ಹಳೇ ಬಾಟಲಿಯಲ್ಲಿ ಅಕ್ರಮ ಮದ್ಯ: ಇಬ್ಬರ ಬಂಧನ

Advertisement

ಬೆಳಗಾವಿ: ಸಿಸಿಬಿ ಪೊಲೀಸರು ನಗರದಲ್ಲಿ ಶನಿವಾರ ವ್ಯಾಪಕ ಬೇಟೆ ನಡೆಸಿದ್ದು, ಅಪಾರ್ಟ್‌ಮೆಂಟ್‌ಗಳ ಮೇಲೆ ದಾಳಿ ನಡೆಸಿ ಅಪಾರ ಪ್ರಮಾಣದ ನಕಲಿ ಮದ್ಯವನ್ನು ವಶಪಡಿಸಿಕೊಂಡಿದ್ದಾರೆ.

ಇಲ್ಲಿನ ಸದಾಶಿವ ನಗರದ ವೀರುಪಾಕ್ಷಿ ರೆಸಿಡೆನ್ಸಿ ಅಪಾರ್ಟ್‌ಮೆಂಟ್‌ನಲ್ಲಿ ನಕಲಿ ಮದ್ಯ ತಯಾರಿಸುವ ಘಟಕದ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿ 4 ಲಕ್ಷ ಮೌಲ್ಯದ ನಕಲಿ ಮದ್ಯವನ್ನು ವಶಪಡಿಸಿಕೊಂಡಿದ್ದಾರೆ.

ಬೆಳಗಾವಿಯ ಉಜ್ವಲಾ ನಗರದ ಹಸನ್ ಜಾವೇದ್ ಬೇಪಾರಿ (೨೨) ಹಾಗೂ ಹಿಂಡಲಗಾ ವಿಜಯನಗರದ ವರ್ಷದ ರಾಕೇಶ ಕೇಶ(೪೨) ಎಂಬಾತ ಅಕ್ರಮವಾಗಿ ಮದ್ಯ ತಯಾರಿಸುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಬೆಳಗಾವಿಯ ಬಾರ್‌ಗಳು ಮತ್ತು ರೆಸ್ಟೋರೆಂಟ್‌ಗಳು ಅದಕ್ಕಾಗಿ ಖಾಲಿ ಮದ್ಯದ ಬಾಟಲಿಗಳನ್ನು ಸಂಗ್ರಹಿಸಿ ಲೇಬಲ್ ಅಂಟಿಸಿ, ರಸಾಯನಿಕ ಮಿಶ್ರಣವನ್ನು ಬೆರೆಸಿ, ಇತರೆ ಬ್ರ್ಯಾಂಡೆಡ್ ಮದ್ಯವನ್ನು ತಯಾರಿಸಿ ಮಾರಾಟ ಮಾಡುತ್ತಿದ್ದರು. ಈ ಜಾಲವನ್ನು ಸಿಸಿಬಿ ಇನ್ಸ್‌ಪೆಕ್ಟರ್ ಅಲ್ತಾಫ್‌ ಮುಲ್ಲಾ ಬೇಧಿಸಿದ್ದಾರೆ. ನಗರ ಪೊಲೀಸ್ ಆಯುಕ್ತರ ಮೇಲ್ವಿಚಾರಣೆಯಲ್ಲಿ ಈ ದಾಳಿ ನಡೆಸಿದ ವೇಳೆ ಸಿಸಿಬಿ ಪೊಲೀಸರ ತಂಡ ಅಕ್ರಮ ಪತ್ತೆ ಮಾಡಿದೆ.