ಡಿಎಚ್ಒ ಹುದ್ದೆಗೆ ಜಟಾಪಟಿ: ಒಂದೇ ಕೊಠಡಿಯಲ್ಲಿ ಕುಳಿತು ಇಬ್ಬರು ಅಧಿಕಾರಿಗಳ ಕಾರ್ಯನಿರ್ವಹಣೆ

Advertisement

ಬಾಗಲಕೋಟೆ: ಡಿಎಚ್ಒ ಹುದ್ದೆಗಾಗಿ ಇಬ್ಬರು ಅಧಿಕಾರಿಗಳ ನಡುವೆ ವಾಗ್ವಾದ ನಡೆದಿರುವ ಘಟನೆ ಜರುಗಿದೆ‌.

ಬಾಗಲಕೋಟೆಯಲ್ಲಿ ಡಿಎಚ್ಒ ಆಗಿ ಡಾ.ಜಯಶ್ರೀ ಎಮ್ಮಿ ಕಾರ್ಯನಿರ್ವಹಿಸುತ್ತಿದ್ದು, ಅವರನ್ನು ಸರ್ಕಾರದ ವರ್ಗಾವಣೆ ಮಾಡಿ ಆ ಸ್ಥಾನಕ್ಕೆ ವಿಜಯಪುರ ಡಿಎಚ್ಒ ಆಗಿದ್ದ ಡಾ.ರಾಜಕುಮಾರ ಯರಗಲ್ಲ ಅವರನ್ನು ನಿಯೋಜಿಸಿತ್ತು. ಆದರೆ ವರ್ಗಾವಣೆ ಪ್ರಶ್ನಿಸಿ ಡಾ.ಜಯಶ್ರೀ ಎಮ್ಮಿ ಕರ್ನಾಟಕ ಆಡಳಿತ ನ್ಯಾಯಮಂಡಳಿಯಿಂದ ತಡೆಯಾಜ್ಞೆ ತಂದಿದ್ದರು.

ಆದರೆ ಸರ್ಕಾರಿ ರಜೆ ಹಾಗೂ ಡಾ.ಎಮ್ಮಿ ಅವರು ವೈಯಕ್ತಿಕ ಕಾರಣದ ಮೇಲೆ ರಜೆ ತೆರಳದ್ದ ಸಂದರ್ಭದಲ್ಲಿ ಡಾ.ಯರಗಲ್ಲ ಬೀಗ ಹೊಡೆದು ಕಚೇರಿ ಪ್ರವೇಶಿಸಿದ್ದಾರೆ.ವಿಜಯಪುರ ಜಿಪಂ ಸಿಇಒ ಅವರಿಂದ ಬಿಡುಗಡೆ ಆದೇಶವನ್ನಾಗಲಿ, ನನ್ನಿಂದ ಅಧಿಕಾರ ಹಸ್ತಾಂತರವಾಗಿ ಆಗಿಲ್ಲ‌ ಅಲ್ಲದೇ ಕೆಎಟಿ ಅದೇಶ ಇರುವುದರಿಂದ ನಾನೇ ಮುಂದುವರಿಯಲು ಅವಕಾಶವಿದೆ ಎಂದು ಡಾ.ಜಯಶ್ರೀ ಎಮ್ಮಿ ತಿಳಿಸಿದ್ದಾರೆ.

ಸರ್ಕಾರ ವರ್ಗಾಣೆ ಮಾಡಿರುವುದರಿಂದ ನಾನು ಬಂದು ಅಧಿಕಾರ ವಹಿಸಿಕೊಂಡಿದ್ದೇನೆ. ಸರ್ಕಾರದ ಆದೇಶ ಇದ್ದರೆ ತಂದು ತೋರಿಸಲಿ ಎಂಬುದು ಡಾ.ರಾಜಶೇಖರ ಯರಗಲ್ಲ ಮಾತು.

ಇಬ್ಬರ ಅಧಿಕಾರಿಗಳ ನಡುವಿನ ಹಗ್ಗಜಗ್ಗಾಟ ಕುರಿತಾಗಿ ಸಂಯುಕ್ತ ಕರ್ನಾಟಕದ ಸೋಮವಾರ ಸಂಚಿಕೆಯಲ್ಲಿ ವಿಶೇಷ ವರದಿಯೂ ಪ್ರಕಟಗೊಂಡಿದೆ.