ಎನ್‌ಪಿಎಸ್ ಬಿಟ್ಟು ಓಪಿಎಸ್ ಜಾರಿಗೆ ಆಗ್ರಹ: ಕನ್ಯಾಕುಮಾರಿಯಿಂದ ಕಾಶ್ಮೀರವರೆಗೆ ರ‍್ಯಾಲಿ

Advertisement

ಧಾರವಾಡ: ಶಿಕ್ಷಕರ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಅಖಿಲ ಭಾರತ ಶಿಕ್ಷಕರ ಫೆಡರೇಷನ್ ವತಿಯಿಂದ ಸೆ. ೫ರಿಂದ ಭಾರತ ಯಾತ್ರಾ ಕೈಗೊಳ್ಳಲಾಗಿದೆ ಎಂದು ಫೇಡರೇಷನ್ ರಾಷ್ಟ್ರೀಯ ಕಾರ್ಯಾಧ್ಯಕ್ಷ ಬಸವರಾಜ ಗುರಿಕಾರ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕನ್ಯಾಕುಮಾರಿಯಿಂದ ಕಾಶ್ಮೀರ ವರೆಗೆ ಒಂದು ತಿಂಗಳ ವರೆಗೆ ಪ್ರತಿಭಟನಾ ಮೆರವಣಿಗೆ ಕೈಗೊಳ್ಳಲಾಗಿದೆ. ಎನ್ ಪಿಎಸ್ ಬಿಟ್ಟು ಓಪಿಎಸ್ ಜಾರಿ, ಏಕರೂಪ ವೇತನ ಶ್ರೇಣಿ, ಅತಿಥಿ ಶಿಕ್ಷಕರ ಕಾಯಂಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಲಾಗುವು ಎಂದರು. ರಾಜ್ಯಕ್ಕೆ ಸೆ. ೧೭ಕ್ಕೆ ಪ್ರವೇಶ ಮಾಡಲಿದ್ದು, ವಿವಿಧ ಜಿಲ್ಲೆ ಮೂಲಕ ಮೆರವಣಿಗೆ ಸಾಗಲಿದೆ. ದೆಹಲಿಗೆ ತೆರಳಿ ಪ್ರತಿಭಟನೆ ಅಂತ್ಯವಾಗಲಿದೆ. ನಾಲ್ಕು ತಂಡದಲ್ಲಿ ಪ್ರತಿಭಟನೆ ಮೆರವಣಿಗೆ ಕೈಗೊಳ್ಳಲಿವೆ ಎಂದರು.