“ಡ್ರೈವ್” ಮಾಡದಿದ್ರೆ ಕ್ಲೀನ್ ಬೌಲ್ಡ್ ಆಗ್ತೀರಾ..🤦

Advertisement

ಧಾರವಾಡ: ಇತ್ತೀಚಿನ ದಿನಗಳಲ್ಲಿ ಹುಬ್ಬಳ್ಳಿ-ಧಾರವಾಡ ಪೊಲೀಸ್‌ ಕಮೀಶನರೇಟ್‌ ಟ್ವೀಟ್‌ಗಳು ಸಖತ್‌ ವೈರಲಾಗುತ್ತಿವೆ. ಸಮಯ ಹಾಗೂ ಸನ್ನಿವೇಶಕ್ಕೆ ತಕ್ಕಂತೆ ಕಮೀಶನರೇಟ್‌ ಸಿಬ್ಬಂದಿ ಟ್ವೀಟ್‌ಗಳನ್ನು ಮಾಡಿ ಜನರಲ್ಲಿ ಜಾಗೃತಿ ಮಾಡಿಸುವ ಕಾಯ ಮಾಡುತ್ತಿದ್ದಾರೆ.
ಇದೀಗ ಕಮೀಶನರೇಟ್‌ನ ಟ್ವೀಟ್‌ಗೆ ಅವಳಿನಗರದಲ್ಲಿ ಮಾತ್ರವಲ್ಲದೇ ರಾಜ್ಯದ ಹಲವೆಡೆ ಪ್ರಶಂಸೆಯ ಮಾತುಗಳು ಕೇ:ಳಿ ಬಂದಿವೆ. ಹುಬ್ಬಳ್ಳಿ-ಧಾರವಾಡ ಪೊಲೀಸರು ಸಂಭಾಷಣೆಗಳನ್ನು ಟ್ವೀಟ್‌ಗಳಲ್ಲಿ ಚೆನ್ನಾಗಿ ಬರೆಯುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಮೊದಲು ಟ್ವೀಟಿಗರು ಸಾಮಾಜಿಕ ಜಾಲತಾಣದಲ್ಲಿ ಪಲೀಸರನ್ನು ಪೊಲೀಸ್ ಆಗೋ ಮುಂಚೆ ಅಡ್ಮಿನ್ ಟ್ರೊಲ್ ಪೇಜ್ ಅಡ್ಮಿನ್ ಆಗಿದ್ದರು ಕಾಣುತ್ತೆ ಎಂದು ಛೇಡಿಸಿದ್ದು ಉಂಟು. ಆದರೆ, ಅದು ಅವರ ಕೌಶಲ್ಯಗಳನ್ನು ಮೆಚ್ಚುವ ಜನಸಾಮನ್ಯರ ಪರಿ ಅಷ್ಟೇ.
ಅಗಸ್ಟ್‌ 23 ರಂದು ಅವರು ಹಾಕಿದ ಟ್ವೀಟ್‌ ಆವತ್ತು ಎರಡು ಘಟನೆಗಳು ನಡೆದವು.. ಎನ್ನುವುದಂತು ಸಿಕ್ಕಾಪಟ್ಟೆ ವೈರಲ್‌ ಆಗಿತ್ತು. ಇದೀಗ ಏಷ್ಯಾಕಪ್ 2023: ಏಕದಿನ ಕ್ರಿಕೆಟ್ ಸಂದರ್ಭಗಳ ಸದುಪಯೋಗ ಪಡೆದು ಕೆಲ ಟ್ವೀಟ್‌ ಮಾಡಿ ಜಾಗೃತಿ ಮೂಡಿಸಿದ್ದಾರೆ “ನಂ 1 ಬ್ಯಾಟ್ಸಮನ್’ ಆದ್ರೇನು ನಂ 1 ಡ್ರೈವರ್ ಆದ್ರೇನು ಗಮನ ಕೇಂದ್ರೀಕರಿಸಿ “ಡ್ರೈವ್” ಮಾಡದಿದ್ರೆ ಕ್ಲೀನ್ ಬೌಲ್ಡ್ ಆಗ್ತೀರಾ..🤦, Wear 𝗛𝗲𝗹𝗺𝗲𝘁 or become 𝗵𝗲𝗹𝗹-𝗺𝗮𝘁𝗲 ಎಂದು ಟ್ರಾಫಿಕ್‌ ನಿಯಮಗಳ ಬಗ್ಗೆ ಟ್ವೀಟ್‌ ಮೂಲಕ ಎಚ್ಚರಿಸಿದ್ದಾರೆ. ಜನರಿಗೆ ಜನಸಾಮನ್ಯ ಭಾಷೆಯಲ್ಲಿ ಜಾಗೃತಿ ಮೂಡಿಸುವ ಪರಿಗೆ ಸಾರ್ವಜನಿಕರಿಂದ ಫುಲ್ ಲೈಕ್ಸ್ ಸದಾ ಇದ್ದೇ ಇದೆ.