ಲಂಚ ಪಡೆಯುತ್ತಿದ್ದ ಸರ್ವೆಯರ್ ಲೋಕಾಯುಕ್ತ ಬಲೆಗೆ

Advertisement

ಚಿಕ್ಕಮಗಳೂರು : ಜಮೀನು ಹದ್ದು ಬಸ್ತಿಗೆ ಸಂಬಂಧಿಸಿದಂತೆ ಲಂಚ ಪಡೆಯುತ್ತಿದ್ದ ಆರೋಪದ ಮೇಲೆ ಸರ್ವೇಯರ್ ರಮೇಶ್ ನನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.
ಉಂಡೆ ದಾಸರಹಳ್ಳಿಯ ವಾಸಿ ಯು. ಆರ್ ಹೊನ್ನಪ್ಪ ತಮ್ಮ ತಾಯಿ ಹೆಸರಿನ ಜಮೀನಿಗೆ ಹದ್ದುಬಸ್ತು ಮಾಡಿಕೊಡುವಂತೆ ಅರ್ಜಿ ಸಲ್ಲಿಸಿದ್ದರು.
ತಾಲೂಕು ಕಚೇರಿ ಸರ್ವೆ ಇಲಾಖೆಯಿಂದ ದೂರವಾಣಿ ಕರೆ ಮಾಡಿದ ವ್ಯಕ್ತಿ, ಆರಂಭದಲ್ಲಿ ಕಚೇರಿಯಲ್ಲಿ ಬಂದು ತಮ್ಮನ್ನು ಕಾಣುವಂತೆ ತಿಳಿಸಿದ್ದರು ಎನ್ನಲಾಗಿದೆ.
ನಂತರ ಕರೆ ಮಾಡಿ ಜಮೀನಿಗೆ ಬರುತ್ತಿದ್ದು ಅಲ್ಲಿ ಇರುವಂತೆ ಹೇಳಿದ್ದು ಆ ಪ್ರಕಾರ, ಜಮೀನಿಗೆ ಸರ್ವೆಗೆ ಬಂದ ಸಂದರ್ಭದಲ್ಲಿ ಸರ್ವೇಯರ್ ರಮೇಶ್ 1,000 ರೂ.ಗಳಿಗೆ ಬೇಡಿಕೆ ಇಟ್ಟಿದ್ದರು ಎಂದು ಆರೋಪಿಸಲಾಗಿದೆ.
ಲಂಚ ನೀಡಲು ಇಷ್ಟವಿಲ್ಲದ ಹೊನ್ನಪ್ಪ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದು, ಆರೋಪಿ 3 ಸಾವಿರ ರೂ.ಲಂಚ ಪಡೆಯುತ್ತಿದ್ದ ಸಂದರ್ಭದಲ್ಲಿ ಬಂಧಿಸಲಾಗಿದೆ ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ.
ಈ ದಾಳಿಯಲ್ಲಿ ಇನ್ಸ್ಪೆಕ್ಟರ್ ಅನಿಲ್ ರಾಥೋಡ್, ಸಿಬ್ಬಂದಿಗಳಾದ ಅನಿಲ್ ನಾಯಕ್, ಮುಜಬ್, ಲೋಕೇಶ್, ವೇದಾವತಿ ಪ್ರಕಾಶ್ ಪಾಲ್ಗೊಂಡಿದ್ದರು.