ಕಾವೇರಿ ಕೊಳ್ಳದಲ್ಲಿ ಕಾವೇರಿ ಕಿಚ್ಚು

Advertisement

ಮಂಡ್ಯ: ಕಾವೇರಿ ನೀರು ವಿಚಾರವಾಗಿ ಸುಪ್ರೀಂ ಕೋರ್ಟ್ ತೀರ್ಪು ಹಿನ್ನೆಲೆ ಕೃಷ್ಣರಾಜಸಾಗರ ಜಲಾಶಯದ ಬಳಿ ಪೊಲೀಸ್ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಡ್ಯಾಂನ ಮುಖ್ಯ ದ್ವಾರದಲ್ಲಿ ಬಿಗಿ ಭದ್ರತೆ ಒದಗಿಸಲಾಗುತ್ತಿದೆ.
ಈ ನಡುವೆ ಸುಪ್ರೀಂ ಕೋರ್ಟ್ ತೀರ್ಪು ನೀಡುತ್ತಿದ್ದಂತೆಯೇ ಮಂಡ್ಯದಲ್ಲಿ ಪ್ರತಿಭಟನೆಯ ಕಾವು ಜೋರಾಗಿದೆ. ಕೆಆರ್‍ಎಸ್ ಪಕ್ಷದಿಂದ ಪ್ರತಿಭಟನೆ ನಡೆಯುತ್ತಿದೆ. ಬೈಕ್ ರ್ಯಾಲಿ ಮೂಲಕ ಆಕ್ರೋಶ ಹಾಕುತ್ತಿದ್ದಾರೆ. ಇತ್ತ ಹಿರಿಯ ಜೀವಗಳು ಕಣ್ಣೀರು ಹಾಕುತ್ತಾ ಆಕ್ರೋಶದ ಮಾತುಗಳನ್ನು ಹೊರಹಾಕುತ್ತಿದ್ದಾರೆ.


ಇನ್ನೊಂದೆಡೆ ರೈತಪರ, ಕನ್ನಡಪರ, ಪ್ರಗತಿಪರ ಸಂಘಟನೆಗಳು ಮಂಡ್ಯದಲ್ಲಿ ಬೆಂ-ಮೈ ಹೆದ್ದಾರಿ ತಡೆದು ಪ್ರತಿಭಟನೆ ನಡೆಸುತ್ತಿವೆ. ಅಲ್ಲದೆ ಸುಪ್ರೀಂಕೋರ್ಟ್ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸುತ್ತಿವೆ. ರಸ್ತೆ ತಡೆದು ಪ್ರತಿಭಟನೆ ನಡೆಸುತ್ತಿದ್ದ ಸಂದರ್ಭದಲ್ಲಿ ನುಸುಳಿ ಹೋಗುತ್ತಿದ್ದ ಕಾರು ಚಾಲಕನಿಗೆ ರೈತರು ಫುಲ್ ಕ್ಲಾಸ್ ತೆಗೆದುಕೊಂಡ ಪ್ರಸಂಗ ಕೂಡ ನಡೆದಿದೆ.

ಕುಡಿಯವ ನೀರಿಗಾಗಿ ನಾವು ಪ್ರತಿಭಟನೆ ಮಾಡ್ತಾ ಇದ್ದೀವಿ. ಎಲ್ಲಿಗೆ ಹೋಗ್ತಾ ಇದ್ದೀಯಾ ಎಂದು ಕ್ಲಾಸ್ ಮಾಡಿದ್ದಾರೆ. ಕಾವೇರಿ ನೀರು ಇಲ್ಲದಿದ್ದರೆ ಏನ್ ಆಗುತ್ತೆ ಎಂದು ಬಣ್ಣಿಸಿ ಹಾಡಿನ ಮೂಲಕ ವಿಭಿನ್ನ ಪ್ರತಿಭಟನೆಗಳು ನಡೆಯುತ್ತಿವೆ.