ಬೆಸ್ಕಾಂ ಸಿಬ್ಬಂದಿಯ ಕರ್ತವ್ಯಕ್ಕೆ ಎಲ್ಲೆಡೆ ಪ್ರಶಂಸೆ

Advertisement

ಕೆರೆಯಲ್ಲಿ ಜಲಾವೃತವಾಗಿರುವ ವಿದ್ಯುತ್ ಕಂಬಗಳ ಬಳಿಗೆ ತೆಪ್ಪದಲ್ಲಿ ಹೋಗಿ ದುರಸ್ತಿಗೊಳಿಸಲು ಮುಂದಾಗಿರುವ ಬೆಸ್ಕಾಂ ಸಿಬ್ಬಂದಿ ಸಾಹಸಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಸ್ವಲ್ಪ ಹೆಚ್ಚೂ ಕಡಿಮೆಯಾದರೂ ಪ್ರಾಣಕ್ಕೇ ಸಂಚಕಾರ ಆಗುವಂಥ ಪರಿಸ್ಥಿತಿಯಲ್ಲಿ ಕೆಲಸ ಮಾಡಿದ್ದಾರೆ. ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಲಕ್ಕೂರು ಕೆರೆಯಲ್ಲಿ ಈ ದೃಶ್ಯ ಕಂಡುಬಂದಿದೆ. ಜಲಾವೃತವಾಗಿರುವ ವಿದ್ಯುತ್​ ಕಂಬದಲ್ಲಿ ಸಮಸ್ಯೆ ಆಗಿದ್ದು, ಅದರ ದುರಸ್ತಿಗಾಗಿ ಬೆಸ್ಕಾಮ್​ನ ನಾಲ್ವರು ಸಿಬ್ಬಂದಿ ತೆರಳಿದ್ದು, ಜೀವದ ಹಂಗು ತೊರೆದು ಕರ್ತವ್ಯ ನಿಭಾಯಿಸಿದ್ದಾರೆ.
ಈ ನಾಲ್ವರೂ ತೆಪ್ಪದಲ್ಲಿ ತೆರಳಿದ್ದು, ವಿದ್ಯುತ್ ಕಂಬದಲ್ಲಿ ಇಬ್ಬರು, ಇನ್ನಿಬ್ಬರು ತೆಪ್ಪದಲ್ಲಿ ಇದ್ದುಕೊಂಡು ದುರಸ್ತಿ ಪಡಿಸುವ ಕೆಲಸ ಮಾಡಿದ್ದಾರೆ. ಈ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ‌ ಹರಿದಾಡುತ್ತಿದ್ದು, ಬೆಸ್ಕಾಂ ಸಿಬ್ಬಂದಿಯ ಕರ್ತವ್ಯಕ್ಕೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿದೆ. ಬೆಸ್ಕಾಂ ಸಿಬ್ಬಂದಿ ಸಾಹಸ ಕಾರ್ಯಕ್ಕೆ ವಿದ್ಯುತ್ ನಿಗಮ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.