ಬಿಸ್ಲೇರಿ ನೀರು ಬಳಸಿ ನಾಟಿ ಮೂಲಕ‌ ಪ್ರತಿಭಟನೆ

Advertisement

ಶ್ರೀರಂಗಪಟ್ಟಣ: ತಮಿಳುನಾಡಿಗೆ ನಿರಂತರವಾಗಿ ನೀರು ಹರಿಸುತ್ತಿರುವ ರಾಜ್ಯ ಸರ್ಕಾರದ ಕ್ರಮದಿಂದಾಗಿ ತಾಲ್ಲೂಕಿನ ಕೆಆರ್ ಎಸ್ ಕನ್ನಂಬಾಡಿ ಅಣೆಕಟ್ಟೆಲ್ಲಿ ನೀರು ಖಾಲಿಯಾಗುತ್ತಿದ್ದು ಮಂಡ್ಯ ರಕ್ಷಣಾ ವೇಧಿಕೆ ಕಾರ್ಯಕರ್ತರಿಂದ ಬಿಸಿಲರಿ (ಬಿಸ್ಲೇರಿ) ನೀರು ಬಳಸಿ ನಾಟಿ ಮಾಡುವ ಮೂಲಕ‌ ವಿಭಿನ್ನವಾಗಿ ಪ್ರತಿಭಟನೆ ನಡೆಸಿದರು.

ತಾಲ್ಲೂಕಿನ‌ ಹನುಂತನಗರ ಗ್ರಾಮದ ಜಮೀನಿನಲ್ಲಿ ಮರವೇ ಸಂಸ್ಥಾಪಕ ಅಧ್ಯಕ್ಷ ಶಂಕರ್ ಬಾಬು ನೇತೇತ್ವದಲ್ಲಿ ಬರ ನಾಟಿ ಮಾಡುವ ಮೂಲಕ ಸರ್ಕಾರದ ನಡೆಯನ್ನು ಖಂಡಿಸಿದ ಕಾರ್ಯಕರ್ತರು, ಜಿಲ್ಲೆಯಲ್ಲಿ ಮಳೆಯಿಲ್ಲದೆ ಬರಗಾಲದ ಸನ್ನಿವೇಶ ಸೃಷ್ಠಿಯಾಗಿದೆ. ಅಣೆಕಟ್ಟಯಲ್ಲಿ‌ನ‌ ನೀರು ದಿನೇ ದಿನೆ ಖಾಲಿಯಾಗುತ್ತಿದೆ. ಸರ್ಕಾರ ರಾಜ್ಯದ ಹಿತವನ್ನು‌ ಬಲಿಕೊಟ್ಟು ರೈತರಿಗೆ ವಿಷವುಣಿಸಲು ಹೊರಟಿದೆ. ಕೂಡಲೇ ತಮಿಳುನಾಡಿಗೆ ಹರಿಸುತ್ತಿರುವ ನೀರನ್ನು ನಿಲ್ಲಿಸದಿದ್ದರೆ ರೈತರು‌‌ ಸರಣಿ ಆತ್ಮಹತ್ಯೆಗೆ ಮುಂದಾಗಬೇಕಾಗುತ್ತದೆ. ಇದಕ್ಕೆ ಸರ್ಕಾರವೇ ನೇರ ಹೊಣೆಗಾರಿಕೆಯಾಗಲಿದೆ ಎಂದು ಎಚ್ಚರಿಕೆ ನೀಡಿದರು.