ಸ್ಮಾರ್ಟ್ ಸಿಟಿ ಎಡವಟ್ಟು: ಆಕಳು, ಕರು ಬಲಿ…

Advertisement

ಹುಬ್ಬಳ್ಳಿ: ಸ್ಮಾರ್ಟ್ ಸಿಟಿ ಯೋಜನೆಯಡಿ ನಡೆಯುತ್ತಿರುವ ಕಾಮಗಾರಿಗಳಿಂದ ಒಂದಲ್ಲ ಒಂದು ಯಡವಟ್ಟು ನಡೆಯುತ್ತಲೇ ಇವೆ. ಅದರಂತೆ ಇಂದೂ ಸಹ, ಸ್ಮಾರ್ಟ್ ಸಿಟಿ ಕಾಮಗಾರಿ ನಡೆಸುತ್ತಿರುವ ಗುತ್ತಿಗೆದಾರನ ನಿರ್ಲಕ್ಷ್ಯದಿಂದ ವಿದ್ಯುತ್ ಪ್ರವಹಿಸಿ ಹಸು ಮತ್ತು ಕರು ಮೃತಪಟ್ಟಿವೆ.

ನಗರದ ಅಕ್ಕಿಹೊಂಡದಲ್ಲಿ ಕೆಲ ದಿನಗಳಹಿಂದೆ ಸ್ಮಾರ್ಟ್ ಸಿಟಿ ಕಾಮಗಾರಿಯ ಭಾಗವಾಗಿ ಅಂಡ್ರಗ್ರೌಂಡ್ ವಿದ್ಯುತ್ ಕೇಬಲ್ ಅಳವಡಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ವಿದ್ಯುತ್ ನಿರ್ವಹಣೆಗೆ ಅಳವಡಿಸಲಾಗಿದ್ದ ವಿದ್ಯುತ್ ಫೀಡರ್ ಪಿಲ್ಲರ ಬಳಿ ಶಾರ್ಟ್ ಅಗಿ ಸುತ್ತಲಿನ 5ಮೀಟರ್ ವ್ಯಾಪ್ತಿಯಲ್ಲಿ ವಿದ್ಯುತ್ ಪ್ರವಹಿಸುತ್ತಿದೆ. ಸತತ ಮಳೆಯಿಂದ ನೆಲವೂ ಹಸಿಯಾಗಿ ಅಲ್ಲೇ ಆಸರೆ ಪಡೆದಿದ್ದ ಹಸು ಮತ್ತು ಕರು ಕರೆಂಟ್ ಶಾಕ್ ನಿಂದ ಅಸುನೀಗಿವೆ.

ಘಟನೆ ನಡೆಸು ತಾಸು ಕಳೆದರೂ ಸ್ಥಳಕ್ಕೆ ಸ್ಮಾರ್ಟ್ ಸಿಟಿ ಅಧಿಕಾರಿಗಳು ಮತ್ತು ಹೆಸ್ಕಾಂ ಅಧಿಕಾರಿಗಳು ಸ್ಥಳಕ್ಕೆ ಆಗಮಿಸದಿರುವುದು ಸಾರ್ವಜನಿಕರ ಆಕ್ರೋಷಕ್ಕೆ ಕಾರವಾಗಿದೆ.

ಇನ್ನು ಫೀಡರ್ ಪಿಲ್ಲರ ಸುತ್ತಲಿನ 5ಮೀ ವ್ಯಾಪ್ತಿಯಲ್ಲಿ ನೆಲವೂ ಸಹ ಶಾಕ್ ಹೊಡೆಯುತ್ತಿದೆ. ಅಕ್ಕಿ ಹೊಂಡ ಪ್ರಮುಖ ವ್ಯಾಪಾರಿ ಕೇಂದ್ರವಾಗಿದ್ದು, ಬೆಳಗಿನ ಸಮಯ ಆದ್ದರಿಂದ ಜನ ದಟ್ಟನೆ ಕಡಿಮೆ ಇತ್ತು. ಹೀಗಾಗಿ ದೊಡ್ಡ ಅನಾಹುತ ತಪ್ಪಿದೆ.