ಶಾಲೆಯಿಂದ ಚಂದ್ರಯಾನದವರೆಗೆ : ಗದುಗಿನ ಸುಧೀಂದ್ರ ಬಿಂದಗಿ

Advertisement

ಗದಗ: ಚಂದ್ರಯಾನ-3 ಪ್ರಾಜೆಕ್ಟ್ ನಲ್ಲಿ ಗದಗ ನಗರದ ವೀರನಾರಾಯಣ ಅಗ್ರಹಾರದ ಸುಧೀಂದ್ರ ವೆಂಕಣ್ಣಾಚಾರ್ಯ ಬಿಂದಗಿ ಪ್ರಮುಖ ಪಾತ್ರ ವಹಿಸಿದ್ದಾರೆ. ಮೂಲತಃ ಗದಗ ಜಿಲ್ಲೆಯ ಸೊರಟೂರು ಗ್ರಾಮದ ಶ್ರೀನಿವಾಸಾಚಾರ್ಯ ಹಾಗೂ ಸೊರಟೂರು ಭೀಮಸೇನಾಚಾರ್ಯರ ಮನೆಗೆ ಸೇರಿದವರು. ಸುಧೀಂದ್ರ ಬಿಂದಗಿ ಅವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಗದಗ ನಗರದ ಕನ್ನಡ ಸರ್ಕಾರಿ ಶಾಲೆ ನಂ೨ ರಲ್ಲಿ, ಪದವಿ ಪೂರ್ವ ಶಿಕ್ಷಣವನ್ನು ಗದುಗಿನ ವಿದ್ಯಾದಾನ ಶಿಕ್ಷಣ ಸಂಸ್ಥೆಯಲ್ಲಿ, ಪದವಿಯನ್ನು ಗದುಗಿನ ಜೆ.ಟಿ ಕಾಲೇಜಿನಲ್ಲಿ ಪೂರೈಸಿ ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿದರು. ಸೂರತ್ಕಲ್ ಎಂಜಿನಿಯರಿಎಗ್ ಕಾಲೇಜಿನಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಆಗ್ ಬಿಟೆಕ್ ಪದವಿ ಪಡೆದು, ಮುಂಬೈನ್ ಮುಕುಂದ ಐರನ್ ಸ್ಟೀಲ್ ನಲ್ಲಿ ಡಿಸೈನ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಬಳಿಕ ಹುಲಕೋಟಿಯ ರೂರಲ್ ಎಂಜಿನಿಯರಿ ಕಾಲೇಜಿನಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿ ೧೯೮೬ರಿಂದ ಪ್ರತಿಷ್ಠಿತ ಇಸ್ರೋ ಸಂಸ್ಥೆಯ ಉಪಗ್ರಹ ಕೇಂದ್ರದಲ್ಲಿ ಅಧ್ಯಯನವಾಗಿ ಕಾರ್ಯನಿರ್ವಹಿಸುತ್ತಿದೆ. Ä ೧೯೯೨ ರಲ್ಲಿ ಮೊದಲ ಬಾರಿಗೆ ಉಡಾವಣೆ ಉಪಗ್ರಹದ ಥರ್ಮಲ್ ಡಿಸೈನರ್ ಆಗಿ ಸೇವೆ ಸಲ್ಲಿಸಿದರು. ತದ ನಂತರ ಇಸ್ಯಾಟ್ ಎಲ್ ಎಲ್ ಇ ಯೋಜನೆ ಮ್ಯಾನೇಜರ್ ಆಗಿ ಇನ್ ಸ್ಯಾಟ್ ಲೀಜ್ ಪ್ರಾಜೆಕ್ಟ್ ಮ್ಯಾನೇಜರ್ ಆಗಿ ಥರ್ಮಲ್ ವಿನ್ಯಾಸ ಮತ್ತು ವಿಶ್ಲೇಷಣೆ ಕಾರ್ಯಗಳನ್ನು ಯಶಸ್ವಿಯಾಗಿ ಪೂರೈಸಿದ್ದಾರೆ. ೧೯೯ರಲ್ಲಿ ಏರಿಮನ್ ಆಕಾರ ರಾಕೆಟ್ ಮೂಲಕ ಫ್ರೆಂಚ್ ಗಯಾನದ ಕುರಲಾಚ್ ಬ್ಯಾಡ್‌ನಿಂದ ಉಡಾವಣೆಯಾಯಿತು. ಈ ಉಡಾವಣೆಗಾಗಿ ಇಸ್ರೋದಿಂದ ಗಯಾನಕ್ಕೆ ತೆರಳಿದ್ದ ಜನರ ತಂಡದಲ್ಲಿ ಬಿಂದಗಿಯವರೂ ಒಬ್ಬರು ಎಂಬುದು ಹೆಮ್ಮೆಯ ಸಂಗತಿ. ಅಷ್ಟೇ ಅಲ್ಲ ಜಿಸ್ಯಾಟ್ -೨ ಸಂವಹನ ಉಪಗ್ರಹ ಉಪನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ೨೦೧೯ರಲ್ಲಿ ಥರ್ಮಲ್ ಸಿಸ್ಟಮ್ ಸಮೂಹದ ನಿರ್ದೇಶಕ ಹುದ್ದೆಯನ್ನು ನಿಭಾಯಿಸಿದ್ದಾರೆ. ಈವರೆಗೂ 15 ಉಪಗ್ರಹಗಳ ಯಶಸ್ವಿ ಉಡಾವಣೆಯಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ್ದಾರೆ. ಬುಧವಾರ ಯಶಸ್ವಿಯಾದ ಚಂದ್ರಯಾನ 3 ಯೋಜನೆಗಳಲ್ಲಿ ಸುಧೀಂದ್ರ ಬಿಂದಗಿ ಅವರೂ ಕೂಡ ಒಬ್ಬರು ಎಂಬುದು ಗದಗ ಜಿಲ್ಲೆಗೆ ಹೆಮ್ಮೆಯ ವಿಷಯ. -ಡಾ.ಪರಿಮಳ ಸೊರಟೂರ, ಗದಗ.