ಇಂದಿನಿಂದ ಶ್ರೀ ಜಯತೀರ್ಥ ಗುರುಸಾರ್ವಭೌಮರ ಆರಾಧನಾ ಮಹೋತ್ಸವ

Advertisement

ಹುಬ್ಬಳ್ಳಿ: ಶ್ರೀಮನ್ಯಾಯ ಸುಧಾ ಎಂ ಮೇರು ಕೃತಿಯನ್ನು ರಚಿಸಿದ ಮಂತ್ರಾಲಯ ರಾಘವೇಂದ್ರಸ್ವಾಮಿಮಠದ ಪೂರ್ವಿಕ ಗುರುಗಳಾದ ಶ್ರೀ ಜಯತೀರ್ಥರ ಆರಾಧನೆಯನ್ನು ಜುಲೈ ೬ರ ಮತ್ತು ೭ ರಂದು ಆನೇಗುಂದಿಯ ಶ್ರೀಮಠದಲ್ಲಿ ಹಾಗೂ ಜುಲೈ ೮, ೯ ಮತ್ತು ೧೦ ರಂದು ನವಬೃಂದಾವನದ ಶ್ರೀ ಜಯತೀರ್ಥರ ಮೂಲಬೃಂದಾವನದ ಸನ್ನಿಧಾನದಲ್ಲಿ ಮಂತ್ರಾಲಯ ಶ್ರೀ ರಾಘವೇಂದ್ರಸ್ವಾಮಿಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ಶ್ರೀಪಾದಂಗಳ ಅಧ್ಯಕ್ಷತೆಯಲ್ಲಿ ನೆರವೇರಿಸಲಾಗುತ್ತದೆ ಎಂದು ಮಂತ್ರಾಲಯ ರಾಘವೇಂದ್ರಸ್ವಾಮಿಮಠದ ಶಿಷ್ಯ ಸಂಪರ್ಕಾಧಿಕಾರಿ ಎನ್.ವಾದಿರಾಜಾಚಾರ್ಯ ತಿಳಿಸಿದ್ದಾರೆ.
ಶ್ರೀಮಠದ ಶಿಷ್ಯರು ಹಾಗೂ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು. ತತ್ಕಾಲದಲ್ಲಿ ನಡೆಯುವ ಬೃಂದಾವನಗಳಿಗೆ ಪಂಚಾಮೃತ ಅಭಿಷೇಕ, ವಿದ್ವಾಂಸರ ಪ್ರವಚನ, ಪೂಜೆ, ಭಜನೆ, ಅಷ್ಟೋತ್ತರ ಪಾರಾಯಣ ಇತ್ಯಾದಿ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಶ್ರೀಪಾದಂಗಳವರಿಂದ ಫಲಮಂತ್ರಾಕ್ಷತೆಯನ್ನು ಪಡೆದು ಹರಿವಾಯು ಗುರುಗಳ ಅನುಗ್ರಹಕ್ಕೆ ಪಾತ್ರರಾಗಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.