ಹಿಂದಿನ ಕಾರ್ಯಕ್ರಮಗಳಿಗೆ ಮರುಜೀವ

Advertisement

ಕೊಪ್ಪಳ(ಕುಷ್ಟಗಿ): ರಾಜ್ಯ ಆರ್ಥಿಕ ಸಂಕಷ್ಟ ಅನುಭವಿಸುತ್ತಿದ್ದರೂ ಚುನಾವಣಾ ಪೂರ್ವದಲ್ಲಿ ಕಾಂಗ್ರೆಸ್ ವತಿಯಿಂದ ನೀಡಿರುವ ಐದು ಗ್ಯಾರಂಟಿಗಳನ್ನು ಕೊಡುವ ಮೂಲಕ ಅರ್ಥಪೂರ್ಣ ಬಜೆಟ್ ಮಂಡನೆ ಮಾಡಿ ಜನತೆಯ ಮೆಚ್ಚುಗೆಗೆ ಸಿದ್ದರಾಮಯ್ಯನವರು ಪಾತ್ರರಾಗಿದ್ದಾರೆ ಎಂದು ಮಾಜಿ ಸಚಿವ ಅಮರೇಗೌಡ ಪಾಟೀಲ್ ಬಯ್ಯಾಪುರ ಹೇಳಿದ್ದಾರೆ. ಈ ಹಿಂದೆ ಮುಖ್ಯಮಂತ್ರಿ ಆಗಿದ್ದ ವೇಳೆಯಲ್ಲಿ ಸಾಕಷ್ಟು ಕಾರ್ಯಕ್ರಮಗಳನ್ನು ಘೋಷಣೆ ಮಾಡಿದ್ದರು. ತದನಂತರ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಎಲ್ಲಾ ಕಾರ್ಯಕ್ರಮಗಳನ್ನು ರದ್ದು ಮಾಡಲಾಗಿತ್ತು. ಮತ್ತೆ ಮುಖ್ಯಮಂತ್ರಿ ಆದ ಮೇಲೆ ಹಿಂದೆ ಘೋಷಣೆ ಮಾಡಿದ್ದ ಕಾರ್ಯಕ್ರಮಗಳಿಗೆ ಮರು ಜೀವ ನೀಡಿದ್ದಾರೆ. ಪ್ರಸಕ್ತ ಸಾಲಿನಲ್ಲಿ ಮಹಿಳಾ ಉದ್ದೇಶಿತ ಯೋಜನೆಗಳಿಗೆ ೭೦,೪೨೭ ಕೋಟಿ ರೂ, ಮಕ್ಕಳ ಯೋಜನೆಗಳಿಗೆ ೫೧,೨೨೦ ಕೋಟಿ ರೂ, ಅನ್ನಭಾಗ್ಯ ೧೦,೦೦೦ ಕೋಟಿ ರೂ, ಗೃಹಜ್ಯೋತಿ ೧೩,೯೧೦ ಕೋಟಿ ರೂ, ಶಕ್ತಿ ಯೋಜನೆ ೪,೦೦೦ ಕೋಟಿ ರೂ, ಇಂದಿರಾ ಕ್ಯಾಂಟೀನ್ ೧೦೦ ಕೋಟಿ ರೂ, ನಮ್ಮ ಮೆಟ್ರೋ ೩೦,೦೦೦ ಕೋಟಿ ರೂ ಮೀಸಲಿಡಲಾಗಿದೆ. ಕೊಪ್ಪಳ, ಕಾರವಾರ, ಕೊಡಗು ಜಿಲ್ಲಾಸ್ಪತ್ರೆ ಉನ್ನತೀಕರಣ, ಕಲಬುರಗಿಯಲ್ಲಿ ೭೦ ಕೋಟಿ ರೂ. ವೆಚ್ಚದ ತಾಯಿ-ಮಗು ಆಸ್ಪತ್ರೆ, ಕನಕಪುರ ತಾಲೂಕಿನಲ್ಲಿ ಹೊಸ ವೈದ್ಯಕೀಯ ಕಾಲೇಜಿಗೆ ಅನುದಾನ ಮೀಸಲು ಇಟ್ಟಿದ್ದಾರೆ ಎಂದರು.