ಸೆ. 26ರಂದು ನಡೆಯಬೇಕಿದ್ದ ಕಾನೂನು ವಿವಿ ಪರೀಕ್ಷೆ ಮುಂದೂಡಿಕೆ

Advertisement

ಹುಬ್ಬಳ್ಳಿ: ಸೆ. ೨೬ರಂದು ನಡೆಯಬೇಕಿದ್ದ ಕಾನೂನು ಕೋರ್ಸ್‌ಗಳ ಪರೀಕ್ಷೆಯನ್ನು ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯವು ಮುಂದೂಡಿದ್ದು, ಈ ದಿನ ನಡೆಯಬೇಕಿದ್ದ ಪರೀಕ್ಷೆಯನ್ನು ಅಕ್ಟೋಬರ್ ೮ರಂದು(ಭಾನುವಾರ) ನಡೆಸಲಾಗುವುದು. ಕುಲಪತಿಗಳ ನಿರ್ದೇಶನದ ಅನ್ವಯ ಈ ಮಾರ್ಪಾಡು ಮಾಡಲಾಗಿದೆ. ವಿದ್ಯಾರ್ಥಿಗಳು ಗಮನಿಸಬೇಕು. ಮಿಕ್ಕಂತೆ ಪೂರ್ವನಿಗದಿಯಂತೆ ಉಳಿದ ದಿನಾಂಕಗಳಲ್ಲಿ ಪರೀಕ್ಷೆ ನಡೆಯಲಿವೆ. ಯಾವುದೇ ಬದಲಾವಣೆಗಳಿಲ್ಲ ಎಂದು ಕಾನೂನು ವಿವಿ ಮೌಲ್ಯಮಾಪನ ವಿಭಾಗದ ಕುಲಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.