ಹುಬ್ಬಳ್ಳಿ: ರಾಣಿ ಚನ್ನಮ್ಮ ಮೈದಾನದ ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆ ಆರಂಭ

Advertisement

ಹುಬ್ಬಳ್ಳಿ: ನಗರದ ರಾಣಿ ಚನ್ನಮ್ಮ ಮೈದಾನದ ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆ ೧೧.೫೦ ಕ್ಕೆ ಆರಂಭವಾಗಿತು. ಶಾಸಕ ಬಸವಗೌಡ ಪಾಟೀಲ ಯತ್ನಾಳ ಹಾಗೂ ಅರವಿಂದ ಬೆಲ್ಲದ ಗಣೇಶ ಮೂರ್ತಿಗೆ ಮಾಲಾರ್ಪಣೆ ಮಾಡುವ ಮೂಲಕ ವಿಸರ್ಜನಾ ಮೆರವಣಿಗೆ ಚಾಲನೆ ನೀಡಿದರು. ಇದಕ್ಕೂ ಮೊದಲು ಶಾಸಕ ಮಹೇಶ ಟೆಂಗಿನಕಾಯಿ ಹಾಗೂ ರಾಣಿ ಚನ್ನಮ್ಮ ಮೈದಾನ ಉತ್ಸವ ಮಹಾಮಂಡಳಿ ಕಾರ್ಯಕರ್ತರು ಗಣಪತಿಗೆ ವಿಶೇಷ ಪೂಜೆ ಸಲ್ಲಿಸಿದರು. ಪಂಚವಾದ್ಯ, ಡೋಲು, ಜಾಂಝ್, ಡಿಜೆ ಮೇಳಗಳು ಮೆರವಣಿಗೆ ಮೆರಗು ನೀಡಿವೆ. ಗಣೇಶ ಮಹಾರಾಜ, ಜೈ ಶ್ರೀರಾಮ, ಜೈ ಜೈ ಶ್ರೀರಾಮ, ಹನುಮಾನ ಮಹಾರಾಜಕೀ ಜೈ ಎಂಬ ಘೋಷಣೆ ಮೂಗಿಲು ಮುಟ್ಟಿದವು. ಕಿತ್ತೂರ ರಾಣಿ ಚನ್ನಮ್ಮ ವೃತ್ತ, ರಾಣಿ ಚನ್ನಮ್ಮ ಮೈದಾನ ಭಗವಧ್ವಜ, ಕೇಸರಿ ಬಾವುಟಗಳು ಮಯವಾಗಿತ್ತು.


ಗಣೇಶ ಮೂರ್ತಿ ಪ್ರತಿಷ್ಠಾಪನೆಯಲ್ಲಿ ಭಾರತ ಮಾತೆಯ ಆಳೆತ್ತರದ ಭಾವಚಿತ್ರ, ಭಗವಧ್ವಜ, ಕೇಸರಿ ಬಾವುಟಗಳು ರಾರಾಜೀಸಿದವು. ಬಿಜೆಪಿ, ಆರ್ಎಸ್ಎಸ್, ಹಿಂದೂ ಜಾಗರಣ ವೇದಿಕೆ, ಶ್ರೀರಾಮ ಸೇನೆ, ವಿಎಚ್.ಪಿ ಸೇರಿದಂತೆ ವಿವಿಧ ಹಿಂದೂ ಸಂಘಟನೆಗಳ ಕಾರ್ಯಕರ್ತರು ಹಾಗೂ ಭಕ್ತರು ಪಾಲ್ಗೊಂಡಿದ್ದಾರೆ. ನಗರದ ಪ್ರದೇಶ ಅಷ್ಟೇ ಅಲ್ಲದೆ ಸುತ್ತಮುತ್ತಲಿನ ವಿವಿಧ ಜಿಲ್ಲೆಯ ನೂರಾರ ಜನರು ಭಾಗವಹಿಸಿದ್ದಾರೆ.