8ರಂದು ಹಿಂದು ಮಹಾಗಣಪತಿ ವಿಸರ್ಜನೆ

Advertisement

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಹಿಂದು ಮಹಾಗಣಪತಿ ಉತ್ಸವ ಮಂಡಳಿ ನವನಗರ, ಅಪ್ಪಾಜಿ ಸೇವಾ ಟ್ರಸ್ಟ್ ಹಾಗೂ ನವಶಕ್ತಿ ಮಹಿಳಾ ಮಂಡಳ ಆಶ್ರಯದಲ್ಲಿ ೨೧ ದಿನಗಳ ಕಾಲ ಪ್ರತಿಷ್ಠಾಪನೆ ಮಾಡಲಾದ ಹಿಂದು ಮಹಾಗಣಪತಿ ವಿಸರ್ಜನೆ ಅ. ೮ರಂದು ಮಧ್ಯಾಹ್ನ ೧೨ಕ್ಕೆ ನಡೆಯಲಿದೆ ಎಂದು ಉತ್ಸವ ಮಂಡಳಿ ಅಧ್ಯಕ್ಷ ವಿಜಯಕುಮಾರ ಅಪ್ಪಾಜಿ ಹೇಳಿದರು.
ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅ. ೭ರಂದು ಸಂಜೆ ೬.೩೦ಕ್ಕೆ ೨೧ ದಿನಗಳ ಕಾಲ ಗಣೇಶೋತ್ಸವಕ್ಕೆ ಸಹಕಾರ ನೀಡಿದ ದಾನಿಗಳನ್ನು ಸನ್ಮಾನಿಸಲಾಗುವುದು. ಅಂದು ಸಂಜೆ ೭ಕ್ಕೆ ಕನ್ನಡ ಚಲನಚಿತ್ರ ರಂಗದ ಜನಪ್ರಿಯ ಚಿತ್ರಗೀತೆಗಳ, ಸಂಭಾಷಣೆಗಳ ರಸಮಂಜರಿ ಕಾರ್ಯಕ್ರಮ ನಡೆಯಲಿದೆ ಎಂದರು.
ಕಾರ್ಯಕ್ರಮವನ್ನು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಉದ್ಘಾಟಿಸುವರು. ಅತಿಥಿಗಳಾಗಿ ಶಾಸಕರಾದ ಅರವಿಂದ ಬೆಲ್ಲದ, ಮಹೇಶ ಟೆಂಗಿನಕಾಯಿ, ಬಿಜೆಪಿ ಮುಖಂಡರಾದ ಡಾ. ಕ್ರಾಂತಿಕಿರಣ, ಕಾಂಗ್ರೆಸ್ ಮುಖಂಡರಾದ ದೇವಕಿ ಯೋಗಾನಂದ, ಉತ್ತರ ಕರ್ನಾಟಕ ಜನಶಕ್ತಿ ಸೇನಾ ಅಧ್ಯಕ್ಷ ಎಸ್.ಎಸ್. ಶಂಕರಣ್ಣ, ಪಂಚಾಕ್ಷರಿನಗರ ನಿವಾಸಿಗಳ ಅಭಿವೃದ್ಧಿ ಸಂಘದ ಅಧ್ಯಕ್ಷ ಹನುಮಂತಪ್ಪ ಹುದ್ದಾರ ಪಾಲ್ಗೊಳ್ಳುವರು ಎಂದರು.
ಅ. ೮ರಂದು ಬೆಳಿಗ್ಗೆ ೧೦ಕ್ಕೆ ಗಣೇಶ ಮೂರ್ತಿಗೆ ಹಾಕಲಾದ ವಸ್ತುಗಳ ಸವಾಲ್ ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನ ೧೨ಕ್ಕೆ ಗಣೇಶ ಮೂರ್ತಿ ಮೆರವಣಿಗೆ ಮೂಲಕ ಶಾಂತಿನಿಕೇತನ ಬಡಾವಣೆ ಬಾವಿಯಲ್ಲಿ ವಿಸರ್ಜನೆಗೊಳ್ಳಲಿದೆ ಎಂದರು.