ಜಿಂಕೆ ಬೇಟೆ: 6 ಜನರ ಬಂಧನ

Advertisement

ಚಿಕ್ಕಮಗಳೂರು: ಭದ್ರಾ ಹುಲಿ ಸಂರಕ್ಷಿತ ಪ್ರದೇಶಕ್ಕೆ ಹೊಂದಿಕೊಂಡಿರುವ ಪ್ರದೇಶದಲ್ಲಿ ಜಿಂಕೆ ಬೇಟೆ ಮಾಡಿ ಪಾರ್ಟಿ ಮಾಡುತ್ತಿದ್ದ ಆರು ಜನರನ್ನು ಬಂಧಿಸಲಾಗಿದೆ.
ಸಂಗಮ ಕಾಫಿ ತೋಟದ ಬಳಿ ಬೃಹತ್ ಗಾತ್ರದ ಜಿಂಕೆ ಕಳ್ಳ ಬೇಟೆ ಮಾಡಿ ಬಾಡೂಟಕ್ಕೆ ತಯಾರಿ ನಡೆಸುತ್ತಿದ್ದಾಗ ದಾಳಿ ಮಾಡಲಾಗಿದೆ.
ಭದ್ರಾ ಹುಲಿ ಸಂರಕ್ಷಿತ ಪ್ರದೇಶಕ್ಕೆ ಹೊಂದಿಕೊಂಡಿರುವ ಮುತ್ತೊಡಿ ಪ್ರಾದೇಶಿಕ ವಲಯದ ವ್ಯಾಪ್ತಿಯ ಹುಲುವತ್ತಿ ಬಳಿ ಘಟನೆ ನಡೆದಿದ್ದು,ಸ್ಥಳೀಯರ ಮಾಹಿತಿ‌ ಆಧರಿಸಿ
ಪ್ರಾದೇಶಿಕ ಅರಣ್ಯ ವಿಭಾಗದ ಅಧಿಕಾರಿಗಳಿಂದ‌ ರೈಡ್
ಶಿಕಾರಿ ಮಾಡಿದ‌ ಆರೋಪದ ಮೇಲೆ‌ ಮೊಹಮ್ಮದ್ ಶಕೀಲ್ ಸೇರಿದಂತೆ ಆರು ಜನರನ್ನು ಬಂಧಿಸಿ 8 ಕೆ.ಜಿ. ಜಿಂಕೆ ಮಾಂಸದ ಜೊತೆಗೆ ನಾಡ ಬಂದೂಕು ವಶ ಪಡೆದುಕೊಳ್ಳಲಾಗಿದೆ.
ಪಾರ್ಟಿ ಸ್ಥಳದಲ್ಲಿ ಎನ್.ಜಿ.ಓ ಸದಸ್ಯರಿದ್ದರು ಎನ್ನುವ ಆರೋಪವೂ ಇದ್ದು, 25 ಕೆ.ಜಿ. ತೂಕದ‌ ಜಿಂಕೆಯನ್ನು ಶಿಕಾರಿ ಮಾಡಿದ್ದಾರೆ ಎನ್ನಲಾಗಿದೆ.