ನೈಋತ್ಯ ರೈಲ್ವೆ; ಜಿಡಿಸಿಇ ಹುದ್ದೆ ನೇಮಕಾತಿಯಲ್ಲಿ ಅಕ್ರಮ; ಹುದ್ದೆ ಆಕಾಂಕ್ಷಿಗಳಿಂದ ಪ್ರತಿಭಟನೆ

Advertisement

ಹುಬ್ಬಳ್ೞಿ: ನೈಋತ್ಯ ರೈಲ್ವೆಯ ಜಿಡಿಸಿಇ ಹುದ್ದೆ ನೇಮಕಾತಿಗೆ ಈಚೆಗೆ ನಡೆದ ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದ್ದು, ಮರು ಪರೀಕ್ಷೆ ನಡೆಸಬೇಕು ಎಂದು ಒತ್ತಾಯಿಸಿ ಸೋಮವಾರ ಇಲ್ಲಿನ ಗದಗ ರಸ್ತೆಯ ನೈಋತ್ಯ ರೈಲ್ವೆಯ ಪ್ರಧಾನ ವ್ಯವಸ್ಥಾಪಕರ ಕಚೇರಿ ಮುಂದೆ ಪರೀಕ್ಷೆ ಬರೆದಿದ್ದ ನೂರಾರು ಜನ ಹುದ್ದೆ ಆಕಾಂಕ್ಷಿಗಳು ಪ್ರತಿಭಟನೆ ನಡೆಸಿದರು.
ರಾಜ್ಯದ ವಿವಿಧ ಜಿಲ್ಲೆಗಳಿಂದ ಬಂದಿದ್ದ ಹುದ್ದೆ ಆಕಾಂಕ್ಷಿಗಳು ಪರೀಕ್ಷಾ ಅಕ್ರಮದ ಕುರಿತು ತನಿಖೆ ನಡೆಸಬೇಕು. ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕು. ಮತ್ತೊಮ್ಮೆ ಪಾರದರ್ಶಕವಾಗಿ ಪರೀಕ್ಷೆ ನಡೆಸಿ ಅರ್ಹರನ್ನು ಹುದ್ದೆಗೆ ನೇಮಿಸಬೇಕು ಎಂದು ಒತ್ತಾಯಿಸಿದರು.
ಈ ಪರೀಕ್ಷೆಗೆ ಒಟ್ಟು ನಾಲ್ಕುವರೆ ಸಾವಿರಕ್ಕೂ ಹೆಚ್ಚು ಜನ ಬರೆದಿದ್ದರು. ಅನೇಕರಿಗೆ ನೂರಕ್ಕೆ 98 ರಷ್ಟು ಅಂಕ ಬಂದಿದೆ. 100 ಜನರಲ್ಲಿ 95 ಕ್ಕೂ ಹೆಚ್ಚು ಜನರಿಗರ ಈ ರೀತಿ ಅಂಕ ಬಂದಿದೆ. ಪ್ರಶ್ನೆ ಪತ್ರಿಕೆ ಕಠಿಣವಾಗಿತ್ತು. ನೂರಕ್ಕೆ 95 ಜನರು ಶೇ 98 ರಷ್ಟು ಅಂಕ ಗಳಿಕೆ ಕಷ್ಟ. ಹೀಗಾಗಿ ಅಕ್ರಮ ನಡೆದಿರುವ ಸಾಧ್ಯತೆ ಇದೆ. ಕೂಲಂಕುಷ ತನಿಖೆ ನಡೆಸಬೇಕು ಎಂದು ಹುದ್ದೆ ಆಕಾಂಕ್ಷಿ ವಿಜಯಪುರದ ಜಗದೀಶ ಮಾಧ್ಯಮದವರಿಗೆ ತಿಳಿಸಿದರು.