ನೀರು ಬಿಡಲು ಆಗೋದಿಲ್ಲ…

Advertisement

ಕೋಲಾರ: ರೈತರ ಬೆಳೆ ಹಾಗೂ ಕುಡಿಯುವ ನೀರಿನ ಬಗ್ಗೆ ನಾವು ಬದ್ದವಾಗಿದ್ದೇವೆ ಎಂದು ಕೋಲಾರದಲ್ಲಿ ಕೃಷಿ ಸಚಿವ ಚಲುವನಾರಾಯಣಸ್ವಾಮಿ ಹೇಳಿದ್ದಾರೆ.
ಕಾವೇರಿ ವಿವಾದದ ಕುರಿತು ಮಾತನಾಡಿರುವ ಅವರು ಟೆಕ್ನಿಕಲ್ ಕಮಿಟಿ ಹಾಗೂ ಸುಪ್ರೀಂಕೋರ್ಟ್ ಆದೇಶ ನಮಗೆ ಪೂರಕವಾಗಿಲ್ಲ. ತಮಿಳುನಾಡು ಕೇಳಿದ್ದಕ್ಕಿಂತ ಕಡಿಮೆ ನೀರು ಬಿಡಲು ಸೂಚನೆ ಬಂದಿದೆ. ಆದ್ರೆ ನಮಗೆ ಇಲ್ಲಿ ಕುಡಿಯೋದಕ್ಕೆ ನೀರು ಇಲ್ಲ. ಮೊದಲಿನಿಂದಲೂ ಇದರ ಬಗ್ಗೆ ನಾವು ವಾದ ಮಾಡಿಕೊಂಡು ಬಂದಿದ್ದೇವೆ. ನಮ್ಮ ಕಾನೂನು ಹಾಗೂ ತಜ್ಞರ ತಂಡ ಹೆಚ್ಚಿಗೆ ಪ್ರಯತ್ನ ಮಾಡಿದೆ. ಇಷ್ಟೆಲ್ಲಾ ಇದ್ರು ಮತ್ತೆ 3 ಸಾವಿರ ಕ್ಯೂಸೆಕ್ ಹರಿಸೋಕೆ ಸೂಚಿಸಿರೋದು ತೊಂದರೆ ಆಗಿದೆ. ನಿವೃತ್ತ ಅಡ್ವೊಕೇಟ್ ಜನರಲ್ ಹಾಗೂ ನ್ಯಾಯಾಧೀಶರ ಜೊತೆ ಸಿಎಂ ಚರ್ಚೆ ಮಾಡಿದ್ದಾರೆ. ಮೇಕೆದಾಟು ಬಗ್ಗೆ ನಾವು ತೀರ್ಮಾನ ಮಾಡಿದ್ದೇವೆ. ನೀರು ಬಿಡಲು ಆಗೋದಿಲ್ಲ ಎಂದು ಅರ್ಜಿ ಸಲ್ಲಿಸಲು ತೀರ್ಮಾನ ಮಾಡಿದ್ದೇವೆ. ನಾವು ಇವತ್ತೇ ಈ ಕುರಿತು ಮೇಲ್ಮನವಿ ಸಲ್ಲಿಸುತ್ತೇವೆ. ಕೇಂದ್ರ ಸರ್ಕಾರ ಮಧ್ಯಪ್ರವೇಶ ಮಾಡುವ ಹಕ್ಕಿದೆ. ತಮಿಳುನಾಡು ಹಾಗೂ ಕರ್ನಾಟಕದವರನ್ನು ಕರೆದು ಕೇಂದ್ರ ಸರ್ಕಾರ ಚರ್ಚೆ ಮಾಡಬೇಕು. ಚರ್ಚಿಸಿ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ರೆ ನಮಗೆ ಅನುಕೂಲ ಆಗುತ್ತೆ. ಇತಿಮಿತಿಯಲ್ಲಿ ರಾಜ್ಯ ಸರ್ಕಾರ ಕೆಲಸ ಮಾಡ್ತಿದೆ.
ರೈತರ ಬೆಳೆ ಹಾಗೂ ಕುಡಿಯುವ ನೀರಿನ ಬಗ್ಗೆ ನಾವು ಬದ್ದವಾಗಿದ್ದೇವೆ. ನೀರು ಬಿಡಲು ಆಗೋದಿಲ್ಲ ಎಂದು ನಾವು ಇವತ್ತೇ ಮೇಲ್ಮನವಿ ಸಲ್ಲಿಸುತ್ತೇವೆ ಎಂದರು.
ಎಲ್ಲದರಲ್ಲೂ ಸಮಾನತೆ ಇದೆ:
ಲಿಂಗಾಯತ ಅಧಿಕಾರಿಗಳಿಗೆ ಅನ್ಯಾಯ ಎಂದು ಶಾಮನೂರು ಶಿವಶಂಕರಪ್ಪ ಹೇಳಿಕೆ ಕುರಿತು ಮಾತನಾಡಿರುವ ಅವರು ಶಾಮನೂರು ಶಿವಶಂಕರಪ್ಪನವರು ಹಿರಿಯರು, ಯಾವ ಉದ್ದೇಶದಿಂದ ಹೇಳಿದ್ದಾರೆ ಗೊತ್ತಿಲ್ಲ. ಕಾಂಗ್ರೆಸ್‌ನಲ್ಲಿ ಮಾತ್ರ ಎಲ್ಲರಿಗೂ ಸಮಾನತೆ ಸಿಗಲಿದೆ. ಮಂತ್ರಿ ಮಂಡಲ ಸೇರಿದಂತೆ ಎಲ್ಲದರಲ್ಲೂ ಸಮಾನತೆ ಇದೆ. ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಸಮುದಾಯಕ್ಕೂ ಅನ್ಯಾಯ ಆಗಿಲ್ಲ. ಅಧಿಕಾರಿಗಳನ್ನು ಜಾತಿ ನೋಡಿ ಮಾಡೋಕೆ ಆಗಲ್ಲ. ಅಧಿಕಾರಿಗಳ ಅರ್ಹತೆ ಹಾಗೂ ಆಸಕ್ತಿ ನೋಡಿ ಕೆಲಸ ಕೊಡಲಾಗುತ್ತೆ, ಜಾತಿ ನೋಡಿ ಮಾಡಲ್ಲ. ಎಲ್ಲಾ ಸಮುದಾಯದವರಿಗೆ ಅವಕಾಶ ನೀಡೋದು ತಪ್ಪಲ್ಲ, ಅಧಿಕಾರಿಗಳನ್ನು ಜಾತಿ ನೋಡಿ ಮಾಡೋದು ಸೂಕ್ತವಲ್ಲ. ಅಧಿಕಾರಿಗಳನ್ನು ಸಿಎಂ ಕಡೆಗಣಿಸಿಲ್ಲ. ಆ ರೀತಿ ಇದ್ರೆ ಶಾಮನೂರು ಶಿವಶಂಕರಪ್ಪನವರು ಸಿಎಂ ಜೊತೆ ಮಾತಾಡಲಿ. ಸಿಎಂ ಎಲ್ಲರಿಗೂ ವರ್ಗಾವಣೆ ವಿಚಾರದಲ್ಲಿ ಅವಕಾಶ ನೀಡಿದ್ದಾರೆ ಎಂದರು.