ” ಎಂಬ ನಿಟ್ಟಿನಲ್ಲಿ ಬಿಜೆಪಿ ಕರ್ನಾಟಕ ರಾಜ್ಯಾದ್ಯಂತ ಹೋರಾಟ ಆರಂಭಿಸಿದ್ದು, ನಾಡಿನ ಜನತೆಗೆ ದ್ರೋಹ ಬಗೆಯಲು ಯತ್ನಿಸುತ್ತಿರುವ ನಾಡದ್ರೋಹಿ ಕರ್ನಾಟಕ ಕಾಂಗ್ರೆಸ್‌ ಸರ್ಕಾರಕ್ಕೆ ತಕ್ಕ ಪಾಠ ಕಲಿಸಲಿದ್ದೇವೆ ಎಂದು ಟ್ವೀಟ್‌ ಮಾಡಿದ್ದಾರೆ.