ಕನ್ನಡಕ್ಕೀಗ ಮತ್ತೊಂದು ಹೊಸ ಕುತ್ತು

ರಂಗನಾಥ
Advertisement

ಬೆಂಗಳೂರು ಮಹಾನಗರದ ಒಂದು ಪ್ರತಿಷ್ಠಿತ ಶಾಲೆ. ಆ ಶಾಲೆಯಲ್ಲಿ ಓದುತ್ತಿರುವ ಮಕ್ಕಳ ಪೈಕಿ ಐವತ್ತು ಮಕ್ಕಳ ಪೋಷಕರು ಪ್ರಾಂಶುಪಾಲರಿಗೆ ಪತ್ರ ಬರೆದು ತಮ್ಮ ಮಕ್ಕಳಿಗೆ ಕನ್ನಡ ಬೋದಿಸುವುದು ಬೇಡ ಎಂದು ಮನವಿ ಮಾಡಿಕೊಂಡಿದ್ದಾರೆ. ಪ್ರಾಂಶುಪಾಲರು ಆ ಪತ್ರವನ್ನು ಶಿಕ್ಷಣ ಇಲಾಖೆಗೆ ರವಾನಿಸಿದ್ದಾರೆ. ತಮ್ಮ ಮಕ್ಕಳು ಕನ್ನಡ ಕಲಿಯುವ ಅಗತ್ಯವಿಲ್ಲ ಎನ್ನುವ ಈ ಪೋಷಕರ ನಿಲುವು ಕರ್ನಾಟಕ ಸರ್ಕಾರದ ಭಾಷಾ ನೀತಿ ಮತ್ತು ಶಿಕ್ಷಣ ನೀತಿಗೆ ವಿರುದ್ಧವಾಗಿದೆ ಹಾಗೂ ಕನ್ನಡ ಭಾಷೆ ಮತ್ತು ಸಂಸ್ಕೃತಿ ಬಗ್ಗೆ ಈ ಪೋಷಕರ ತಾತ್ಸಾರ ಮನೋಭಾವವನ್ನೂ ಸೂಚಿಸುತ್ತದೆ. ಕರ್ನಾಟಕ ಸರ್ಕಾರದ ಕನ್ನಡ ಭಾಷೆ ಬೋಧನೆ ಶಾಸನ(೨೦೧೫)ದ ಪ್ರಕಾರ ರಾಜ್ಯದಲ್ಲಿರುವ ಎಲ್ಲ ಶಾಲೆಗಳೂ ವಿದ್ಯಾರ್ಥಿಗಳಿಗೆ ಕನ್ನಡವನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ಬೋಧಿಸಬೆಕಾದ್ದು ಕಡ್ಡಾಯ. ೨೦೨೨ರಲ್ಲಿ ಅಂಗೀಕರಿಸಲಾದ ಕನ್ನಡ ಭಾಷೆಯ ಸಮಗ್ರ ಅಭಿವೃದ್ಧಿ ಶಾಸನವೂ ಇದನ್ನು ಎತ್ತಿಹಿಡಿದಿದೆ.

ಪ್ರಪಂಚದ ಆಡುಭಾಷೆಗಳಲ್ಲಿ ಕನ್ನಡಕ್ಕೆ ಹೆಚ್ಚು ವ್ಯಾಪಕವಾದ ಆಡು ನುಡಿ ಎಂದು ಮೂವತ್ತನೆಯ ಸ್ಥಾನದ ಮಾನ್ಯತೆ ದೊರಕಿದೆ. ಕರ್ನಾಟಕದಲ್ಲಿ ಕನ್ನಡಿಗರೇ ಬಹುಸಂಖ್ಯಾತರು. ಜೈನರು, ಬೌದ್ಧರು, ಕ್ರಿಶ್ಚಿಯನ್ನರು ಮತ್ತು ಇಸ್ಲಾಮೀಯರು ಅಲ್ಪಸಂಖ್ಯಾತರು. ಆದರೆ ಇದು ವಾಸ್ತವವೇ ಎನ್ನುವ ಆತಂಕ ಇತ್ತೀಚಿನ ಬೆಳವಣಿಗೆಗಳಿಂದ ಕಾಡಲಾರಂಭಿಸಿದೆ ಪಂಪನ ಕಾಲದಿಂದ ಹಿಡಿದು ಕನ್ನಡಿಗ, ಜೈನಧರ್ಮೀಯರು ಹೆಚ್ಚು ಕಡಿಮೆ ಕನ್ನಡ ಮಾತೃ ಭಾಷಿಕರೇ ಆಗಿದ್ದಾರೆ. ಹೊರ ರಾಜ್ಯಗಳಿಂದ ಬಂದವರ ಬಗ್ಗೆ ಇದೇ ಮಾತನ್ನು ಹೇಳಲಾಗದು. ಕರ್ನಾಟಕವನ್ನು ನೆಲೆಯಾಗಿಸಿಕೊಂಡಿರುವ ಹೊರರಾಜ್ಯಗಳ ಅಲ್ಪ ಸಂಖ್ಯಾತರುಗಳಿಂದ ಈ ಆತಂಕ ಶುರುವಾಗಿದೆ. ಹಾಗೇ ನೋಡಿದರೆ ಇದು ಇತ್ತೀಚಿನ ಬೆಳವಣಿಗೆ ಏನಲ್ಲ. ಕಳೆದ ಶತಮಾನದಲ್ಲೇ ಶುರುವಾದ ವಿಕೃತ ಬೆಳವಣಿಗೆ.
ಕರ್ನಾಟಕದಲ್ಲಿ ಕನ್ನಡಿಗರೇ ಅಲ್ಪ ಸಂಖ್ಯಾತರಾಗುತ್ತಿದ್ದಾರೆಯೆ? ಕರ್ನಾಟಕದಲ್ಲಿ, ವಿಶೇಷವಾಗಿ ರಾಜಧಾನಿ ಬೆಂಗಳೂರು ಮಹಾನಗರದಲ್ಲಿ ಕನ್ನಡಿಗರ ಜನಸಂಖ್ಯೆ ಎಷ್ಟು? ೨೦೧೧ರ ಜನಗಣತಿ ಪ್ರಕಾರ ಕರ್ನಾಟಕದ ಜನಸಂಖ್ಯೆ ನಲವತ್ನಾಲ್ಕು ದಶಲಕ್ಷ. ಅಂದರೆ ನಾಲ್ಕು ಕೋಟಿಗೂ ಮೀರಿದ್ದು. ಇದರಲ್ಲಿ ಈಗಿನ ಒಂದು ಅಂದಾಜಿನ ಪ್ರಕಾರ ಆರೂವರೆ ಕೋಟಿ. ಇದರಲ್ಲಿ ಶೇಕಡ ೬೭ರಷ್ಟು ಮಂದಿ ಮೂಲನಿವಾಸಿ ಕನ್ನಡಿಗರು. ಇವರ ಮಾತೃಭಾಷೆ ಕನ್ನಡ. ಇನ್ನು ಉಳಿದವರ ಮಾತೃಭಾಷೆ ತೆಲುಗು, ತಮಿಳು, ಉರ್ದು, ಮಲೆಯಾಳಿ ಇತ್ಯಾದಿ.
ಬೆಂಗಳೂರಿನ ಜನಸಂಖ್ಯೆ ೧೩೬೦೮೦೦೦. ಇದರಲ್ಲಿ ಮಾತೃ ಭಾಷೆಯಾಗುಳ್ಳ ಸ್ಥಳೀಯ ಕನ್ನಡಿಗರ ಸಂಖ್ಯೆ ಶೇಕಡ ೪೧ಕ್ಕೂ ಕಡಿಮೆ. ಉಳಿದವರಲ್ಲಿ ಶೇ.೨೮ ತಮಿಳರು, ಶೇ.೧೭ತೆಲುಗರು, ಶೇ.೧೩ ಉರ್ದು ಮಾತ್ರಭಾಷಿಕರು, ಶೇ.೧೦ರಷ್ಟು ಮಲೆಯಾಳಿ ಭಾಷಿಕರು. ಹಿಂದಿ ಮಾತನಾಡುವವರು ಶೇ ೨.೫, ಶೇ. ೮ರಷ್ಟು ಐರೋಪ್ಯರು. ಶೇ. ೬ಷ್ಟು ಮಂದಿ ಬೇರಬೇರೆ ಜನಾಂಗಗಳಿಗೆ ಸೇರಿದವರು. ಅಂದರೆ ಬೆಂಗಳೂರು ಮಹಾನಗರದ ಒಟ್ಟು ಜನಸಂಖ್ಯೆಯಲ್ಲಿ ಅನ್ಯ ಭಾಷಿಕರ ಸಂಖ್ಯೆಯೇ ಶೇ ೯ರಷ್ಟಾಗುತ್ತದೆ.
ಈ ಅಂಕಿಸಂಖ್ಯೆಗಳ ಪ್ರಕಾರ ಬೆಂಗಳೂರಿನಲ್ಲಿ ಅನ್ಯ ಮಾತೃಭಾಷಿಕರ ಸಂಖ್ಯೆಯೇ ಹೆಚ್ಚು. ಕನ್ನಡ ಮಾತೃ ಭಾಷಿಕರು ಅಲ್ಪಸಂಖ್ಯಾತರು ಎಂದಾಯಿತು. ಕನ್ನಡಿಗರಾದ ನಾವು ಅಲ್ಪ ಸಂಖ್ಯಾತರು ಎನ್ನುವ ಭಾವನೆ ನಮ್ಮನ್ನು ತೀವ್ರವಾಗಿ ಕಾಡುವುದು ನಮ್ಮ ದಿನ ನಿತ್ಯದ ಹೊರ ಪ್ರಪಂಚದ ವ್ಯವಹಾರಗಳಲ್ಲಿ. ಅಂಗಡಿ ಮುಂಗಟ್ಟು. ಮನೆ ಕೆಲ, ನಿರ್ಮಾಣ ಕಾಮಗಾರಿಗಳು ಎಲ್ಲೇ ಹೋಗಿ ನಾವು ಅಲ್ಲಿ ಕಾಣುವುದು ಅನ್ಯ ಭಾಷಿಕರನ್ನು. ಅವರೊಡನೆ ವ್ಯವಹಾರ ನಮಗೆ ಅನಿವಾರ್ಯ. ತಮ್ಮ ಹೊಸ ಬದುಕನ್ನು ರೂಪಿಸಿಕೊಳ್ಳಲು ಕರ್ನಾಟಕಕ್ಕೆ ಬರುವ ಈ ಜನ ಕನ್ನಡವನ್ನು ಹಠದಿಂದ ಎಂಬಂತೆ ಕಲಿಯುವುದೇ ಇಲ್ಲ. ಅವರ ಜೊತೆ ನಾವು ಅವರ ಭಾಷೆಗಳಲ್ಲೇ ವ್ಯಹರಿಸಬೇಕು. ಅವರು ಕೇಳುವ ಪ್ರಶ್ನೆಗಳಿಗೆ ಅವರ ಭಾಷೆಯಲ್ಲೇ ಸ್ಪಂದಿಸಬೇಕು. ಬೆಂಗಳೂರು ಮಹಾನಗರ ಸಿಲಿಕಾನ್ ಸಿಟಿಯಾಗಿ ಬೆಳೆಯುವ ಉಮೇದಿನಿಂದ ಸಾಗಿದಂತೆ ಇಲ್ಲಿಗೆ ಉದ್ಯೋಗ ಅರಸಿ ಬರುವ ಅನ್ಯ ಭಾಷಿಕರ ವಲಸೆಯೂ ದೊಡ್ಡದಾಗಿದೆ. ಬೆಂಗಳೂರನ್ನು ಬ್ರಾಂಡ್ ನಗರ ಮಾಡುವ ಉತ್ಸಾಹದಲ್ಲಿ ನಮ್ಮ ಮಂತ್ರಿವರೇಣ್ಯರು ರತ್ನಗಂಬಳಿ ಹಾಸಿ ಹೊರಗಿನವರನ್ನು ಸ್ವಾಗತಿಸುತ್ತಿದ್ದಾರೆ. ಅನ್ಯಭಾಷಿಕರು ತಮ್ಮ ಪರಿವಾರದೋಂದಿಗೆ ಬರುತ್ತಾರೆ. ತಮ್ಮಲ್ಲಿನ ಉದ್ಯೋಗಗಳಿಗೆ ತಮ್ಮ ಭಾಷಿಕರನ್ನೆ ಕರೆಸಿಕೊಳ್ಳುವ ಸ್ವಜನಪಕ್ಷಪಾತವನ್ನು ತೋರುತ್ತಿದ್ದಾರೆ.ಇದರಿಂದ ರಾಜ್ಯದಲ್ಲಿ, ವಿಶೇಷವಾಗಿ ಬೆಂಗಳೂರಿನಲ್ಲಿ ಕನ್ನಡಿಗ ಅನಾಥನಾಗುವ ಸ್ಥಿತಿ ಉಂಟಾಗಿದೆ. ಕನ್ನಡಕ್ಕೀಗ ಹೊಸದೊಂದು ಕುತ್ತು ಬಂದಿದೆ. ಬೆಂಗಳೂರು ಮಹಾನಗರದ ಒಂದು ಪ್ರತಿಷ್ಥಿತ ಶಾಲೆ. ಆ ಶಾಲೆಯಲ್ಲಿ ಓದುತ್ತಿರುವ ಮಕ್ಕಳ ಪೈಕಿ ಐವತ್ತು ಮಕ್ಕಳ ಪೂಷಕರು ಪ್ರಾಂಶುಪಾಲರಿಗೆ ಪತ್ರ ಬರೆದು ತಮ್ಮ ಮಕ್ಕಳಿಗೆ ಕನ್ನಡ ಬೋದಿಸುವುದು ಬೇಡ ಎಂದು ಮನವಿ ಮಾಡಿಕೊಂಡಿದ್ದಾರೆ. ಪ್ರಾಂಶುಪಾಲರು ಆ ಪತ್ರವನ್ನು ಶಿಕ್ಷಣ ಇಲಾಖೆಗೆ ರವಾನಿಸಿದ್ದಾರೆ. ತಮ್ಮ ಮಕ್ಕಳು ಕನ್ನಡ ಕಲಿಯುವ ಅಗತ್ಯವಿಲ್ಲ ಎನ್ನುವ ಈ ಪೋಷಕರ ನಿಲುವು ಕರ್ನಾಟಕ ಸರ್ಕಾರದ ಭಾಷಾ ನೀತಿ ಮತ್ತು ಶಿಕ್ಷಣ ನೀತಿಗೆ ವಿರುದ್ಧವಾಗಿದೆ ಹಾಗೂ ಕನ್ನಡ ಭಾಷೆ ಮತ್ತು ಸಂಸ್ಕೃತಿ ಬಗ್ಗೆ ಈ ಪೋಷಕರ ತಾತ್ಸಾರ ಮನೋಭಾವವನ್ನೂ ಸೂಚಿಸುತ್ತದೆ.
ಕರ್ನಾಟಕ ಸರ್ಕಾರದ ಕನ್ನಡ ಭಾಷೆ ಬೋಧನೆ ಶಾಸನ(೨೦೧೫)ದ ಪ್ರಕಾರ ರಾಜ್ಯದಲ್ಲಿರುವ ಎಲ್ಲ ಶಾಲೆಗಳೂ ವಿದ್ಯಾರ್ಥಿಗಳಿಗೆ ಕನ್ನಡವನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ಬೋಧಿಸಬೆಕಾದ್ದು ಕಡ್ಡಾಯ. ೨೦೨೨ರಲ್ಲಿ ಅಂಗೀಕರಿಸಲಾದ ಕನ್ನಡ ಭಾಷೆಯ ಸಮಗ್ರ ಅಭಿವೃದ್ಧೀ ಶಾಸನವೂ ಇದನ್ನು ಎತ್ತಿಹಿಡಿದಿದೆ. ಈ ಶಾನಗಳ ಅನ್ವಯ ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಐವತ್ತು ಮಂದಿ ಪೋಷಕರ ಬೇಡಿಕೆಯನ್ನು ಗಂಭೀರವಾಗಿ ಪರಿಗಣಿಸಿದ್ದು ಆ ಪ್ರತಿಷ್ಠಿತ ಶಾಲೆಯಿಂದ ಸಮಜಾಯಿಷಿ ಕೇಳಿ ನೋಟೀಸ್ ಜಾರಿಮಾಡಿರುವುದು ಯಥೋಚಿತ ಕ್ರಮವಾಗಿದೆ. ಶಾಲೆಯಿಂದ ಉತ್ತರ ಬಂದ ನಂತರ ಈ ವಿಷಯದಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸುತ್ತೇವೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿಗಳು ತಿಳಿಸಿದ್ದಾರೆ. ಕನ್ನಡ ಮತ್ತು ಸಂಸಕೃತಿ ಸಚಿವ ಶಿವರಾಜ ಎಸ್. ತಂಗಡಿಯವರೂ ಶಿಕ್ಷಣ ಸಚಿವ ಮಧುಬಂಗಾರಪ್ಪನವರಿಗೆ ಪತ್ರ ಬರೆದು ಈ ಶಾಲೆಯ ವಿರುದ್ಧ ಕ್ರಮ ಜರುಗಿಸುವಂತೆ ಆಗ್ರಹಪಡಿಸಿರುವುದೂ ಸೂಕ್ತವಾಗಿದೆ. ಶಾಲೆಯೇನೋ ಎಂಟನೇ ತರಗತಿಯಿಂದ ಕನ್ನಡ ಬೋಧನೆ ನಿಲ್ಲಿಸಿರುವ ಸುದ್ದಿ ಸತ್ಯಕ್ಕೆ ದೂರವಾದುದೆಂದೂ ಶಾಲೆಯಲ್ಲಿ ಕನ್ನಡ ಭಾಷಾ ಬೋಧನೆ ಮುಂದುವರಿದಿದೆ ಎಂದೂ ಸಮಜಾಯಿಷಿ ನೀಡಿದೆ. ಆದರೂ ಇಂಗಿಷ್ ಮಾಧ್ಯಮದಲ್ಲಿ ಬೋಧಿಸುವ ಖಾಸಗಿ ಶಾಲೆಗಳ ಕನೆಡ ಪ್ರೀತಿ, ಒಲವುಗಳು ಯಾವ ಮಟ್ಟದ್ದು ಎಂಬುದು ಕನ್ನಡಿಗರಿಗೆ ತಿಳಿಯದ ರಹಸ್ಯವೇನಲ್ಲ.
ತಮ್ಮ ಮಕ್ಕಳಿಗೆ ಕನ್ನಡ ಭಾಷೆಯ ಬೋಧನೆ ಬೇಡ ಎಂಬ ಐವತ್ತು ಪೋಷಕರ ಮನವಿ ಸಾಮಾಜಿಕ ಜಾಲಗಳಲ್ಲಿ ಹಾಗೂ ಪತ್ರಿಕೆಗಳಲ್ಲಿ ವ್ಯಾಪಕವಾಗಿ ಪ್ರಸಾರಗೊಂಡಿದೆ. ಸಹಜವಾಗಿಯೇ ಕನ್ನಡದ ಅಭಿಮಾನಿಗಳಲ್ಲಿ ಆತಂಕ ಉಂಟುಮಾಡಿದೆ. ಕೆಲವರು ಈ ಪ್ರವೃತ್ತಿ ವಿರುದ್ಧ ಬಿಗಿ ಕ್ರಮ ಕೈಗೊಳ್ಳಬೇಕೆಂದು ಸರ್ಕಾರಕ್ಕೆ ಮೊರೆಹೋದರು. ಕನ್ನಡ ವಿರೋಧ ಇವತ್ತು ನಿನ್ನೆಯದಲ್ಲ.ಈ ವಿರೋಧ ಒಳಗಿನಿಂದಲೂ ಇದೆ, ಹೊರಗಿನಿಂದಲೂ ಇದೆ. ಕರ್ನಾಟಕ ಸರ್ಕಾರ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಕಡ್ಡಾಯವೆಂದಾಗ ಕೆಲವರು ಸುಪ್ರೀಂ ಕೋರ್ಟಿನ ಮೆಟ್ಟಿಲು ಹತ್ತಿದರು. ಶಿಕ್ಷಣ ಮಾಧ್ಯಮವನ್ನು ಪೋಷಕರಿಗೇ ಬಿಡಿ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದಾಗ ಆಗಿನ ಸಿದ್ದರಾಮಯ್ಯ ಸರ್ಕಾರ ಕನ್ನಡವನ್ನು ಕಡ್ಡಾಯವಾಗಿ ಕಲಿಸಬೇಕೆನ್ನುವ ಶಾಸನವನ್ನು ಜಾರಿಗೆ ತಂದಿತು. ಈಗ ಅದರ ವಿರುದ್ಧವೂ ದನಿ ಎದ್ದಿದೆ. ಇವತ್ತಿನ ಜನರಿಗೆ ಭಾಷೆ, ಸಂಸ್ಕೃತಿ, ಪರಂಪರೆಗಳು ಮುಖ್ಯವಲ್ಲ. ಹಣವಷ್ಟೇ ಮುಖ್ಯ. ತಮ್ಮ ಮಕ್ಕಳು ಡಾಕ್ಟ್ರೊ ಎಂಜಿನಿಯರೋ ಆಗಿ ಅಮೆರಿಕಕ್ಕೆ ಹೋಗಬೇಕು. ಡಾಲರುಗಟ್ಟಲೆ ಸಂಪಾದಿಸಬೇಕು. ಅದಕ್ಕಾಗಿ ಇಂಗ್ಲಿಷ್ ಬೇಕೇ ಬೇಕು. ಮೊನ್ನೆ ವಿಧಾನ ಸಭೆಯಲ್ಲೂ ಶಾಸಕರೊಬ್ಬರು ಹಳ್ಳಿಗಳಲ್ಲಿ ಇಂಗ್ಲಿಷ್ ಮಾಧ್ಯಮದ ಶಾಲೆಗಳನ್ನು ತೆರೆಯುವಂತೆ ಆಗ್ರಹಪಡಿಸಿದ್ದಾರೆ. ರವೀಂದ್ರನಾಥ ಠಾಕೂರ್, ಮಹಾತ್ಮ ಗಾಂಧಿ, ಸರ್ ಎಂ.ವಿಶ್ವೇಶ್ವರಯ್ಯ.ಇತ್ತೀಚಿನ ಇನ್ಫೋಸಿಸ್ ನಾರಾಯಣ ಮೂರ್ತಿ ಮೊದಲಾದವರೆಲ್ಲ ಮಾತೃಭಾಷೆಯ ಮಾಧ್ಯಮದಲ್ಲೇ ಕಲಿತು ವಿಶ್ವಪ್ರಸಿದ್ದರಾದವರು. ಇದನ್ನು ಕರ್ನಾಟಕದಲ್ಲಿ ನೆಲೆಸಿದವರೆಲ್ಲರೂ ಮನನ ಮಾಡಬೇಕು.
ಕನ್ನಡ ಅಭಿವೃದ್ಧಿ ಪ್ರಾಧಿಕಾರ ಆ ಶಾಲೆಗೆ ಭೇಟಿ ನೀಡಿ ಪ್ರತಿಯೊಬ್ಬ ವಿದ್ಯಾರ್ಥಿಯನ್ನೂ ಭೇಟಿ ಮಾಡಿ ಅಲ್ಲಿನ ಕನ್ನಡ ಪರಿಸ್ಥಿತಿ ಏನು ಎಂಬುದನ್ನು ತಿಳಿದುಕೊಳ್ಳಬೇಕು. ಕನ್ನಡ ಬೇಡ ಎಂದಿರುವ ಆ ಐವತ್ತು ಪೋಷಕರನ್ನೂ ಭೇಟಿ ಮಾಡಿ ಕನ್ನಡದ ಭಾಷೆ, ಸಂಸ್ಕೃತಿಗಳ ಮಹತ್ವವನ್ನು, ಪ್ರಜಾಪ್ರಭುತ್ವದ ಒಕ್ಕೂಟ ವ್ಯವಸ್ಥೆಯಲ್ಲಿ ತಾವಿರುವ ರಾಜ್ಯದ ಭಾಷೆಯನ್ನು ಕಲಿಯಬೇಕಾದ್ದು ಹೇಗೆ ಅನಿವಾರ್ಯ ಎಂಬುದನ್ನು ಅವರಿಗೆ ಮನಗಾಣಿಸಬೇಕು.