ಶಕ್ತಿ ಯೋಜನೆ: 294 ಕೋ. ರೂ. ಬಿಡುಗಡೆ

Advertisement

ಬೆಂಗಳೂರು: ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿರುವ ‘ಶಕ್ತಿ ಯೋಜನೆ’ಯಡಿ ರಾಜ್ಯಾದ್ಯಂತ ಮಹಿಳೆಯರು ಸರ್ಕಾರಿ ಬಸ್ ಗಳಲ್ಲಿ ಉಚಿತವಾಗಿ ಪ್ರಯಾಣಿಸಿರುವ ವೆಚ್ಚದ ಮರುಪಾವತಿಗಾಗಿ ಸಾರಿಗೆ ಸಂಸ್ಥೆಗಳಿಗೆ ರಾಜ್ಯ ಸರ್ಕಾರ 294 ಕೋಟಿ ರೂಪಾಯಿ ಅನುದಾನ ಬಿಡುಗಡೆಗೊಳಿಸಿದೆ. ಕೆಎಸ್‌ಆರ್‌ಟಿಸಿ – 110.76 ಕೋಟಿ ರೂ., ಬಿಎಂಟಿಸಿ – 51.31 ಕೋಟಿ ರೂ., ವಾಯವ್ಯ ಸಾರಿಗೆ ಸಂಸ್ಥೆ – 76.51 ಕೋಟಿ ರೂ., ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆ – 56.14 ಕೋಟಿ ರೂ. ಅನುದಾನ ಬಿಡುಗಡೆ ಮಾಡಿ ಆದೇಶ ಹೊರಡಿಸಿದೆ.