ಬೆಂಗಳೂರು: ಸಲ್ಮಾನ್ ಖಾನ್ ನಟನೆಯ ಟೈಗರ್ 3 ಸಿನಿಮಾದ ಟ್ರೈಲರ್ ಇದೇ ಅಕ್ಟೋಬರ್ 16ರಂದು ಬಿಡುಗಡೆಗೊಳ್ಳಲಿದೆ. ಯಶ್ ರಾಜ್ ಫಿಲ್ಮ್ಸ್ ಪ್ರೊಡಕ್ಷನ್ ಹೌಸ್ ಕೂಡ ಸಲ್ಮಾನ್ ಖಾನ್ ಅವರ ಹೊಸ ಪೋಸ್ಟರ್ ಹಂಚಿಕೊಂಡಿದೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಯಶ್ ರಾಜ್ ಫಿಲ್ಮ್ಸ್ ಸಲ್ಮಾನ್ ಖಾನ್ ಮತ್ತು ಕತ್ರಿನಾ ಕೈಫ್ ಅವರ ‘ಟೈಗರ್ 3’ ಟೀಸರ್ ಸೆಪ್ಟೆಂಬರ್ 27 ರಂದು ಅನಾವರಣಗೊಳಿಸಲಾಯಿತು. ಅಕ್ಟೋಬರ್ 16 ರಂದು ಎಂದಿಗಿಂತಲೂ ಜೋರಾಗಿ ಗರ್ಜಿಸಲಿದೆ ಟೈಗರ್ 3.ಈ ದೀಪಾವಳಿಯಲ್ಲಿ ಚಿತ್ರಮಂದಿರಗಳಿಗೆ ಆಗಮಿಸುತ್ತಿದೆ. ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆʼʼ ಎಂದಿದೆ.