ಖೊ-ಖೊ: ನ್ಯೂ ಆಕ್ಸ್ ಫರ್ಡ್ ಶಾಲೆ ಪ್ರಥಮ

Advertisement

ಶ್ರೀರಂಗಪಟ್ಟಣ: ಪಟ್ಟಣದ ತಾಲ್ಲೂಕು ಕ್ರೀಡಾಂಗಣದಲ್ಲಿ ನಡೆದ ಕಸಬಾ ಹೋಬಳಿ ಮಟ್ಟದ 2023-24 ನೇ ಸಾಲಿನ ಕ್ರೀಡಾಕೂಟದಲ್ಲಿ ನ್ಯೂ ಆಕ್ಸ್ ಫರ್ಡ್ ಶಾಲೆಯ ಬಾಲಕಿಯರ ತಂಡ ಹಾಗೂ ಬಾಲಕರ ತಂಡ ಖೋ- ಖೋ ಪಂದ್ಯಾವಳಿಯಲ್ಲಿ ಪ್ರಥಮ‌ ಬಹುಮಾನ ಪಡೆಯಿತು.
ತೀವ್ರ ರೋಚಕತೆಯಿಂದ ಕೂಡಿದ್ದ ಪಂದ್ಯಾವಳಿಯಲ್ಲಿ ಜೂನಿಯರ್ ಶಾಲೆಯ ಬಾಲಕಿ ಹಾಗೂ ಬಾಲಕರ ತಂಡವನ್ನು ಮಣಿಸಿದ ನ್ಯೂ ಆಕ್ಸ್ ಫರ್ಡ್ ಶಾಲೆಯ ಬಾಲಕಿಯರ ಹಾಗೂ ಬಾಲಕರ ತಂಡ ಗೆಲುವಿನ ನಗೆ ಬೀರಿತು.


ಇನ್ನುಳಿದಂತೆ ಕಬಡ್ಡಿ ವಿಭಾಗದಲ್ಲಿ‌ ಓಂ ಶ್ರೀನಿಕೇತನ ಬಾಲಕರ ತಂಡ, ನ್ಯೂ ಆಕ್ಸ್ ಫರ್ಡ್ ಶಾಲೆಯ ಬಾಲಕಿಯರ ತಂಡ, ವಾಲಿಬಾಲ್ ವಿಭಾಗದಲ್ಲಿ ಓಂ ಶ್ರೀನಿಕೇತನ ಬಾಲಕರ ತಂಡ, ಕಾವೇರಿ ಪ್ರೌಢಶಾಲೆಯ ಬಾಲಕಿಯರ ತಂಡ, ಥ್ರೋಬಾಲ್ ವಿಭಾಗದಲ್ಲಿ ಗಂಜಾಂನ ಸೆಂಟ್ ಮೇರಿಸ್ ಶಾಲೆಯ ಬಾಲಕರ ತಂಡ, ಜೂನಿಯರ್ ಕಾಲೇಜಿನ ಬಾಲಕಿಯರ ತಂಡ,‌ ಬಾಲ್ ಬ್ಯಾಡ್ಮಿಟನ್ ವಿಭಾಗದಲ್ಲಿ ಬಿಜಿಎಸ್ ಶಾಲೆಯ ಬಾಲಕರ ತಂಡ, ಕಾವೇರಿ ಶಾಲೆಯ ಬಾಲಕಿಯರ ತಂಡ ಪ್ರಥಮ ಸ್ಥಾನಗಳನ್ನು ಪಡೆದುಕೊಂಡವು. ಜೊತೆಗೆ ಓಟದ ಸ್ಪರ್ಧೆ, ಗುಂಡು ಎಸೆತ, ಭರ್ಜಿ ಎಸೆತ ಸೇರಿದಂತೆ ಇತರೆ ಕ್ರೀಡೆಗಳು ಜರುಗಿದವು. ವಿಜೇತ ತಂಡ ಹಾಗೂ ವಿಜೇತ ವಿದ್ಯಾರ್ಥಿಗಳಿಗೆ ಪಾರಿತೋಷಕ ಹಾಗೂ ಪ್ರಮಾಣ ಪತ್ರ ನೀಡಿ ಪ್ರೋತ್ಸಾಹಿಸಲಾಯಿತು.