ಭದ್ರತೆಯ ಕುರಿತು ಉಡಾಫೆಯ ಉತ್ತರ

ನಳಿನ್‌ಕುಮಾರ್ ಕಟೀಲ್
Advertisement

ಬೆಂಗಳೂರು: ಶಿವಮೊಗ್ಗ ಗಲಭೆಯಲ್ಲಿ ಭದ್ರತೆಯ ಕುರಿತು ಉಡಾಫೆಯ ಉತ್ತರ ನೀಡುತ್ತಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಕಿಡಿಕಾರಿದ್ದಾರೆ.
ಗೃಹ ಸಚಿವ ಪರಮೇಶ್ವರ್ ಅವರ ಹೇಳಿಕೆ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ವೊಂದನ್ನು ಹಾಕಿರುವ ಅವರು “ಶಿವಮೊಗ್ಗದಲ್ಲಿ ಹಿಂದೆ ಗಲಭೆ ನಡೆಸಿದ ಪಿಎಫ್ಐ ಗೂಂಡಾಗಳನ್ನೆಲ್ಲ ಬಿಡುಗಡೆಗೊಳಿಸಿದ್ದೇ ಅಂದಿನ ಕಾಂಗ್ರೆಸ್ ಸರ್ಕಾರ.
ಶಿವಮೊಗ್ಗದಲ್ಲಿ ಹಿಂದೂಗಳ ಮಾರಣಹೋಮ ನಡೆಸಿದ ಔರಂಗಜೇಬ ಹಾಗೂ ಟಿಪ್ಪುವಿನ ಕಟೌಟ್, ಕತ್ತಿಗಳು ಬಂದಾಗಲೇ ಪೊಲೀಸರು, ಸರ್ಕಾರ ಎಚ್ಚೆತ್ತು ತೆರವು ಮಾಡಿದ್ದರೆ ಗಲಭೆ ನಡೆಯಲು ಸಾಧ್ಯವೇ ಇರಲಿಲ್ಲ.
ಇದು ಸರ್ಕಾರದ ವೈಫಲ್ಯ. ಪೋಲೀಸರ ಮೇಲೆ ಕಲ್ಲು ತೂರಿದ ಗಲಭೆಕೋರರನ್ನು ವಹಿಸಿಕೊಂಡು, ‘ಸಣ್ಣ ಘಟನೆ.. ಇದೆಲ್ಲ ಏನು ಹೊಸದೇ? ಏನಾದರೂ ಆಗಬಹುದು ಎಂದು ತಿಳಿದಿತ್ತು..” ಎಂದು ಹೇಳುವ ಮೂಲಕ ಮೂಲಭೂತವಾದಿಗಳ ಪರ ನಿಂತು ಭದ್ರತೆಯ ಕುರಿತು ಉಡಾಫೆಯ ಉತ್ತರ ನೀಡುತ್ತಾರೆ ಗೃಹ ಸಚಿವ ಪರಮೇಶ್ವರ್. ಈ ಜಿಹಾದಿ ಸರ್ಕಾರದಿಂದ ಮತ್ತೇನನ್ನು ನಿರೀಕ್ಷಿಸಲು ಸಾಧ್ಯ!” ಎಂದಿದ್ದಾರೆ.