ಬೆಂಗಳೂರು: ಉದ್ಯಮಿ ಎಲಾನ್ ಮಸ್ಕ್ X(ಟ್ವಿಟರ್) ಖರೀದಿಸಿದ ಬಳಿಕ ಹಲವು ಮಹತ್ವದ ಬದಲಾವಣೆ ಮಾಡಿದ್ದಾರೆ. ಇಂದು ಅವರು ರೋಬೋ ಚಿತ್ರವನ್ನು ಹಂಚಿಕೊಂಡಿದ್ದಾರೆ, ವಿಶೇಷವೆಂದರೆ ಆ ಚಿತ್ರದಲ್ಲಿ ನಮಸ್ತೆ ಎಂದು ಬರೆದಿದ್ದು, ನಂತರ ಇನ್ನೊಂದು ಪೋಸ್ಟ್ನಲ್ಲಿ ರೋಬೋ ಕಾರ್ಯಶೈಲಿಯನ್ನು ಹಂಚಿಕೊಂಡಿದ್ದಾರೆ, ಈ ಪೋಸ್ಟ್ಗಳ ಜೋತೆಗೆ ಅವರು X ಅಕ್ಷರದೊಂದಿಗೆ ಹೃದಯಬಡಿತ ಹಂಚಿಕೊಂಡಿದ್ದು ಸಾಮಾಜಿಕ ಜಾಲತಾಣದಲ್ಲಿ ಎಲ್ಲರ ಗಮನ ಸೆಳೆದಿದೆ. ಇತ್ತಿಚೆಗೆ ಮಾನವರ ಮೆದುಳಲ್ಲಿ ಬ್ರೇನ್ ಚಿಪ್ ಅಳವಡಿಸಲು ಎಲಾನ್ ಮಸ್ಕ್ ಒಡೆತನದ ಕಂಪನಿಯಾದ ನ್ಯೂರಾಲಿಂಕ್ಗೆ ಅನುಮತಿ ದೊರೆತಿತ್ತು, ಈಗ ಎಲಾನ್ ಮಸ್ಕ್ ಅವರ ಈ ಪೋಸ್ಟ್ಗಳ ಹಿಂದಿನ ರಹಸ್ಯ ಏನಿರಬಹದು ಎಂದು ಕೂತೂಹಲ ಮೂಡಿಸಿದೆ