ಶ್ರೀಸುಬುಧೇಂದ್ರ ತೀರ್ಥ ಪಾದಂಗಳವರ 10ನೇ ಚಾತುರ್ಮಾಸ್ಯ ಸಂಪನ್ನ

ಚಾತುರ್ಮಾಸ್ಯ
Advertisement

ರಾಯಚೂರು: ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರ 10ನೇ ಚಾತುರ್ಮಾಸ್ಯ ದೀಕ್ಷಾ ವ್ರತ ಶನಿವಾರ ಸಂಪನ್ನಗೊಂಡಿತು.
ಕಳೆದ 48 ದಿನಗಳ ಕಾಲ ಶ್ರೀಮಗಳು ಮಠದಲ್ಲೇ ವ್ರತಾಚಾರಣೆ ಕೈಗೊಂಡಿದ್ದರು. ಸಮಾರೋಪ ಸಮಾರಂಭ ಹಿನ್ನೆಲೆಯಲ್ಲಿ ಮಠದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಶ್ರೀ ಬ್ರಹ್ಮ ಕರಾರ್ಚಿತ ಮೂಲರಾಮ ದೇವರಿಗೆ, ಶ್ರೀ ರಾಯರ ಮೂಲ ಬೃಂದಾವನಕ್ಕೆ ಮತ್ತು ಇತರೆ ಯತಿಗಳ ಬೃಂದಾವನಕ್ಕೆ ಶ್ರೀಗಳು ವಿಶೇಷ ಪೂಜೆಯನ್ನು ಸಲ್ಲಿಸಿದರು. ನಂತರ ಶ್ರೀಗಳು ಚಾತುರ್ಮಾಸ್ಯ ದೀಕ್ಷಾ ವಿರಮಿಸಿದರು. ಸಂಜೆ ತೀರ್ಥರು ಊರ ಹೊರಗಿನ ಕೊಂಡಾಪುರ ಪ್ರಾಣದೇವರ ದರ್ಶನ ದೇವಸ್ಥಾನಕ್ಕೆ ತೆರಳುವ ಮೂಲಕ ಸೀಮೋಲ್ಲಂಘನ ಮಾಡಿದರು. ಶ್ರೀಗಳನ್ನು ವಿವಿಧ ವಾದ್ಯ ಮೇಳಗಳೊಂದಿಗೆ ಮೆರವಣಿಗೆ ಮೂಲಕ ಮಠಕ್ಕೆ
ಬರಮಾಡಿಕೊಳ್ಳಲಾಯಿತು. ನಂತರ ತುಲಾಭಾರ ಸೇವೆ ಸೇರಿದಂತೆ ವಿವಿಧ ಕಾರ್ಯಕ್ರಮಗಳು ನಡೆದವು.