ತುಷ್ಟೀಕರಣ ರಾಜಕಾರಣರಿದಿಂದ ಮತಾಂಧ ಶಕ್ತಿಗಳಿಗೆ ರಕ್ಷಣೆ

Advertisement

ಹುಬ್ಬಳ್ಳಿ: ಶಿವಮೊಗ್ಗ ಗಲಾಟೆ ವಿಚಾರ ರಾಜ್ಯ ಸರ್ಕಾರದ ತುಷ್ಠೀಕರಣ ರಾಜಕಾರಣದ ಪರಮಾವಧಿ. ಈ ಗಲಾಟೆಯನ್ನ ರಾಜ್ಯ ಸರ್ಕಾರ ಇನ್ನೂ ಗಂಭೀರವಾಗಿ ತೆಗೆದುಕೊಂಡಿಲ್ಲ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದೂಗಳ ಮೇಲೆ ಹಲ್ಲೆ ಮಾಡಿದ್ದಾರೆ. ಇದು ತುಷ್ಟೀಕರಣ ರಾಜಕಾರಣರಿದಿಂದ ಮತಾಂಧ ಶಕ್ತಿಗಳಿಗೆ ರಕ್ಷಣೆ ಇದೆ ಅನ್ನೋ ಮನೋಭಾವನೆ ಇದೆ. ಕಾಂಗ್ರೆಸ್ ಸರ್ಕಾರದಿಂದ ನಮಗೆ ರಕ್ಷಣೆ ಇದೆ ಅನ್ನೋ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಇಂತಹ ಘಟನೆಗಳು ನಡೆಯುತ್ತಿವೆ ಎಂದರು.
ಹಳೇ ಹುಬ್ಬಳ್ಳಿ ವಿಚಾರದಲ್ಲೂ ಪೊಲೀಸರು ಕಟ್ಟು ನಿಟ್ಟಿನ ಕ್ರಮ ತೆಗೆದುಕೊಳ್ಳದಿದ್ದರೆ ಪೊಲೀಸರು ಮತ್ತು ಜನರ ಹತ್ಯೆಯಾಗುತ್ತಿತ್ತು. ಹಳೇ ಹುಬ್ಬಳ್ಳಿ ಗಲಾಟೆ ವಿಚಾರದಲ್ಲೂ ಸಾಕಷ್ಟು ಗಲಭೆ ದೊಂಬಿ ನಡೆದಿದೆ. ಆದರೆ ಇಂತಹ ಗಲಭೆ ನಡೆಸಿದವರ ಕೇಸ್ ವಾಪಸ್ ತೆಗೆದುಕೊಳ್ಳಲು ಸರ್ಕಾರ ಮುಂದಾಗುತ್ತಿದೆ. ತುಷ್ಠೀಕರಣ ರಾಜಕಾರಣದ ಪರಾಕಾಷ್ಠೆಯನ್ನು ಕಾಂಗ್ರೆಸ್ ತಲುಪಿದೆ. ಕಾಂಗ್ರೆಸ್‌ಗೆ ಅಲ್ಪಸಂಖ್ಯಾತರು ಮತ ಹಾಕಿಲ್ಲ ಎನ್ನುವುದು ನೆನಪಿನಲ್ಲಿಟ್ಟುಕೊಳ್ಳಿ ಎಂದರು.
ದೇಶದ್ರೋಹಿಗಳ, ಗಲಭೆಕೋರರ ಪರ ನಿಲ್ಲೋದನ್ನ‌ ನಾವು ತೀವ್ರವಾಗಿ ಖಂಡಿಸುತ್ತೇವೆ. ಪಾಕಿಸ್ತಾನ್ ಜಿಂದಾಬಾದ್ ಅಂತ ಘೋಷಣೆ ಕೂಗುವವರನ್ನ, ತಲ್ವಾರ್ ಹಿಡಿದು ಬೆದರಿಕೆ ಹಾಕೋರನ್ನ ರಕ್ಷಣೆ ಮಾಡಲು ಹೊರಟಿದ್ದಾರೆ. ಪಾಕಿಸ್ತಾನಿ ಭಯೋತ್ಪಾದಕರ ಪರವಾಗಿ ನಿಲ್ಲೋಕೆ ಜನ ನಿಮಗೆ ಅಧಿಕಾರ ಕೊಟ್ಟಿಲ್ಲ. ಕಾಂಗ್ರೆಸ್ ಸರ್ಕಾರಕ್ಕೆ ನಾಚಿಕೆಯಾಗಬೇಕು‌ ಇದು ನಡೆಯಲ್ಲ‌. ಈ ಬಗ್ಗೆ ನಾವು ತೀವ್ರ ಹೋರಾಟ ನಡೆಸುತ್ತೇವೆ ಕಾಂಗ್ರೆಸ್ಸಿಗರು ಎಚ್ಚರಿಕೆಯಿಂದಿರಬೇಕು ಎಂದರು.
ಕಾಂಗ್ರೆಸ್‌ನಲ್ಲಿ ಲಿಂಗಾಯತ ಲಡಾಯಿ ವಿಚಾರ ಕಾಂಗ್ರೆಸ್ ಸರ್ಕಾರದಲ್ಲಿ ಜಾತಿ ಜಾತಿಗಳ ನಡುವೆ ಒಡೆದಾಳುವ ನೀತಿ ಇದೆ. ಈ‌ ಬಗ್ಗೆ ಶಾಮನೂರು ಶಿವಶಂಕರಪ್ಪ‌ ಅವರೇ ಸ್ಪಷ್ಟಪಡಿಸಿದ್ದಾರೆ ನಾವೇನೂ ಜಾಸ್ತಿ ಹೇಳಲ್ಲ ಎಂದರು.
ಪಿಎಫ್‌ಐ ಗೆ ಬೆಂಬಲ‌ ಸೂಚಿಸುವುದು ಕಾಂಗ್ರೆಸ್‌ನ ಪಾಲಿಸಿಯಾಗಿದೆ. ಪಿಎಫ್‌ಐ ಸೇರಿದಂತೆ ದೇಶದ್ರೋಹಿಗಳಿಗೆ ಪ್ರೋತ್ಸಾಹ ನೀಡುವಂತ ಪಕ್ಷವಾಗಿ ಕಾಂಗ್ರೆಸ್ ಪರಿವರ್ತನೆ ಹೊಂದುತ್ತಿದೆ.
ಧಾರವಾಡ ಜಿಲ್ಲೆಗೆ ಉಗ್ರರ ನಂಟು ವಿಚಾರ ಈ ವಿಚಾರದಲ್ಲಿ ಗೃಹ ಇಲಾಖೆ ದೆಹಲಿ ಪೊಲೀಸರ ಜೊತೆ ಸಂಪರ್ಕ‌ ಮಾಡುವ ಮೂಲಕ ಸೂಕ್ತ ತನಿಖೆ ನಡೆಸಬೇಕು. ಕಾಂಗ್ರೆಸ್ ಸರ್ಕಾರ ಈ ರೀತಿ ದೇಶದ್ರೋಹಿ ಕೆಲಸ ಮಾಡುವವರ ಪ್ರಕರಣ ಹಿಂತೆಗೆದುಕೊಂಡರೆ ಈ ರೀತಿ ಉಗ್ರರ ತಾಣವಾಗೋದು‌ ಸಹಜ ಎಂದರು.