ನಮ್ಮೂರ ಮಹಾತ್ಮೆ: ಕಲ್ಲು ರಾಶಿಗಳ ಊರು ಕಲಬುರಗಿ

ಕಲಬುರಗಿ
Advertisement

ರಾಜ್ಯದ ರಾಜಧಾನಿ ಬೆಂಗಳೂರಿನಿಂದ ಸರಿ ಸುಮಾರು ೬೦೦ ಕಿ.ಮೀ. ಅಂತರದಲ್ಲಿರುವ ಕಲಬುರಗಿ ಮಹಾನಗರವು ರಾಜ್ಯ, ರಾಷ್ಟ್ರ ಮಟ್ಟದಲ್ಲಿ ತನ್ನದೇ ಛಾಪು ಮೂಡಿಸಿದೆ. ಹಿಂದು-ಮುಸ್ಲಿಂರ ಭಾವೈಕ್ಯತೆಯ ಕೇಂದ್ರವೆಂದೂ ಗುರುತಿಸಿಕೊಂಡಿದೆ. ಕಳೆದ ೨೦೧೬ ಮೇ ೨ರಂದು ಅಂದಿನ, ಈಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುಲಬರ್ಗಾ ಎಂಬ ಹೆಸರನ್ನು `ಕಲಬುರಗಿ’ ಎಂದು ಬದಲಾಯಿಸಿದರು.

ಭೀಮಾಶಂಕರ ಫಿರೋಜಾಬಾದ
ಕಲ್ಯಾಣ ಕರ್ನಾಟಕ ಭಾಗದ ಕೇಂದ್ರ ಸ್ಥಾನದಲ್ಲಿದೆ ಕಲಬುರಗಿ. ಜಿಲ್ಲಾ ಕೇಂದ್ರವೂ ಇದಾಗಿದೆ. ಇದನ್ನು ಗುಲ್ಬರ್ಗಾ, ಕಲ್ಬುರ್ಗಿ, ಕಲಬುರಗಿ ಎಂದೂ ಕರೆಯಲಾಗುತ್ತಿತ್ತು. ಈಗ ಅಧಿಕೃತವಾಗಿ ಕಲಬುರಗಿ' ಎಂದೇ ಕರೆಯಲಾಗುತ್ತಿದೆ. ಕಲಬುರಗಿ ಎಂಬುದರ ಬಗ್ಗೆ ಕನ್ನಡದಲ್ಲಿ ಕಲಾ-ಬುರಗಿ ಎಂದರೆ ಕಲ್ಲಿನ ಭೂಮಿ ಎಂದರ್ಥ. ಗುಲಬರ್ಗಾ ಎಂದರೆ ಹಿಂದಿ ಭಾಷೆಯಲ್ಲಿಗುಲಾಬ್’ ಗುಲಾಬಿ ಹೂವು-ಬರ್ಗ್. ಕಾಯಿ ಮತ್ತು ಕಲ್ಲುಗಳ ಊರು ಎಂದರ್ಥ ಸೂಚಿಸುತ್ತದೆ. ಹಿಂದಿ, ಉರ್ದು, ಕನ್ನಡ, ತೆಲುಗು, ಮರಾಠಿ ಮಿಶ್ರಿತ ಭಾಷೆಯಲ್ಲಿ ಮಾತನಾಡುವ ಬಹುಭಾಷಿಕರು ಕಲಬುರಗಿ ಜನ. ಆಂಧ್ರ, ತೆಲಂಗಾಣ ಮತ್ತು ಮಹಾರಾಷ್ಟç ರಾಜ್ಯಗಳ ಗಡಿರೇಖೆ ಹೊಂದಿರುವ ರಾಜ್ಯದ ಪ್ರಮುಖ ಕಂದಾಯ, ಆಡಳಿತಾತ್ಮಕ ಕೇಂದ್ರೀಕೃತ.
ಕಲಬುರಗಿಗೆ ಸುಮಾರು ೧,೬೦೦ ವರ್ಷಗಳ ಇತಿಹಾಸವಿದೆ. ಆರನೇ ಶತಮಾನದಲ್ಲಿ ಮಾನ್ಯಖೇಟದ ರಾಷ್ಟçಕೂಟ (ಮಳಖೇಡ) ಅರಸರ ಕಾಲದವರೆಗೆ ಕಲಬುರಗಿ ಚರಿತ್ರೆ ಬಗ್ಗೆ ಉಲ್ಲೇಖವಾಗಿದೆ. ನಂತರ ಚಾಲುಕ್ಯ ಸಾಮ್ರಾಜ್ಯದ ಕೆಳಗೆ ೨೦೦ ವರ್ಷಗಳವರೆಗೆ ಕಲಬುರಗಿ ಇದ್ದಿತು. ಚಾಲುಕ್ಯರ ನಂತರ ಹನ್ನೆರಡನೇ ಶತಮಾನದವರೆಗೆ ಕಲಬುರಗಿ ಕಳಚೂರಿ ಅರಸರ ನಿಯಂತ್ರಣದಲ್ಲಿತ್ತು.೧೨ನೇ ಶತಮಾನದಲ್ಲಿ ಬಸವಾದಿ ಶರಣರು ನಡೆದಾಡಿದ ಹೆಬ್ಬಾಗಿಲು, ಸಾಧು ಶರಣರು, ಸೂಫಿ ಸಂತರು, ಬೌದ್ಧ ಬಿಕ್ಕುಗಳು ಸರ್ವಧರ್ಮೀಯರ ಸಹಿಷ್ಣುತೆಯ ತವರೂರಾಗಿದೆ. ಕಲಬುರಗಿ ದೆಹಲಿಯ ಸುಲ್ತಾನರ ಕೈ ಸೇರಿತು. ೧೩೪೭ರಲ್ಲಿ ದೆಹಲಿಯ ಸಾಮಂತರು ದಂಗೆಯೆದ್ದು, ಅಲ್ಲಾವುದ್ದೀನ್ ಹಸನ್ ಗಂಗು ಬಹುಮನ್ ಶಾ ೧೯೪೭ರಲ್ಲಿ ಬಹಮನಿ ಸಾಮ್ರಾಜ್ಯವನ್ನು ಸ್ಥಾಪಿಸಿ ಕಲಬುರಗಿಯನ್ನು ರಾಜಧಾನಿಯನ್ನಾಗಿ ಮಾಡಿದ. ಬಹಮನಿ ಸುಲ್ತಾನರ ನಿಯಂತ್ರಣ ಕಡಿಮೆಯಾದಾಗ ಐದು ಬೇರೆ ಬೇರೆ ಬಹಮನಿ ಸಾಮ್ರಾಜ್ಯಗಳು ಸ್ಥಾಪಿತವಾಗಿ ಕಲಬುರಗಿ ಜಿಲ್ಲೆ ಭಾಗಶಃ ಬೀದರ್ ಮತ್ತು ಭಾಗಶಃ ಬಿಜಾಪುರ ಸಾಮ್ರಾಜ್ಯಗಳ ಭಾಗವಾಯಿತು. ೧೭ನೇ ಶತಮಾನದಲ್ಲಿ ಔರಂಗಜೇಬ್ ಮತ್ತೆ ಈ ಪ್ರದೇಶವನ್ನು ಗೆದ್ದು ಕಲಬುರಗಿ ಮತ್ತೊಮ್ಮೆ ಮುಘಲ್ ಸಾಮ್ರಾಜ್ಯದ ಭಾಗವಾಯಿತು. ೧೮ನೇ ಶತಮಾನದ ಆದಿಯಲ್ಲಿ ಮುಘಲ್ ಸಾಮ್ರಾಜ್ಯದ ಪ್ರಭಾವ ಕಡಿಮೆಯಾಗಿ ಅಸಫ್ ಜಾ ಎಂಬ ಔರಂಗಜೇಬನ ಸೇನಾಧಿಕಾರಿ ಹೈದರಾಬಾದ್ ಸಂಸ್ಥಾನವನ್ನು ಸ್ಥಾಪಿಸಿದನು. ಕಲಬುರಗಿ ಹೈದರಾಬಾದ್ ಸಂಸ್ಥಾನವನ್ನು ಸೇರಿತು. ೧೯೪೭ರಲ್ಲಿ ಭಾರತ ಸ್ವಾತಂತ್ರ‍್ಯ ಪಡೆದರೆ, ಬೀದರ್, ಕಲಬುರಗಿ ಮತ್ತು ರಾಯಚೂರಿನ ಜನರ ತೀವ್ರ ಹೋರಾಟದ ಫಲವಾಗಿ ೧೯೪೮ರ ಸೆಪ್ಟೆಂಬರ್‌ನಲ್ಲಿ ಹೈದರಾಬಾದ್ ಸಂಸ್ಥಾನವು ಭಾರತ ಗಣರಾಜ್ಯವನ್ನು ಸೇರಿತು. ೧೯೫೬ರಲ್ಲಿ ರಾಜ್ಯಗಳ ಭಾಷಾವಾರು ವಿಂಗಡಣೆಯಲ್ಲಿ ಕಲಬುರಗಿ ಜಿಲ್ಲೆಯ ಎರಡು ತಾಲೂಕುಗಳ ಹೊರತುಪಡಿಸಿ ಉಳಿದ ಪ್ರದೇಶವು ಎಲ್ಲ ಭೂಭಾಗ ಮೈಸೂರು ರಾಜ್ಯಕ್ಕೆ ಸೇರಿದವು.
ನಾಳೆ: ತುಮಕೂರು
ನೀವೂ ಬರೆಯಬಹುದು. ಲೇಖನಗಳನ್ನು email id –sknammuru@gmail.com ಗೆ ಕಳಿಸಿ.